ಬ್ರೇಕಿಂಗ್ ನ್ಯೂಸ್
17-08-23 03:36 pm Mangalore Correspondent ಕರಾವಳಿ
ಉಳ್ಳಾಲ, ಆ.17: ವ್ಯಕ್ತಿಯೊಬ್ಬ ಆಹಾರದಲ್ಲಿ ವಿಷವಿಕ್ಕಿ ಸುಮಾರು 25 ನಾಯಿಗಳ ಮಾರಣ ಹೋಮ ನಡೆಸಿದ್ದಾನೆಂದು ಆರೋಪ ಕೇಳಿಬಂದಿದೆ. ವಿಷಾಹಾರ ಸೇವಿಸಿದ ಹಸುವೊಂದು ಸಾವನ್ನಪ್ಪಿದ್ದು ಕೃತ್ಯ ಎಸಗಿದವನ ಬಂಧನಕ್ಕೆ ಸ್ಥಳೀಯರು ಮತ್ತು ಬಜರಂಗದಳ ಪ್ರಮುಖರು ಆಗ್ರಹಿಸಿದ್ದಾರೆ.
ತಲಪಾಡಿಯ ಅಲಂಕಾರಗುಡ್ಡೆ, ಭಂಡಾರಮನೆ ಬಳಿ ನಿವಾಸಿ ಅಮಿತ ಎಂಬವರು ಸಾಕುತ್ತಿದ್ದ ಹಸುವನ್ನು ವಿಷ ಪ್ರಾಷಣಗೈದು ಕೊಲ್ಲಲಾಗಿದೆ. ಸ್ಥಳೀಯ ನಿವಾಸಿ ಖಾದರ್ ಎಂಬಾತ ಕೃತ್ಯ ನಡೆಸಿದ್ದಾನೆಂದು ಅಮಿತ ಆರೋಪಿಸಿದ್ದಾರೆ. ಖಾದರ್ ಮೇಕೆಗಳನ್ನ ಸಾಕುತ್ತಿದ್ದು ಇತ್ತೀಚೆಗೆ ಆತನ ಮೇಕೆಯೊಂದನ್ನ ನಾಯಿಗಳು ದಾಳಿ ನಡೆಸಿ ಕೊಂದಿದ್ದವು. ಇದರಿಂದ ಕುಪಿತಗೊಂಡ ಖಾದರ್ ಸುತ್ತಮುತ್ತಲ ಬೀದಿ ಮತ್ತು ಸಾಕು ನಾಯಿಗಳಿಗೆ ವಿಷಾಹಾರ ಉಣಿಸಿ ಸುಮಾರು 25 ರಷ್ಟು ನಾಯಿಗಳ ಸಾವಿಗೆ ಕಾರಣವಾಗಿದ್ದಾನೆ. ನಾಯಿಗಳಿಗೆ ವಿಷ ಪ್ರಾಷಣ ಮಾಡಿದ ಬಗ್ಗೆ ಖಾದರ್ ಬಹಿರಂಗವಾಗಿ ಜನರಲ್ಲಿ ಹೇಳಿದ್ದಾಗಿ ಅಮಿತ ಅವರು ಆರೋಪಿಸಿದ್ದಾರೆ. ಇಂದು ಕೂಡ ನಾಯಿಗಳು ವಿಷಾಹಾರ ಸೇವಿಸಿ ವಿಲ ವಿಲ ಒದ್ದಾಡುತ್ತಿರುವ ದೃಶ್ಯ ಮಾಧ್ಯಮದ ಕ್ಯಾಮೆರಾಕ್ಕೆ ಸಿಕ್ಕಿವೆ.
ಅಮಿತ ಅವರು ದನ ಸಾಕಣೆ ಮಾಡುತ್ತಿದ್ದು ನಿನ್ನೆ ಸಂಜೆ ಹಸುವೊಂದನ್ನ ಹುಲ್ಲು ಮೇಯಲು ಮನೆ ಪಕ್ಕದ ದೈವಸ್ಥಾನದ ಬಳಿ ಕಟ್ಟಿ ಹಾಕಿದ್ದರು. ಆರೋಗ್ಯವಾಗಿದ್ದ ಹಸು ನಿನ್ನೆ ರಾತ್ರಿ ನರಳುತ್ತಲೇ ಸಾವನ್ನಪ್ಪಿದೆ. ಪರಿಶೀಲನೆ ನಡೆಸಿದ ಪಶು ವೈದ್ಯರು ಹಸು ವಿಷಾಹಾರ ಸೇವಿಸಿ ಸತ್ತಿರುವುದಾಗಿ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಭೇಟಿ ನೀಡಿದ್ದು ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿ ಕೃತ್ಯ ಎಸಗಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ತಲಪಾಡಿ ಗ್ರಾ.ಪಂ ಪಿಡಿಒ ಮತ್ತು ಉಳ್ಳಾಲ ಪೊಲೀಸ್ ಠಾಣೆಯ ಠಾಣಾಧಿಕಾರಿಯಲ್ಲಿ ಆಗ್ರಹಿಸಿದ್ದಾರೆ.
ಜಾನುವಾರುಗಳನ್ನ ವಿಷ ಪ್ರಾಷಣಗೈದು ಕೊಂದ ಶಂಕಿತ ಆರೋಪಿ ಖಾದರ್ ಈ ಹಿಂದೆ ಗಂಧ ಕಳ್ಳ ಸಾಗಣೆಯಲ್ಲಿ ತೊಡಗಿದ್ದು, ಸ್ಥಳೀಯ ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.
Carcasses of 25 stray dogs found in Talapady in Mangalore, suspect poisoning. The incident was brought to light by animal rights activists who spotted the remains.
22-05-25 11:09 pm
HK News Desk
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
BJP Chalavadi Narayanaswamy, Congress, Priyan...
22-05-25 06:31 pm
Hassan, Bangalore, Heart Attack: ಪ್ರತ್ಯೇಕ ಪ್ರ...
22-05-25 01:09 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm