ಬ್ರೇಕಿಂಗ್ ನ್ಯೂಸ್
03-09-23 09:40 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಸೌಜನ್ಯಾ ಹೋರಾಟದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಜನರು ದಂಗೆ ಏಳುವುದಕ್ಕೆ ಅವಕಾಶ ಕೊಡಬೇಡಿ. ಮರು ತನಿಖೆಗೆ ಆದೇಶ ಮಾಡದೇ ಇದ್ದರೆ ಇಡೀ ರಾಜ್ಯದಲ್ಲಿ ಸೌಜನ್ಯಾ ಹೋರಾಟ ಹೊತ್ತಿಕೊಳ್ಳಲಿದೆ. ಉತ್ತರ ಕರ್ನಾಟಕದಲ್ಲೂ ಹೋರಾಟ ಮೊಳಗಲಿದೆ. ವಿಧಾನಸೌಧಕ್ಕೂ ಮುತ್ತಿಗೆ ಹಾಕಲಿದ್ದೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಅಬ್ಬರಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಕಚೇರಿ ಎದುರಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಿದ ತಿಮರೋಡಿ, ಪೊಲೀಸರು ದಾಖಲೆ ಕೇಳುತ್ತಿದ್ದಾರೆ, ನಾವು ದಾಖಲೆ ಕೊಡಲು ರೆಡಿ ಇದ್ದೇವೆ. ಆದರೆ ಅದಕ್ಕೂ ಮೊದಲು 11 ವರ್ಷಗಳ ಹಿಂದೆ ಸೌಜನ್ಯಾ ಪ್ರಕರಣ ಮುಚ್ಚಿ ಹಾಕಿದ ಬಗ್ಗೆ ದಾಖಲೆ ಕೊಡಬೇಕು. ಬೆಳ್ತಂಗಡಿ ಠಾಣೆಯಲ್ಲಿ ಸುಂದರ ಶೆಟ್ಟಿ, ಕೃಷ್ಣ ಶೆಟ್ಟಿ ಮತ್ತು ನವೀನ ಎಂಬ ಪೊಲೀಸರಿದ್ದಾರೆ. ಸುಂದರ ಶೆಟ್ಟಿ 11 ವರ್ಷಗಳ ಹಿಂದೆ ಸೌಜನ್ಯಾ ಕೇಸನ್ನು ಮುಚ್ಚಿ ಹಾಕಿದ ಯೋಗೀಶನ ಬಂಟನಾಗಿದ್ದವನು. ಈ ವ್ಯಕ್ತಿಯೂ ಅಂದು ಕೇಸ್ ಮುಚ್ಚಿ ಹಾಕಿದ ಎಲ್ಲವನ್ನೂ ತಿಳಿದವನಿದ್ದಾನೆ. ವಿಚಿತ್ರ ಅಂದರೆ ಈಗಲೂ ಅದೇ ರೀತಿ ಮಾಡುತ್ತಿದ್ದಾರೆ. ನಿನ್ನೆ ಮತ್ತೊಂದು ಸುಳ್ಳು ಕೇಸು ಹಾಕಿದ್ದಾರೆ. ಹೆಂಗಸೊಬ್ಬರನ್ನು ಮುಂದೆ ಬಿಟ್ಟು ಕೇಸು ಹಾಕಿಸಲು ಪ್ರಯತ್ನ ಪಟ್ಟಿದ್ದಾರೆ.
ಈ ದೇಶದ ರಾಜಕೀಯ ವ್ಯವಸ್ಥೆಯೇ ಹಾಳಾಗಿದ್ದು ಇವರಿಂದಲೇ ಸತ್ಯನಾಶ ಆಗಿದೆ. ಸಿದ್ದರಾಮಯ್ಯ, ಗೃಹ ಮಂತ್ರಿ ಈ ಸ್ಥಾನದಲ್ಲಿದ್ದು ಏನೂ ಮಾಡಕ್ಕಾಗಲ್ಲ ಅಂದ್ರೆ ನೀವು ಆಡಳಿತಕ್ಕೆ ಲಾಯಕ್ಕಿಲ್ಲದವರು. ನಿಮ್ಮದು ಬಲಿಷ್ಠ ಸರ್ಕಾರ, ಕಿಚಡಿ ಸರ್ಕಾರ ಅಲ್ಲ. ಬಿಜೆಪಿ ಮಾಡಿದ ತಪ್ಪಿನಿಂದಾಗಿ ಈಗ ಬೀದಿ ಅಲೆಯುತ್ತಿದ್ದಾರೆ. ಆಡಳಿತ ಸರಿಯಾಗಿ ಮಾಡದೇ ಇದ್ದರೆ, ಸೌಜನ್ಯಾಗೆ ನ್ಯಾಯ ಕೊಡಿಸದೇ ಇದ್ದರೆ ಕಾಂಗ್ರೆಸಿಗೂ ಅದೇ ಸ್ಥಿತಿ ಬರಲಿದೆ. ಇದು ಅಣ್ಣಪ್ಪ, ಮಂಜುನಾಥ ಸ್ವಾಮಿಯ ನಿರ್ಧಾರ ಎಂದು ಹೇಳಿದರು.
ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಕೇವಲ ಮೂರೇ ವರ್ಷದಲ್ಲಿ ರಾಜ್ಯದಲ್ಲಿ 18ರಿಂದ 30ರ ಒಳಗಿನ 40 ಸಾವಿರ ಯುವತಿಯರು ಕಾಣೆಯಾಗಿದ್ದಾರೆ. ಎಲ್ಲಿ ಹೋಗಿದ್ದಾರೆ ಇವರೆಲ್ಲ ಎಂದು ಪ್ರಶ್ನಿಸಿದರು. ಅಬ್ದುಲ್ ನಾಸಿರ್ ಮದನಿ ಎಂಬ ಉಗ್ರನಿಗೆ ಜೈಲಿನಿಂದ ಬಿಟ್ಟು ಕೊಡ್ತೀರಿ. 117 ಮಂದಿಯನ್ನು ಕೊಂದ ಮದನಿಗೆ ಅಪ್ಪನಿಗೆ ಹುಷಾರಿಲ್ಲವೆಂದು 15 ದಿನ ಮನೆಗೆ ಹೋಗಲು ಬಿಡ್ತೀರಿ. ಸಂತೋಷ್ ರಾವ್ ತಾಯಿ ಸತ್ತಾಗ ಒಂದು ಕ್ಷಣ ನೋಡಲು ಬಿಡಲಿಲ್ಲ. ಆತನ ತಾಯಿ ಸಂತೋಷ್ ಹೆಸರೇಳುತ್ತಾ ಸತ್ತು ಹೋದಾಗ ಕರುಣೆ ಬಂದಿಲ್ಲ ನಿಮಗೆ. ನಿಮ್ಮ ಸಂತಾನಕ್ಕೆ ಆ ತಾಯಿಯ ಶಾಪ ತಟ್ಟಲಿದೆ ಎಂದು ಹೇಳಿದರು.
ಸೌಜನ್ಯಾ ಪ್ರಕರಣ ಮರು ತನಿಖೆಗೆ ಕೊಡದೇ ಇದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳಲಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಉತ್ತರ ಕರ್ನಾಟಕದಲ್ಲಿಯೂ ಸೌಜನ್ಯಾ ಬೆಂಕಿ ಹೊತ್ತಿಕೊಳ್ಳಲಿದೆ ಎಂದ ಮುತಾಲಿಕ್, ಸಂತೋಷ್ ಮತ್ತು ಸೌಜನ್ಯಾ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಕೊಡಬೇಕು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಶಾಸಕರು ತಲಾ 5 ಲಕ್ಷ ಕೊಡಬೇಕು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಒಂದು ದಿನವೂ ಅದೇ ಕ್ಷೇತ್ರದಲ್ಲಿರುವ ಸಂತೋಷ್ ಮನೆಗೆ ಭೇಟಿ ಕೊಟ್ಟಿಲ್ಲ. ಹತ್ತು ಕೋಟಿಯಲ್ಲಿ ಮನೆ ಕಟ್ಟುವ ಈ ಶಾಸಕನಿಗೆ ಬಡಪಾಯಿ ಸಂತೋಷ್ ರಾವ್ ಕಾಣಿಸುತ್ತಿಲ್ಲ ಎಂದು ಹೇಳಿದರು.
Sowjanya case, massive protest at Belthangady, will gherao Vidhana Soudha says Mahesh Thimarodi.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm