ಬ್ರೇಕಿಂಗ್ ನ್ಯೂಸ್
19-08-23 06:24 pm Mangalore Correspondent ಕರಾವಳಿ
ಉಳ್ಳಾಲ, ಆ.19: ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ನಟ ಉಪೇಂದ್ರ ಅವರ ಪತ್ನಿ ನಟಿ ಪ್ರಿಯಾಂಕ ಅವರು ದಿಢೀರ್ ಆಗಿ ಕುತ್ತಾರಿನ ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕರಾವಳಿಯ ಕಾರಣಿಕ ಶಕ್ತಿ ಕೊರಗಜ್ಜನಿಗೆ ಜಿಲ್ಲೆ ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಅಸಂಖ್ಯಾತ ಭಕ್ತರಿದ್ದಾರೆ. ಹಾಗಾಗಿ ಸೆಲೆಬ್ರಿಟಿಗಳೂ ಇತ್ತೀಚಿನ ದಿವಸಗಳಲ್ಲಿ ಕೊರಗಜ್ಜನ ಆದಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದಲ್ಲದೆ, ಇಷ್ಟಾರ್ಥ ನೆರವೇರಿಸುವಂತೆ ಹರಕೆಯನ್ನೂ ಹೊತ್ತು ತೆರಳುತ್ತಾರೆ.
ನೂತನ ಸಿನೆಮಾ ಚಿತ್ರೀಕರಣಕ್ಕೆ ಬಂದಿದ್ದ ನಟಿ ಪ್ರಿಯಾಂಕ ಅವರು ಶುಕ್ರವಾರ ಮಧ್ಯಾಹ್ನ ಚಿತ್ರ ತಂಡದೊಂದಿಗೆ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭ ಶ್ರೀ ಪಂಜಂದಾಯ ಬಂಟ ವೈದ್ಯನಾಥ, ಆದಿ ಕೊರಗತನಿಯ ಸೇವಾ ಟ್ರಸ್ಟ್ ನ ಟ್ರಸ್ಟಿಗಳು ನಟಿ ಪ್ರಿಯಾಂಕರನ್ನು ಸನ್ಮಾನಿಸಿದರು.
ಇತ್ತೀಚೆಗೆ ನಟಿ ಮಾಲಾಶ್ರೀ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ತನ್ನ ಇಷ್ಟಾರ್ಥ ಈಡೇರಿದ್ದಕ್ಕಾಗಿ ಹರಕೆ ಸಲ್ಲಿಸಿದ್ದರು. ಇದೀಗ ನಟಿ ಪ್ರಿಯಾಂಕ ಉಪೇಂದ್ರ ಕೊರಗಜ್ಜನಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ನಟ ಉಪೇಂದ್ರ ಅವರು ಹೊಲಗೇರಿ ಹೇಳಿಕೆಯಿಂದಾಗಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಪೊಲೀಸ್ ಕೇಸನ್ನೂ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಪತ್ನಿ ಪ್ರಿಯಾಂಕ ಬಂದು ಸಂಕಷ್ಟ ದೂರ ಮಾಡುವಂತೆ ಕೊರಗಜ್ಜನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Actor Upendra wife Priyanka visits Koragajja temple at Kuthar in Mangalore as she visits Mangalore for movie shooting.
08-01-26 11:06 pm
HK News Desk
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
ಅತ್ತೆ ಕಿರುಕುಳ ಆರೋಪ ; ಸೊಸೆ ತನ್ನ ಇಬ್ಬರು ಮಕ್ಕಳೊಂ...
08-01-26 07:51 pm
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನದುದ್ದಕ್ಕೂ ಹೋರಾ...
08-01-26 02:10 pm
08-01-26 11:21 pm
HK News Desk
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
ಅಧಿಕಾರಕ್ಕಾಗಿ ಶಿವಸೇನೆ ಹೊರಗಿಟ್ಟು ಬಿಜೆಪಿ - ಕಾಂಗ್...
07-01-26 09:37 pm
ದೆಹಲಿಯಲ್ಲಿ ಹಿಂಸಾಚಾರ ; ಮಸೀದಿ ಆವರಣದಲ್ಲಿ ಅಕ್ರಮ ಕ...
07-01-26 04:47 pm
09-01-26 01:15 pm
Mangalore Correspondent
ಜ.11 ರಂದು ಕೊಡಿಯಾಲದಲ್ಲಿ ಸುಧೀಂದ್ರ ತೀರ್ಥ ಜನ್ಮಶತಮ...
08-01-26 08:48 pm
ಜ.10- 11ರಂದು ಮಂಗಳೂರು ಲಿಟ್ ಫೆಸ್ಟ್ ; ರಾಜ್ಯಸಭೆ ಸ...
08-01-26 08:09 pm
ಗಡಿನಾಡು ಕಾಸರಗೋಡಿನಲ್ಲಿ ಮಲಯಾಳ ಹೇರಿಕೆ ; ಕಡ್ಡಾಯ ಭ...
08-01-26 02:34 pm
ಸುಳ್ಯ ಶಾಸಕಿ ಭಾಗೀರಥಿ ಬಗ್ಗೆ ಅವಹೇಳನ ಪೋಸ್ಟ್ ; ಕಾಂ...
07-01-26 11:06 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm