ಬ್ರೇಕಿಂಗ್ ನ್ಯೂಸ್
24-09-23 05:45 pm Mangalore Correspondent ಕರಾವಳಿ
ಮಂಗಳೂರು, ಸೆ.24: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನನಗೆ ದಕ್ಷಿಣ ಕನ್ನಡ ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದಾರೆ. 15 ದಿನಗಳಲ್ಲಿ ಯಾರು ಅಭ್ಯರ್ಥಿ ಆಗಬೇಕೆಂದು ಇಲ್ಲಿನ ಪ್ರಮುಖರಿಂದ ಮಾಹಿತಿ ಸಂಗ್ರಹಿಸುತ್ತೇನೆ. ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರವನ್ನು ನಾವು ಗೆಲ್ಲಲೇಬೇಕು. 2004ಕ್ಕೂ ಮೊದಲಿದ್ದ ರೀತಿಯಲ್ಲಿ ನಾವೇ ಈ ಕ್ಷೇತ್ರವನ್ನು ಗೆಲ್ಲುವಂತೆ ಈಗಲೇ ಕೆಲಸ ಆರಂಭಿಸುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರು ಯಾವ ರೀತಿ ಮತ ನೀಡುತ್ತಾರೆ ಅನ್ನೋದನ್ನು ಊಹಿಸಲು ಆಗಲ್ಲ. ಹಿಂದಿನ ಬಾರಿ ನಾನು ಕೂಡ ಒಂದಷ್ಟು ಮತಗಳ ಅಂತರದಿಂದ ಸೋತಿದ್ದೆ. ಆದರೆ ಈ ಬಾರಿ 44 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದೇನೆ. ಹಾಗಾಗಿ ಜನರು ಚಿಂತಿಸಿ, ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುತ್ತಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಐದು ಭರವಸೆಗಳನ್ನು ಈಡೇರಿಸಿದ್ದು, ಜನರ ಮನಸ್ಸು ಗೆದ್ದಿದೆ. ಬೆಲೆಯೇರಿಕೆಯಿಂದ ತತ್ತರಿಸಿರುವ ಜನರ ಕೈಗೆ ಹಣ ನೀಡಿದ್ದೇವೆ. ಮಂಗಳೂರಿನ ಜನರ ಮನಸ್ಸು ಗೆಲ್ಲುವುದು ಕಷ್ಟವಾಗಲ್ಲ ಎಂದರು.
ಬಿಜೆಪಿ ಅಭಿವೃದ್ಧಿಯ ಕಾರಣಕ್ಕೆ ಗೆದ್ದಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಮೇಲೆ ಬಿಜೆಪಿ ಗೆದ್ದಿಲ್ಲ. ಇವರು ಕೇವಲ ಭಾವನಾತ್ಮಕ ವಿಚಾರಗಳ ಮೇಲಷ್ಟೆ ಗೆದ್ದಿದ್ದಾರೆ. ನಾವು ನಮ್ಮ ಕೆಲಸ ಹೇಳಿಕೊಂಡು ಮತ ಕೇಳುತ್ತೇವೆ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನವನ್ನೂ ಕೇಳುತ್ತೇವೆ. ಈಗ ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ನಲ್ಲಿ ಕೆಲವರಿಗೆ ನೋವಾಗಿದೆ, ಅವರು ಪಕ್ಷದ ಜೊತೆಗಿನ ಸೆಕ್ಯುಲರ್ ಎಸ್ ಅನ್ನು ತೆಗೆದು ಹಾಕಬೇಕು. ಹಿಂದೆ ಬಿಜೆಪಿಯನ್ನು ಕೋಮುವಾದಿ ಅಂತಿದ್ರು. ಈಗ ಅವರೇ ಜೊತೆ ಸೇರಿಕೊಂಡಿದ್ದಾರೆ. ತಾವು ನಂಬಿದ ತತ್ವ ಸಿದ್ಧಾಂತಕ್ಕೆ ಧಕ್ಕೆಯಾದಾಗ ಆ ಪಕ್ಷದ ನಾಯಕರು ನಿರ್ಧಾರ ತಗೋತಿದ್ದಾರೆ. ಇದರ ಪರಿಣಾಮ ಸದ್ಯದಲ್ಲೇ ಗೊತ್ತಾಗಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಎಂಎಲ್ಸಿ ಹರೀಶ್ ಕುಮಾರ್, ಐವಾನ್ ಡಿಸೋಜ, ಬಿ. ಇಬ್ರಾಹಿಂ, ಶಶಿಧರ್ ಹೆಗ್ಡೆ, ಜೆಆರ್ ಲೋಬೊ, ಪದ್ಮರಾಜ್ ಆರ್, ಶುಭೋದಯ ಆಳ್ವಾ ಮತ್ತಿತರರಿದ್ದರು.
Dakshina Kannada Lok sabha winning is for sure says Madhu Bangarappa in Mangalore.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm