ಬ್ರೇಕಿಂಗ್ ನ್ಯೂಸ್
25-06-23 08:17 pm Mangalore Correspondent ಕರಾವಳಿ
ಮಂಗಳೂರು, ಜೂನ್ 25: ಪೊಲೀಸರು ಆರಕ್ಷಕರು ಅಂದ್ರೆ, ಸಮಾಜದಲ್ಲಿ ಗೌರವ, ಘನತೆಯ ಸ್ಥಾನ. ಸಮಾಜದ ರಕ್ಷಣೆ ಹೊತ್ತವರು ಅನ್ನುವ ಕಾರಣಕ್ಕೆ ಅವರನ್ನು ಆರಕ್ಷಕರು ಎಂದೇ ಕರೆಯುತ್ತಾರೆ. ಆದರೆ ಇಂಥ ಘನತೆ, ಗೌರವ ಹೊತ್ತುಕೊಂಡಿರುವ ಪೊಲೀಸರೇ ಡ್ರೈನೇಜ್ ಕ್ಲೀನ್ ಮಾಡಿದರೆ ಹೇಗಿರುತ್ತೆ. ಮೇಲಧಿಕಾರಿಗಳೇ ಅವರನ್ನು ತಮ್ಮ ವಸತಿ ಗೃಹಗಳ ಸಂಕೀರ್ಣದಲ್ಲಿ ಮಲ ಎತ್ತುವ ಕೆಲಸಕ್ಕೆ ದೂಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಮಂಗಳೂರು ಹೊರವಲಯದ ಕೊಣಾಜೆ ಬಳಿಯ ಅಸೈಗೋಳಿಯಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಏಳನೇ ಬೆಟಾಲಿಯನ್ ಸಿಬಂದಿಯ ಕ್ವಾಟ್ರಸ್ ಇದೆ. ಅಲ್ಲಿ 300ರಷ್ಟು ಸಿಬಂದಿಯಿದ್ದು, ಎಲ್ಲರೂ ಒಂದೇ ಕಡೆ ವಸತಿ ಗೃಹಗಳ ಸಂಕೀರ್ಣ ಹೊಂದಿದ್ದಾರೆ. ತುರ್ತು ಸಂದರ್ಭಗಳಲ್ಲಿ ಇವರನ್ನು ಕರ್ತವ್ಯಕ್ಕೆ ಇಳಿಸುವುದು ಬಿಟ್ಟರೆ, ಉಳಿದ ವೇಳೆ ಇವರಿಗೆ ಅಷ್ಟೇನೂ ಕೆಲಸ ಇರುವುದಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ಇಡುವುದಕ್ಕೆ ಒಂದಷ್ಟು ಸಿಬಂದಿಯನ್ನು ದಿನವಹಿ ಬಳಕೆ ಮಾಡುತ್ತಾರೆ. ಆದರೆ ಅಲ್ಲಿನ ಸಿಬಂದಿಗೆ ಕೆಲಸ ಇಲ್ಲವೆಂದೋ ಏನೋ, ಮೇಲಧಿಕಾರಿಗಳು ಪೊಲೀಸರ ಕ್ವಾಟ್ರಸ್ನಲ್ಲಿ ಬ್ಲಾಕ್ ಆಗಿದ್ದ ಡ್ರೈನೇಜ್ ಗುಂಡಿಯನ್ನು ಕ್ಲೀನ್ ಮಾಡೋಕೆ ಕೆಳಹಂತದ ಪೊಲೀಸರನ್ನು ಬಳಸ್ಕೊಂಡಿದ್ದಾರೆ.
ಕೆಎಸ್ ಆರ್ ಪಿ ಸೇರಿ ಪೊಲೀಸ್ ಇಲಾಖೆಯಲ್ಲಿ ಕೆಳ ಹಂತದ ಸಿಬಂದಿಗೆ ಹಿಂದಿನಿಂದಲೂ ಕಿರುಕುಳದ ಆರೋಪ ಇದೆ. ಮೇಲಧಿಕಾರಿಗಳು ತಮ್ಮ ಖಾಸಗಿ ಕೆಲಸಕ್ಕೆ ಕೆಳಹಂತದ ಸಿಬಂದಿಯನ್ನು ಬಳಕೆ ಮಾಡುವುದು, ಅವರ ಮನೆಯಲ್ಲಿ ಸಿಬಂದಿಯನ್ನು ದುಡಿಸುವುದು ಇತ್ಯಾದಿ ಕೆಲಸ ಮಾಡಿಸುತ್ತಾರೆ. ಆದರೆ ಈಗ ಮಂಗಳೂರಿನ ಕೆಎಸ್ ಆರ್ ಪಿ ವಿಭಾಗದಲ್ಲಿ ಸಿಬಂದಿಯನ್ನೇ ಮಲ ಮೂತ್ರಗಳಿಂದ ಬ್ಲಾಕ್ ಆಗಿದ್ದ ಡ್ರೈನೇಜ್ ಗುಂಡಿಯನ್ನು ಕ್ಲೀನ್ ಮಾಡೋದಕ್ಕೆ ಬಳಸ್ಕೊಂಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಬಲವಂತದಿಂದ ಸಿಬಂದಿಯನ್ನು ಈ ರೀತಿ ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇವರಿಂದಲೇ ಕೆಲಸ ಮಾಡಿಸಿ ಮೇಲಧಿಕಾರಿಗಳು ಬಿಲ್ ಕ್ಲೈಮ್ ಮಾಡ್ತಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಪೊಲೀಸ್ ಠಾಣೆ, ಸಿಬಂದಿಯ ಕ್ವಾಟ್ರಸ್ ಸೇರಿದಂತೆ ಇಲಾಖೆಯ ಕಟ್ಟಡಗಳನ್ನು ಈ ಹಿಂದೆ ಪಿಡಬ್ಲ್ಯುಡಿಯಿಂದಲೇ ನಿರ್ವಹಣೆ ಮಾಡಲಾಗುತ್ತಿತ್ತು. ಆನಂತರ, ಪೊಲೀಸರ ಗೃಹ ನಿರ್ಮಾಣ ಸಂಸ್ಥೆಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಕೋಣಾಜೆಯ ಕೆಎಸ್ ಆರ್ ಪಿ ವಸತಿ ಕಟ್ಟಡದಲ್ಲಿ ಕೆಲವು ತೀರಾ ದುರ್ಬಲವಾಗಿದ್ದು, ಟೆರೇಸಿನ ಚಪ್ಪಡಿ ಎದ್ದು ಈಗಲೋ ಆಗಲೋ ಇಡೀ ಕಟ್ಟಡ ಉರುಳಿ ಬೀಳುವಂತಿದೆ. ಅವನ್ನು ರಿಪೇರಿ ಮಾಡದೆ, ಸಿಬಂದಿಯೇ ಮಳೆಗಾಲಕ್ಕೆ ಸೋರುವುದನ್ನು ತಪ್ಪಿಸಲು ರಿಪೇರಿ ಕೆಲಸ ಮಾಡಿಸುತ್ತಾರೆ. ವಸತಿ ಗೃಹದ ನಿರ್ವಹಣೆ ಜವಾಬ್ದಾರಿ ಬೆಟಾಲಿಯನ್ನಿನ ಇನ್ಸ್ ಪೆಕ್ಟರನ್ನಿದ್ದಿರುತ್ತದೆ. ಅಸೈಗೋಳಿ ಕ್ಯಾಂಪಿನ ಇನ್ ಚಾರ್ಜ್ ಇನ್ಸ್ ಪೆಕ್ಟರ್ ಆಗಿ ಮಹಮ್ಮದ್ ಹ್ಯಾರಿಸ್ ಇದ್ದಾರೆ. ಸಿಬಂದಿಯಲ್ಲಿ ಡ್ರೈನೇಜ್ ಕ್ಲೀನ್ ಮಾಡಿಸುವುದಕ್ಕೆ ಇವರೇ ಕಾರಣ ಎಂದು ಅಲ್ಲಿನ ಕೆಲವು ಸಿಬಂದಿ ಆರೋಪಿಸುತ್ತಾರೆ. ಕೆಎಸ್ ಆರ್ ಪಿ ವಿಭಾಗದ ಒಟ್ಟು ಜವಾಬ್ದಾರಿಗೆ ಎಎಸ್ಪಿ ದರ್ಜೆಯ ಕಮಾಂಡೆಂಟ್ ಇರುತ್ತಾರೆ. ಮಂಗಳೂರು ವಿಭಾಗದಲ್ಲಿ ಬಿ.ಎಂ.ಪ್ರಸಾದ್ ಕಮಾಂಡೆಂಟ್ ಆಗಿದ್ದು, ಇವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಈ ಹಿಂದೆ 2016ರಲ್ಲಿ ಹೋಮ್ ಮಿನಿಸ್ಟರ್ ಆಗಿದ್ದ ಡಾ.ಜಿ.ಪರಮೇಶ್ವರ್, ಕೆಳಹಂತದ ಪೊಲೀಸರನ್ನು ದುರ್ಬಳಕೆ ಮಾಡುವ ಆರ್ಡರ್ಲೀ ಪದ್ಧತಿಯನ್ನು ನಿಷೇಧಿಸಿ ಆದೇಶ ಮಾಡಿದ್ದರು. ಆದರೆ ಮೇಲಧಿಕಾರಿಗಳ ಕಿರುಕುಳ ಮಾತ್ರ ಕೆಳಹಂತದ ಪೊಲೀಸರಿಗೆ ತಪ್ಪಿಲ್ಲ. ಈಗ ಮತ್ತೆ ಡಾ.ಪರಮೇಶ್ವರ್ ಅವರೇ ರಾಜ್ಯದ ಗೃಹ ಸಚಿವರಾಗಿದ್ದಾರೆ. ಪೊಲೀಸ್ ಸಿಬಂದಿಯನ್ನು ಈ ರೀತಿ ಕೀಳಾಗಿ, ಕೈಯಿಂದಲೇ ಮಲ ಎತ್ತಿಸುವ ಕೆಲಸ ಮಾಡಿಸಿದ್ದಕ್ಕೆ ಗೃಹ ಸಚಿವರು ಏನು ಹೇಳ್ತಾರೆ ಅನ್ನುವ ಪ್ರಶ್ನೆ ಇದೆ.
KSRP police staffs found cleaning Drainage sweage in Mangalore police Quarters, exclusive video by Headline Karnataka. It is alleged that higher officers order them to clean sweage and toilets.
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 10:01 pm
Mangalore Correspondent
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am