ಬ್ರೇಕಿಂಗ್ ನ್ಯೂಸ್
22-09-23 09:22 pm Mangalore Correspondent ಕರಾವಳಿ
ಮಂಗಳೂರು, ಸೆ.22: ನಗರದ ಸಂಘನಿಕೇತನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಡೆಸಲ್ಪಡುವ 76ನೇ ವರ್ಷದ ಗಣೇಶೋತ್ಸವದಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪ್ರತಿನಿಧಿಗಳು ಪಾಲ್ಗೊಂಡಿದ್ದು, ಗಣಪತಿ ಪೂಜೆಯ ಪ್ರಸಾದ ಸ್ವೀಕರಿಸಿದ್ದಾರೆ.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಫ್ರಾಂಕ್ಲಿನ್ ಮೊಂತೇರೊ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಮಂಗಳೂರು ಬಿಷಪ್ ಪ್ರತಿನಿಧಿ ರಾಯ್ ಕ್ಯಾಸ್ಟಲಿನೋ, ಕ್ರೆಡೈ ಮಂಗಳೂರು ಅಧ್ಯಕ್ಷ ವಿನೋದ್ ಪಿಂಟೋ, ನೋಟರಿ ಶ್ರೀಮತಿ ಲ್ಯಾನಿ ಪಿಂಟೋ, ಜೂಲಿಯಟ್ ಡಿಕುನ್ಹಾ ಉರ್ವಸ್ಟೋರ್, ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜ, ಬಿಲ್ಡರ್ ಗ್ರೆಗರಿ ಡಿಸಿಲ್ವಾ, ರೋಜರ್ ಪಿಂಟೋ ಕಿನ್ನಿಗೋಳಿ, ಉದ್ಯಮಿ ಅರುಣ್ ರೋಡ್ರಿಗಸ್, ಡೆನಿಸ್ ಸಲ್ದಾನ ಮತ್ತಿತರ ಪ್ರತಿನಿಧಿಗಳು ನಿಯೋಗದಲ್ಲಿದ್ದರು. ಆರೆಸ್ಸೆಸ್ ಪ್ರಾಂತ ಕಾರ್ಯವಾಹ ಡಾ.ವಾಮನ ಶೆಣೈ ನೇತೃತ್ವದಲ್ಲಿ ಕ್ರಿಸ್ತಿಯನ್ ನಿಯೋಗವನ್ನು ಸಂಘನಿಕೇತನಕ್ಕೆ ಬರಮಾಡಿಕೊಳ್ಳಲಾಯಿತು.
ಬಳಿಕ ಗಣಪತಿಗೆ ಫಲವಸ್ತುಗಳನ್ನು ಕಾಣಿಕೆ ನೀಡಿ ಪೂಜೆ ಸಲ್ಲಿಸಿದ ಕ್ರಿಸ್ತಿಯನ್ ನಿಯೋಗಕ್ಕೆ ಅರ್ಚಕರು ಪ್ರಸಾದ ನೀಡಿದರು. ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಯ್ ಕ್ಯಾಸ್ಟಲಿನೋ, ಸ್ವಾತಂತ್ರ್ಯ ಕಾಲದಲ್ಲಿ ಜನರನ್ನು ಒಟ್ಟುಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತರಲಾಗಿತ್ತು. ಬಾಲಗಂಗಾಧರ ತಿಲಕರು ಆಚರಣೆಗೆ ತಂದಿದ್ದ ಗಣೇಶೋತ್ಸವ ಬಳಿಕ ದೇಶಾದ್ಯಂತ ಸರ್ವ ಧರ್ಮದ ಜನರು ಆಚರಿಸುವಂತಾಗಿತ್ತು. ಹೀಗಾಗಿ ಗಣೇಶೋತ್ಸವ ಅನ್ನುವುದು ರಾಷ್ಟ್ರೀಯ ಹಬ್ಬವಾಗಿದೆ. ಅದರಲ್ಲಿ ನಾವೆಲ್ಲ ಸೇರಿ ಪಾಲು ಪಡೆಯುತ್ತೇವೆ ಎಂದು ಹೇಳಿದರು.
ಡಾ.ವಾಮನ ಶೆಣೈ ಮಾತನಾಡಿ, ನಾವು ರಾಷ್ಟ್ರ ಜಾಗೃತಿಯ ಚಿಂತನೆಯೊಂದಿಗೆ ಧಾರ್ಮಿಕ ಸಾಮರಸ್ಯ ಬಯಸುತ್ತೇವೆ. ಸರ್ವ ಧರ್ಮಗಳ ಸಮನ್ವಯವೇ ಗಣೇಶೋತ್ಸವದ ಉದ್ದೇಶ. ತಿಲಕರು ಮೊದಲಿಗೆ ಹೇಳಿಕೊಟ್ಟ ರೀತಿಯಲ್ಲೇ ಮಂಗಳೂರಿನ ಸಂಘನಿಕೇತನದಲ್ಲಿ 1948ರಲ್ಲೇ ಗಣೇಶೋತ್ಸವ ಆಚರಣೆಗೆ ಬಂದಿತ್ತು. ಅಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ಪ್ರಕಾರವೇ ನಾವು ಉತ್ಸವ ನಡೆಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
In a heart-warming gesture that fosters the spirit of unity and harmony, leaders of Catholic delegations and Rashtriya Christara Vedike visited Sanghaniketan to be part of Ganesh Chaturthi celebrations
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 03:24 pm
Mangalore Correspondent
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm