ಬ್ರೇಕಿಂಗ್ ನ್ಯೂಸ್
23-09-23 04:07 pm Mangalore Correspondent ಕರಾವಳಿ
ಮಂಗಳೂರು, ಸೆ.23: ಜೆಡಿಎಸ್ ಅನ್ನೋದು ಉಡ ಇದ್ದಂತೆ. ಅದು ಯಾವುದೇ ಪಕ್ಷ ಸೇರಿಕೊಂಡರೂ ಅನಿಷ್ಟ ಒಳ ಹೊಕ್ಕಂತೆ. ಆ ಅನಿಷ್ಟದಿಂದ ನಾವು ಸಾಕಷ್ಟು ಅನುಭವಿಸಿದ್ದೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಸೇರಿ ಅವರಿಗೊಂದು, ನಮಗೊಂದು ಸ್ಥಾನ ಸಿಕ್ಕಿತ್ತು. ನಾವೆಲ್ಲ ಖರ್ಗೆ ಸಹಿತ ಸೋತಿದ್ದೆವು. ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಹೀಗೆಂದು ವಿಶ್ಲೇಷಣೆ ಮಾಡಿದ್ದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಸಂದರ್ಭ ಕೇಳಿದ ಪ್ರಶ್ನೆಗೆ, ಈಗ ಬಿಜೆಪಿಗೆ ಅನಿಷ್ಟ ಹೊಕ್ಕಿದೆ ಎಂದರು. ಅಲ್ಲದೆ, ಹಿಂದೆ ಬಿಜೆಪಿ ಜೊತೆ ಸೇರುವ ದಾರಿದ್ರ್ಯ ಬಂದಿಲ್ಲ ಎನ್ನುತ್ತಿದ್ದರು. ಈಗ ಅದೇ ದಾರಿದ್ರ್ಯ ಬಿಜೆಪಿ ಒಳ ಹೊಕ್ಕಂತೆ ಆಗಿದೆ ಎಂದು ವ್ಯಂಗ್ಯವಾಡಿದರು. ಮೂರು ಡಿಸಿಎಂ ಆಗಬೇಕೆಂಬ ಪ್ರಶ್ನೆಗೆ, ಅದು ಪಕ್ಷದ ಅಭಿಪ್ರಾಯ ಅಲ್ಲ, ಕೆಲವರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ನಮ್ಮ ಪಕ್ಷ ಬಲಿಷ್ಟವಾಗಿದೆ. ಕೆಲವರು ಗಟ್ಟಿ ಮಾಡಿಕೊಳ್ಳಲು ಈ ರೀತಿ ಸಲಹೆ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಸದ್ಯಕ್ಕೆ ಮೂರು ಡಿಸಿಎಂ ಮಾಡುವ ಚರ್ಚೆ ಇಲ್ಲ ಎಂದಿದ್ದಾರೆ.
ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಹೋರಾಟ ನಡೆಯುತ್ತಿರುವ ಪ್ರಶ್ನೆಗೆ, ನಾನು ಮುಖ್ಯಮಂತ್ರಿಯಾಗಿದ್ದಾಗ ಖಡಕ್ಕಾಗಿ ನಿಂತಿದ್ದೆ. ನಮ್ಮದೇ ಜೊತೆಗಿದ್ದ ಜಯಲಲಿತಾ ಮರೀನ್ ಬೀಚ್ ನಲ್ಲಿ ಉಪವಾಸ ಕುಳಿತರೂ, ನೀರಿನ ವಿಚಾರದಲ್ಲಿ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ನಮ್ಮ ಸರಕಾರ ಕೋರ್ಟ್ ಮೂಲಕ ವಿವಾದ ಬಗೆಹರಿಸಲು ಯತ್ನಿಸುತ್ತಿದೆ. ಬಿಜೆಪಿಯವರು ವಿರೋಧ ಪಕ್ಷದಲ್ಲಿರುವುದರಿಂದ ವಿರೋಧಿಸುತ್ತಿದ್ದಾರೆ ಎಂದರು. ಪ್ರತಿ ಬಾರಿ ಕಾವೇರಿ ವಿಚಾರದಲ್ಲಿ ಕರ್ನಾಟಕ ಯಾಕೆ ಸೋಲುತ್ತಿದೆ ಎಂಬ ಪ್ರಶ್ನೆಗೆ, ರಾಜ್ಯ ಕಾವೇರಿ ವಿಚಾರದಲ್ಲಿ ಸೋಲಲು ಅನೇಕ ಕಾರಣಗಳಿವೆ. ಆದರೆ ನಾವು ಕಾವೇರಿ ನೀರನ್ನು ಗರಿಷ್ಠವಾಗಿ ಉಪಯೋಗಿಸಲು ಎಡವಿದ್ದೇವೆ. ಆ ಕಾಲದ ಆಡಳಿತಗಾರರು ಮಾಡಿದ ತಪ್ಪಿನಿಂದ ಹೀಗಾಗಿದೆ. ನಾವಿದ್ದಾಗ ಯಗಡಿ ಅಣೆಕಟ್ಟು ಮಾಡಲು ಬಹಳಷ್ಟು ಪ್ರಯತ್ನ ಪಟ್ಟಿದ್ದೆವು. ಆದರೆ ವಿರೋಧದಿಂದಾಗಿ ಮಾಡಲು ಸಾಧ್ಯವಾಗಲಿಲ್ಲ. ಈಗಲೂ ಮಳೆ ಬಂದರೆ, ಎಲ್ಲ ಹೋರಾಟ ನಿಲ್ತದೆ ಎಂದು ಹೇಳಿದರು.
ಕೇಂದ್ರ ಸರಕಾರ ಮಹಿಳಾ ಮಸೂದೆ ಸಂಸತ್ತಿನಲ್ಲಿ ಮಂಡಿಸಿ ಐತಿಹಾಸಿಕ ಅನ್ನುವ ರೀತಿ ಪೋಸು ಕೊಡುತ್ತಿದೆ. ಅದೇ ಬಿಲ್ಲನ್ನು ನಾವು 2011ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿ ಪಾಸ್ ಮಾಡಿದ್ದೆವು. ನಮ್ಮ ಜೊತೆಗಿದ್ದ ಪಕ್ಷಗಳು ವಿರೋಧಿಸಿದ್ದರಿಂದ ಲೋಕಸಭೆಯಲ್ಲಿ ಪಾಸ್ ಮಾಡಲು ಆಗಿರಲಿಲ್ಲ. ಆದರೆ ಇವರು ಬಂದು 10 ವರ್ಷಗಳಾಗಿದ್ದು, ಬಹುಮತದ ಸರ್ಕಾರಕ್ಕೆ ಮಹಿಳಾ ಮಸೂದೆ ತರಲು ಇಷ್ಟು ಸಮಯ ಬೇಕಾಗಿತ್ತೇ.. ಮಹಿಳಾ ಮಸೂದೆ ಅನ್ನುವುದು ಚುನಾವಣೆ ಸಂದರ್ಭದಲ್ಲಿ ಬರೀ ಮೊಸಳೆ ಕಣ್ಣೀರು ಅಷ್ಟೇ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಶಿಧರ ಹೆಗ್ಡೆ, ಐವಾನ್ ಡಿಸೋಜ, ಕೃಪಾ ಅಮರ್ ಆಳ್ವ ಮತ್ತಿತರರಿದ್ದರು.
The JD(S) is like a uda. Whichever party it joins, it is like an evil creep in. We have suffered a lot from that evil. In the last Lok Sabha elections, they got one seat and we got one. We all lost, including Kharge. Former minister and senior Congress leader Veerappa Moily has analysed the BJP-JD(S) alliance.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm