ಬ್ರೇಕಿಂಗ್ ನ್ಯೂಸ್
02-09-23 03:06 pm Mangalore Correspondent ಕರಾವಳಿ
ಮಂಗಳೂರು, ಸೆ.2: ಖಾಸಗಿ ಬಸ್ ಮಾಲಕರಿಗೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಕಠಿಣ ಕ್ರಮದ ಎಚ್ಚರಿಕೆ ನೀಡಿರುವುದರಿಂದ ಬಸ್ ಮಾಲಕರೇ ಇಂದು ಫೀಲ್ಡಿಗಿಳಿದು ಚಾಲಕ ಮತ್ತು ನಿರ್ವಾಹಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ.
ನಂತೂರು ವೃತ್ತದ ಬಳಿಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಬಸ್ ಮಾಲಕರು ಖಾಸಗಿ ಬಸ್ಸುಗಳ ನಿರ್ವಾಹಕರಿಗೆ ವಿವಿಧ ರೀತಿಯ ಸೂಚನೆಗಳನ್ನು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬಸ್ಸಿನ ಫುಟ್ ಬೋರ್ಡಿನಲ್ಲಿ ನಿಂತುಕೊಳ್ಳಬಾರದು. ಕಂಡಕ್ಟರ್ ಅಥವಾ ಪ್ರಯಾಣಿಕರು ಕೂಡ ಬಸ್ಸಿನಲ್ಲಿ ಮೆಟ್ಟಿಲಲ್ಲಿ ನಿಂತು ಪ್ರಯಾಣಿಸುವುದೇ ನಿಷಿದ್ಧ ಎಂದು ಜಾಗೃತಿ ಮೂಡಿಸಿದ್ದಾರೆ.
ಅಲ್ಲದೆ, ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ಗಳು ಶಿಸ್ತಿನಂತೆ ಡ್ರೆಸ್ ಧರಿಸಬೇಕು. ಖಾಕಿ ಶರ್ಟ್ ಮತ್ತು ಖಾಕಿ ಪ್ಯಾಂಟನ್ನೇ ಹಾಕ್ಕೊಂಡಿರಬೇಕು. ಪ್ರಯಾಣಿಕರ ಜೊತೆ ಸೌಜನ್ಯದಿಂದಲೇ ವರ್ತಿಸಬೇಕು. ನೀವು ಬೇಕಾಬಿಟ್ಟಿ ವರ್ತಿಸಿದರೆ, ಕೊನೆಗೆ ದಂಡ ತೆರುವುದು ನಮ್ಮ ತಲೆಗೆ ಬರುತ್ತದೆ. ಹಾಗಾಗಿ ಟೈಮ್ ಕೀಪಿಂಗ್ ಏನಿದ್ದರೂ ಎರ್ರಾಬಿರ್ರಿ ಬಸ್ ಓಡಿಸುವುದಾಗಲೀ, ಜನರನ್ನು ಒಟ್ಟಾರೆ ತುಂಬಿಸಿಕೊಂಡು ಹೋಗುವುದಾಗಲೀ ಮಾಡಬಾರದು. ಪ್ರತಿ ಪ್ರಯಾಣಿಕನಿಗೂ ಚಲೋ ಮೆಷಿನ್ ಮೂಲಕವೇ ಟಿಕೆಟ್ ನೀಡಬೇಕು. ಜೊತೆಗೆ ಬಸ್ ಮಾಲಕರ ಸಂಘದಿಂದ ಕೊಡಮಾಡಿರುವ ಚಲೋ ಕಾರ್ಡ್ ಗಳನ್ನು ನಿರಾಕರಿಸುವಂತಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಅಥವಾ ಇತರೇ ಸಾರ್ವಜನಿಕರ ಜೊತೆ ಒರಟಾಗಿ ವರ್ತಿಸುವಂತಿಲ್ಲ. ಕರ್ಕಶ ಹಾರ್ನ್ ಬಳಸುವಂತಿಲ್ಲ. ಬಸ್ಸಿನಲ್ಲಿ ಟೇಪ್ ರೆಕಾರ್ಡ್ ಬಳಸುವುದನ್ನು ನಿಷೇಧಿಸಲಾಗಿದೆ ಇತ್ಯಾದಿ ಮಾಹಿತಿಯುಳ್ಳ ಕರಪತ್ರಗಳನ್ನು ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ಕೊಟ್ಟು ಮಾಲಕರೇ ಜಾಗೃತಿ ಮೂಡಿಸಿದರು.
ಕದ್ರಿ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಭಟ್ ಜೊತೆಗಿದ್ದು, ಬಸ್ ಮಾಲಕರು ಮತ್ತು ಸಿಬಂದಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಫುಟ್ ಬೋರ್ಡಿನಲ್ಲಿ ನಿಂತು ಪ್ರಯಾಣಿಸಿದರೆ, ಅಂತಹ ಬಸ್ಸುಗಳಿಗೆ ದಂಡ ವಿಧಿಸಲು ಆದೇಶ ಇದೆ. ಅಲ್ಲದೆ, ನೀವು ಎಲ್ಲಿಯೇ ಆಗಲೀ ಫುಟ್ ಬೋರ್ಡಲ್ಲಿ ನಿಂತು ಪ್ರಯಾಣಿಸಿದ್ದನ್ನು ಸಾರ್ವಜನಿಕರು ಫೋಟೋ ತೆಗೆದು ಕೊಟ್ಟರೂ ದಂಢ ವಿಧಿಸುತ್ತೇವೆ. ಪ್ರಯಾಣಿಕರ ಹಿತದೃಷ್ಟಿಯಿಂದ ಇವೆಲ್ಲ ಸೂಚನೆಗಳನ್ನು ಬಸ್ಸಿನ ಸಿಬಂದಿ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
Dakshina Kannada Bus Operators' Association led by its president Azeez Parthipady raised awareness among bus drivers and conductors on the safety of passengers here at Nanthoor on Saturday September 2. This action came after a bus conductor slipped from the bus footboard at Nanthoor leading to his death.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm