ಬ್ರೇಕಿಂಗ್ ನ್ಯೂಸ್
31-10-20 08:16 pm Mangalore Reporter ಕರಾವಳಿ
ಮಂಗಳೂರು, ಅಕ್ಟೋಬರ್ 31: ಈ ಸರಕಾರ, ಸರಕಾರದ ಅಂಗ ಸಂಸ್ಥೆಗಳು ಬಡವರ ಹೊಟ್ಟೆಗೆ ಹೊಡೆಯೋದಕ್ಕೇ ಇರೋದೇನೊ ಅನಿಸತ್ತೆ. ಯಾಕಂದ್ರೆ, ದಿನಕ್ಕೊಂದು ಸಂಸ್ಥೆಯನ್ನು ಖಾಸಗಿ ಪಾಲು ಮಾಡೋದು, ಇಲ್ಲಾ ನಷ್ಟ ಅಂತ ನಿಲ್ಲಿಸೋದು ನೋಡಿದರೆ ಇಂಥ ಮಾತು ಬರದೇ ಇರಲ್ಲ. ಮಂಗಳೂರು ಯುನಿವರ್ಸಿಟಿಗೆ ಎಷ್ಟೆಲ್ಲಾ ಫಂಡ್ ಬರುತ್ತೆ ಅಂತ ಲೆಕ್ಕ ಕೊಡಬೇಕಿಲ್ಲ. ಲಕ್ಷ ಎಣಿಸೋ ಪ್ರೊಫೆಸರ್ ಮಹಾಶಯರ ಆಡಳಿತವಂತೂ ಇದೆ.. ಎಲ್ಲ ಇದ್ದರೂ ಇನ್ನೂ ಬೇಕು ಅನ್ನೋರೇ ಅಲ್ಲಿ ಜಾಸ್ತಿ ಆಗಿದ್ದಾರೆ. ಈಗ ಬಡ ಮಕ್ಕಳ ಪಾಲಿಗೆ ಆಸರೆಯಾಗಿದ್ದ ಬಿಪಿಎಡ್ ಕೋರ್ಸನ್ನು ನಿಲ್ಲಿಸುತ್ತಿದ್ದಾರೆಂಬ ಸುದ್ದಿ ಬಂದಿದೆ.
ಹೌದು... ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ 17 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಬಿಪಿಎಡ್ (ದೈಹಿಕ ಶಿಕ್ಷಣ) ಕೋರ್ಸ್ ಅನ್ನು ಎನ್ ಸಿಟಿಇ ಮಾನದಂಡಗಳನ್ನು ಪಾಲಿಸಿಲ್ಲ ಎಂಬ ನೆಪವೊಡ್ಡಿ ಸ್ಥಗಿತಗೊಳಿಸಲು ವಿವಿ ಅಧಿಕಾರಿಗಳು ಮುಂದಾಗಿದ್ದಾರಂತೆ. ಈ ಬಗ್ಗೆ ಅಲ್ಲಿನ ಸ್ಥಿತಿಗತಿ ಗೊತ್ತಿರುವವರಲ್ಲಿ ಕೇಳಿದರೆ, ಅಗತ್ಯ ಫ್ಯಾಕಲ್ಟಿಯನ್ನೇ ಮಾಡಿಕೊಂಡಿಲ್ಲ ಅಂತಾರೆ. ಕಳೆದ 2018ರಲ್ಲಿ ಹೀಗೇ ಬಿಪಿ ಎಡ್ ಕೋರ್ಸನ್ನು ನಿಲ್ಲಿಸಲಾಗಿತ್ತು. ಎಂಪಿ, ಎಂಎಲ್ಎ ಎಲ್ಲರ ಕೈಕಾಲು ಹಿಡಿದು ಅಭಿಯಾನ ನಡೆಸಿ, ಆನಂತ್ರ ಮತ್ತೆ ಮುಂದುವರಿಸಲಾಗಿತ್ತು. 2019ರಲ್ಲಿ ಮತ್ತೆ ಆರಂಭಗೊಂಡಿದ್ದು 50ರಷ್ಟು ವಿದ್ಯಾರ್ಥಿಗಳಿದ್ದಾರೆ. ಆವತ್ತು ಹೇಗಿತ್ತೋ, ಈಗಲೂ ಹಾಗೇ ಇದೆ.. ಗೆಸ್ಟ್ ಫ್ಯಾಕಲ್ಟಿ ಅಂತ ತಗೊಂಡು ಅಗತ್ಯ ಮಾನದಂಡಗಳನ್ನು ಪಾಲನೆ ಮಾಡಲೇನು ಅಡ್ಡಿ ಅಂತಾರೆ.
ಮಂಗಳೂರು ವಿವಿಯಲ್ಲಿ ಬಿಪಿ ಎಡ್ ಮಾಡೋದಾದ್ರೆ 25 ಸಾವಿರ ರೂಪಾಯಿಗೆ ಆಗತ್ತೆ. ಅದೇ ಖಾಸಗಿ ಕಾಲೇಜಿಗೆ ಹೋದರೆ 2-3 ಲಕ್ಷ ಬೇಕಾಗತ್ತೆ. ಮಂಗಳೂರು ವಿವಿಯಲ್ಲಿರೋ ಅಧಿಕಾರಿಗಳು ಮನಸ್ಸು ಮಾಡಿದರೆ, ಗೆಸ್ಟ್ ಫ್ಯಾಕಲ್ಟಿ ಮಾಡಿಕೊಂಡು ಕೋರ್ಸ್ ಉಳಿಸ್ಕೋಬಹುದು. ಪ್ರತಿ ಬಾರಿ 40-50 ಸ್ಟೂಡೆಂಟ್ಸ್ ಬರುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಹೀಗೆ ಕರಾವಳಿ ಭಾಗದ ಬಡ ಮಕ್ಕಳು ಸುಲಭದಲ್ಲಿ ಕೋರ್ಸ್ ಮಾಡಬೇಕಂದ್ರೆ ಇದನ್ನೇ ಆಯ್ಕೆ ಮಾಡಿಕೊಳ್ತಾರೆ. ಬಿಪಿಎಡ್, ಎಂಪಿಎಡ್ ಮಾಡಿದರೆ ಖಾಸಗಿ ಕಾಲೇಜು, ಶಾಲೆಗಳಲ್ಲಿ ಪಿಟಿ ಮಾಸ್ಟ್ರು ಕೆಲಸ ಸಿಗುತ್ತೆ ಎಂದು ನಂಬ್ಕೊಂಡು ಬರುತ್ತಾರೆ. ಇಲ್ಲಿ ಕಲಿತು ಹೋದವರಿಗೆ ಇಡೀ ರಾಜ್ಯದಲ್ಲಿ ಮಾನ್ಯತೆಯೂ ಇದ್ದು, ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ.
ಲಾಬಿಗೆ ಮಣಿದರೇ ವಿವಿ ಅಧಿಕಾರಿಗಳು ?
ಕೆಲವರ ಮಾಹಿತಿ ಪ್ರಕಾರ, ಬಿಪಿಎಡ್ ಕೋರ್ಸ್ ಸ್ಥಗಿತಗೊಳಿಸುವುದರ ಹಿಂದೆ ಖಾಸಗಿ ಕಾಲೇಜುಗಳ ಲಾಬಿ ಇದೆಯಂತೆ. ಮಂಗಳೂರು ವಿವಿಯಲ್ಲಿ ಹೊರತುಪಡಿಸಿದರೆ ಖಾಸಗಿಯಾಗಿ ಮಂಗಳೂರಿನಲ್ಲಿ ಒಂದು ಕಾಲೇಜಿನಲ್ಲಿ ಮಾತ್ರ ಆ ಕೋರ್ಸ್ ಇರುವುದು. ಅದು ಮೂಡುಬಿದ್ರೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಮಾತ್ರ. ಆ ಕೋರ್ಸಿಗೆ ಲಕ್ಷಾಂತರ ರೂ. ಕೊಡುವಷ್ಟು ಬೇಡಿಕೆ ಇರುವಾಗ ಜುಜುಬಿ 25 ಸಾವಿರದ ಕೋರ್ಸನ್ನು ನಿಲ್ಲಿಸಲು ಮಂಗಳೂರು ವಿವಿಯ ಅಧಿಕಾರಿಗಳು ಮುಂದಾಗುತ್ತಿದ್ದಾರೆಯೇ ಅನ್ನುವ ಅನುಮಾನವನ್ನು ಅಲ್ಲಿನ ವಿದ್ಯಾರ್ಥಿಗಳು ಮುಂದಿಡುತ್ತಿದ್ದಾರೆ.
ಕ್ರೀಡಾಪ್ರೇಮಿಗಳಿಂದ ಮತ್ತೆ ಅಭಿಯಾನ
ಇದೇನೇ ಇದ್ದರೂ, ಕರಾವಳಿಯ ಕ್ರೀಡಾಪಟುಗಳು ಮತ್ತು ಕ್ರೀಡಾ ಪ್ರೇಮಿಗಳು ಮಂಗಳೂರು ವಿವಿಯಲ್ಲಿ ಬಿಪಿಎಡ್ ಕೋರ್ಸ್ ಉಳಿಸಿಕೊಳ್ಳಲೇಬೇಕೆಂದು ಅಭಿಯಾನ ಆರಂಭಿಸಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಕ್ರೀಡೆಯಲ್ಲಿ ಸಾಧನೆಗೈದವರಿಗೂ ಪ್ರೋತ್ಸಾಹ ಇಲ್ಲ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದರೂ ಉದ್ಯೋಗ ಕೊಡಿಸಲು ಆಡಳಿತಕ್ಕೆ ಔದಾರ್ಯ ಇಲ್ಲ. ಇಂಥದ್ರಲ್ಲಿ ಕೆಲವು ಕ್ರೀಡಾಪಟುಗಳು ಸುಲಭದಲ್ಲಿ ಬಿಪಿಎಡ್ ಕೋರ್ಸ್ ಮಾಡಿ, ದೈಹಿಕ ಶಿಕ್ಷಕರಾಗಲು ಪ್ರಯತ್ನಿಸುತ್ತಿದ್ದರು. ಈಗ ಅದಕ್ಕೂ ಕಲ್ಲು ಹಾಕುವ ಕೆಲಸಗಳಾಗುತ್ತಿವೆ.
ಈ ಬಗ್ಗೆ ಕ್ರೀಡೆಗೆ ಸಂಬಂಧಪಟ್ಟ ಕರಾವಳಿಯ ಸಾವಿರಕ್ಕೂ ಹೆಚ್ಚು ಸಂಘ –ಸಂಸ್ಥೆಗಳು ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲು ತಯಾರಿ ನಡೆಸುತ್ತಿದ್ದೇವೆ. ಇದಕ್ಕೂ ಮುನ್ನ ಮಂಗಳೂರು ವಿವಿ ಕುಲಪತಿ, ರಾಜ್ಯ ಸರಕಾರಕ್ಕೆ ಕೋರ್ಸ್ ಉಳಿಸಿಕೊಳ್ಳಲು ಮನವಿ ಸಲ್ಲಿಸುತ್ತಿದ್ದೇವೆ ಎಂದು ಹಿರಿಯ ಕಬಡ್ಡಿ ಕೋಚ್ ಗೋಪಿನಾಥ್ ಕಾಪಿಕಾಡ್ ಹೇಳುತ್ತಾರೆ.
Sources have disclosed that Mangalore University is trying all ways to close BPED courses. Students of sports rage anger towards it.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm