ಬ್ರೇಕಿಂಗ್ ನ್ಯೂಸ್
28-08-23 06:43 pm Mangalore Correspondent ಕರಾವಳಿ
ಉಳ್ಳಾಲ, ಆ.28: ಬಾರ್ ಎಂಡ್ ರೆಸ್ಟೋರೆಂಟ್ ಗೆ ಬಂದಿದ್ದ ವ್ಯಕ್ತಿಯೋರ್ವ ಸಮೀಪದ ಖಾಸಗಿ ಲೇ ಔಟ್ ಒಂದರ ಕೊಳದಲ್ಲಿ ಶಂಕಾಸ್ಪದವಾಗಿ ಮುಳುಗಿ ಸಾವನ್ನಪ್ಪಿದ ಘಟನೆ ತಲಪಾಡಿ ಗಡಿಯಲ್ಲಿ ನಡೆದಿದ್ದು, ಆತನ ಜೊತೆ ಕೊಳದಲ್ಲಿ ಈಜಾಡಿದ್ದೇವೆ ಎಂದ ನಾಲ್ವರ ವಿರುದ್ಧ ಶಂಕೆ ಮೂಡಿದೆ.
ಕಾಸರಗೋಡು ಜಿಲ್ಲೆಯ ಹೊಸಂಗಡಿ, ದುರ್ಗಿಪಳ್ಳ ನಿವಾಸಿ ಚಡ್ಡಿ ಹರೀಶ ಯಾನೆ ಹರಿಪ್ರಸಾದ್ ಆಚಾರ್ಯ (36) ಮೃತ ವ್ಯಕ್ತಿ. ಹರಿಪ್ರಸಾದ್ ಅವಿವಾಹಿತರಾಗಿದ್ದು ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದರು. ಕುಡಿತದ ಚಟಕ್ಕೆ ದಾಸರಾಗಿದ್ದ ಅವರು ಕಳೆದ ನಾಲ್ಕು ದಿವಸಗಳಿಂದ ಮನೆಗೆ ಹೋಗಿರಲಿಲ್ಲ. ಈ ನಡುವೆ, ನಿನ್ನೆ ರಾತ್ರಿ ಮನೆಗೆ ತೆರಳಿ ಇಂದು ಬೆಳಗ್ಗೆ ಮತ್ತೆ ಮನೆ ಬಿಟ್ಟಿದ್ದರು ಎನ್ನಲಾಗಿದ್ದು ಮಧ್ಯಾಹ್ನ ಸುಮಾರಿಗೆ ತಲಪಾಡಿಯ ಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತಲಪಾಡಿಯ ನಿಸರ್ಗ ಬಾರ್ ನಲ್ಲಿ ಬೆಳಗ್ಗೆ ಮದ್ಯ ಸೇವಿಸಿದ್ದ ಹರಿಪ್ರಸಾದ್ ಗೆಳೆಯರಾದ ಯುವರಾಜ್ ಯಾನೆ ಮುನ್ನ, ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಅವರೊಂದಿಗೆ ಸಮೀಪದ ಖಾಸಗಿ ಲೇ ಔಟಿನ ಕೊಳವೊಂದರಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ, ಈಜು ತಿಳಿಯದ ಹರಿಪ್ರಸಾದ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಜೊತೆಯಲ್ಲಿದ್ದ ನಾಲ್ವರು ತಾವು ಈಜಾಡಿ ವಾಪಾಸು ಹೋಗುತ್ತಿದ್ದಾಗ ಹರಿಪ್ರಸಾದ್ ಶರ್ಟ್, ಪ್ಯಾಂಟ್ ತೆಗೆದು ನೀರಿಗೆ ಧುಮುಕಿದ್ದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಆದರೆ ಜೊತೆಯಲ್ಲಿದ್ದವರ ಹೇಳಿಕೆ ಬಗ್ಗೆ ಸ್ಥಳೀಯರಲ್ಲಿ ಅನುಮಾನಗಳಿವೆ.
ಘಟನಾ ಸ್ಥಳಕ್ಕೆ ಮೃತರ ತಮ್ಮ ಅರುಣ್ ಕುಮಾರ್ ಬಂದಿದ್ದು ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Mangalore 36 year old man dies after drowning in Lake at Talapady, alcohol consumption suspected. The deceased has been identifed as Hariprasad Acharya. Ullal police have regsitered the case.
23-05-25 11:54 am
HK News Desk
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
BJP Chalavadi Narayanaswamy, Congress, Priyan...
22-05-25 06:31 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
23-05-25 01:25 pm
HK News Desk
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm