Parashuram statue Karkala,Theme Park: ಕಾರ್ಕಳ ಪರಶುರಾಮ ಮೂರ್ತಿ ಮಾಯ ; ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಬಣ್ಣ‌ ! ಕಾರ್ಕಳ ಠಾಣೆಗೆ ಪೊಲೀಸ್ ದೂರು

15-10-23 03:03 pm       Mangaluru Correspodent   ಕರಾವಳಿ

ಡ್ರೋಣ್ ಕ್ಯಾಮರಾದಲ್ಲಿ ಕಪ್ಪು ಪ್ಲ್ಯಾಸ್ಟಿಕ್ ಹೊದಿಕೆಯ ಒಳಗಿನ ಅಸಲಿ ಬಣ್ಣ ಬಯಲಾಗಿದ್ದು, ಪರಶುರಾಮ ಮೂರ್ತಿಯ ಪಾದ ಮತ್ತು ಕಾಲು ಬಿಟ್ಟು ಮೇಲಿನ ಭಾಗ ಮಾಯವಾಗಿರುವುದು ಕಂಡುಬಂದಿದೆ.

ಕಾರ್ಕಳ, ಅ.15: ಪ್ರವಾಸಿ ಕೇಂದ್ರ ಪರಶುರಾಮ ಥೀಮ್ ಪಾರ್ಕ್ ನಲ್ಲಿ ದಿಢೀರ್ ಆಗಿ ಪರುಶುರಾಮ ಮೂರ್ತಿ ಕಾಣೆಯಾಗಿದ್ದು, ಮತ್ತೆ ವಿವಾದಕ್ಕೆ ಒಳಗಾಗಿದೆ. ಎರಡು ದಿನಗಳಿಂದ ಮೂರ್ತಿಯ ಸುತ್ತ ಕಪ್ಪು ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು ಪತ್ತೆಯಾಗಿತ್ತು. ಇದೀಗ ಡ್ರೋಣ್ ಕ್ಯಾಮರಾದಲ್ಲಿ ಕಪ್ಪು ಪ್ಲ್ಯಾಸ್ಟಿಕ್ ಹೊದಿಕೆಯ ಒಳಗಿನ ಅಸಲಿ ಬಣ್ಣ ಬಯಲಾಗಿದ್ದು, ಪರಶುರಾಮ ಮೂರ್ತಿಯ ಪಾದ ಮತ್ತು ಕಾಲು ಬಿಟ್ಟು ಮೇಲಿನ ಭಾಗ ಮಾಯವಾಗಿರುವುದು ಕಂಡುಬಂದಿದೆ.

ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಲಾಗಿರುವ ಪರುಶುರಾಮನ ಮೂರ್ತಿ ನಕಲಿ ಎನ್ನುವ ಬಗ್ಗೆ ಭಾರೀ ಆರೋಪ ಕೇಳಿಬಂದಿತ್ತು. ಇದೀಗ ಮೂರ್ತಿ ನಾಪತ್ತೆ ಆಗುತ್ತಲೇ ಹೋರಾಟಗಾರರು ಮೂರ್ತಿ ಕಾಣೆಯಾಗಿದೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೂರ್ತಿ ತೆರವು ಹಿನ್ನೆಲೆಯಲ್ಲಿ ಉಮ್ಮಿಕಲ್ ಬೆಟ್ಟಕ್ಕೆ ಕಾಂಗ್ರೆಸ್‌ ಮುಖಂಡ ಉದಯ ಕುಮಾರ್‌ ಶೆಟ್ಟಿ ಭೇಟಿ ನೀಡಿದ್ದು ಶಾಸಕ ಸುನಿಲ್ ಕುಮಾರ್ ಬಗ್ಗೆ ಆರೋಪ ಮಾಡಿದ್ದಾರೆ.

ಪರಶುರಾಮನ ಕಂಚಿನ ಮೂರ್ತಿಯ ಕಾಲಿನ ಭಾಗ ಮಾತ್ರವಿದ್ದು, ದೇಹದ ಉಳಿದ ಭಾಗ ತೆರವು ಮಾಡಲಾಗಿದೆ. ಜಿಲ್ಲಾ ನಿರ್ಮಿತಿ ಕೇಂದ್ರದ ಮೇಲ್ವಿಚಾರಣೆಯಲ್ಲಿ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಮೂರ್ತಿ ತೆರವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಜನರ ದಿಕ್ಕು ತಪ್ಪಿಸಿ ಕಾಮಗಾರಿ ನಡೆಸುವ ಅಗತ್ಯ ಇಲ್ಲ. ಈ ಬಗ್ಗೆ ಎನ್‌ಐಟಿಕೆ ಹಾಗೂ ಎಂಐಟಿ ತಂತ್ರಜ್ಞರ ತಂಡ ಅಗಮಿಸಿ ಮೂರ್ತಿಯ ಅಡಿಪಾಯ ಪರಿಶೀಲನೆ ನಡೆಸಬೇಕು ಎಂದು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಮೂರ್ತಿಯ ಮೇಲಿನ ಭಾಗ ಫೈಬರ್ ನಿಂದ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತನ್ನು ಹೋರಾಟಗಾರರು ಹೇಳಿಕೊಂಡಿದ್ದರು. ಇದೀಗ ಮೂರ್ತಿಯನ್ನು ತೆರವುಗೊಳಿಸಿ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ನಾನಾ ರೀತಿಯ ಶಂಕೆಗೆ ಕಾರಣವಾಗಿದೆ

Drone footage reveals that Parashuram statue is missing from Theme Park. Viral drone footage released by Congress supporters displayed that, except for the foot and knee of the statue, all other parts of the statue had been removed in the name of project completion. The district administration and the local MLA had previously informed the media that the construction of the theme park was in its final stages and that public access was restricted due to ongoing construction work.