ಬ್ರೇಕಿಂಗ್ ನ್ಯೂಸ್
16-10-23 05:57 pm Mangalore Correspondent ಕರಾವಳಿ
ಮಂಗಳೂರು, ಅ.16: ವಾಮಂಜೂರಿನ ವೈಟ್ ಗ್ರೋವ್ ಅಣಬೆ ಉತ್ಪಾದನಾ ಕೇಂದ್ರದ ಆಸುಪಾಸಿನಲ್ಲಿ ಮತ್ತೆ ದುರ್ವಾಸನೆ ಬರತೊಡಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪಿಲಿಕುಳ ಬಳಿಯ ಆಶ್ರಯ ಕಾಲನಿಗೆ ಹೊಂದಿಕೊಂಡಿರುವ ಅಣಬೆ ಉತ್ಪಾದನಾ ಘಟಕದಿಂದಾಗಿ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು, ಮಾಧ್ಯಮಕ್ಕೆ ಆತಂಕ ಹೇಳಿಕೊಂಡಿದ್ದಾರೆ.
ಸ್ಥಳೀಯರ ವಿರೋಧದಿಂದಾಗಿ ಎರಡು ತಿಂಗಳ ಕಾಲ ವೈಟ್ ಗ್ರೋವ್ ಸಂಸ್ಥೆ ಅಣಬೆ ಉತ್ಪಾದನೆಯನ್ನೇ ನಿಲ್ಲಿಸಿತ್ತು. ಆನಂತರ, ಇತ್ತೀಚೆಗೆ ದುರ್ವಾಸನೆ ಬರದಂತೆ ಸೂಕ್ತ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೇಳಿ ಜಿಲ್ಲಾಡಳಿತದಿಂದ ಪರವಾನಗಿ ಪಡೆದು ಮತ್ತೆ ಘಟಕ ಆರಂಭಿಸಲಾಗಿತ್ತು. ಆದರೆ ದುರ್ವಾಸನೆ ಹಾಗೆಯೇ ಇದೆ, ಆಗಿಂದಾಗ್ಗೆ ವಿಪರೀತ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅಲ್ಲದೆ, ಈ ರೀತಿಯ ದುರ್ವಾಸನೆಯಿಂದಾಗಿ ಮಕ್ಕಳಿಗೂ ಉಸಿರಾಟದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇತ್ತೀಚೆಗೆ ಆಶ್ರಯ ಕಾಲನಿಯಲ್ಲಿ ಬಾಡಿಗೆ ಮನೆ ಹೊಂದಿದ್ದ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರ ಮಗು ಉಸಿರಾಟದ ಸಮಸ್ಯೆಯಿಂದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿತ್ತು. ಪದೇ ಪದೇ ಉಸಿರಾಟದ ಸಮಸ್ಯೆ ಆಗುತ್ತಿದ್ದುದರಿಂದ ವೈದ್ಯರು ಬೇರೆ ಕಡೆಗೆ ಹೋಗಿ ನೋಡಿ ಎಂದಿದ್ದರಂತೆ. ಅದರಂತೆ, ಕಾರ್ಮಿಕರ ಕುಟುಂಬ ಅಲ್ಲಿನ ಮನೆಯನ್ನೇ ಬಿಟ್ಟು ಊರಿಗೆ ತೆರಳಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಇದೇ ರೀತಿ ಎರಡು ಕುಟುಂಬದ ಮಕ್ಕಳಿಗೆ ತೊಂದರೆ ಆಗಿದೆಯಂತೆ. ಈ ಬಗ್ಗೆ ಮಗುವಿನ ಹೆತ್ತವರ ಅನಿಸಿಕೆ ಕೇಳಲು ಅವರು ಲಭ್ಯರಾಗಿಲ್ಲ. ಸ್ಥಳಕ್ಕೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೂ ದುರ್ವಾಸನೆ ಎದುರಾಗಿದ್ದು, ಮೂಗು ಮುಚ್ಚಿಕೊಳ್ಳುವ ಸ್ಥಿತಿ ಇತ್ತು.
ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್ ಸ್ಥಳಕ್ಕೆ ಬಂದು ನಿವಾಸಿಗಳ ಅಳಲು ಕೇಳಿದ್ದಾರೆ. ಹಲವು ಬಾರಿ ಪ್ರತಿಭಟನೆ ಮಾಡಿದರೂ, ಸಮಸ್ಯೆ ನಿವಾರಣೆ ಆಗಿಲ್ಲ. ಇತ್ತೀಚೆಗೆ ಈ ಹಿಂದಿನ ಜಿಲ್ಲಾಧಿಕಾರಿ ರವಿಕುಮಾರ್, ಅಣಬೆ ಉತ್ಪಾದನಾ ಘಟಕವನ್ನೇ ನಿಲ್ಲಿಸಲು ಸೂಚಿಸಿದ್ದರು. ಆದರೆ ಎರಡೇ ದಿನದಲ್ಲಿ ಆ ಜಿಲ್ಲಾಧಿಕಾರಿಯನ್ನು ವರ್ಗ ಮಾಡಲಾಗಿತ್ತು. ಹಾಗಾಗಿ ಈ ಘಟಕದ ಮಾಲೀಕರು ಅಷ್ಟು ಪ್ರಭಾವಿ ಇದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ. ಇನ್ನೆರಡು ದಿನದಲ್ಲಿ ಮಹಾನಗರ ಪಾಲಿಕೆಯಿಂದ ನಿಯೋಗ ಕರೆತಂದು ಆರೋಗ್ಯ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಸುತ್ತೇನೆ ಎಂದು ಹೇಮಲತಾ ಹೇಳಿದ್ದಾರೆ. ನಿಜಕ್ಕಾದರೆ, ನಗರ ಪ್ರದೇಶದಲ್ಲಿ ಯಾವುದೇ ಕೈಗಾರಿಕೆ ಆರಂಭಗೊಳ್ಳುವುದಿದ್ದರೂ, ಅದಕ್ಕೆ ಅನುಮತಿ ನೀಡುವುದೇ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ. ಅಣಬೆ ಉತ್ಪಾದನಾ ಘಟಕಕ್ಕೂ ಬಿಜೆಪಿ ಆಡಳಿತ ಇರುವ ಮಹಾನಗರ ಪಾಲಿಕೆಯೇ ಅನುಮತಿ ಕೊಟ್ಟಿದೆ. ಸ್ಥಳೀಯವಾಗಿ ಬಿಜೆಪಿ ಕಾರ್ಪೊರೇಟರ್ ಇದ್ದರೂ, ಜನರ ಸಮಸ್ಯೆ ಆಲಿಸುವಲ್ಲಿ ಪಾಲಿಕೆಯ ಆಡಳಿತ ಮುಂದಾಗಿಲ್ಲವೇ ಎನ್ನುವ ಪ್ರಶ್ನೆ ಬಂದಿದೆ.
ಅಣಬೆ ಕಡಿಮೆ ಸಮಯದಲ್ಲಿ ಉತ್ಪಾದನೆಗೊಳ್ಳಲು ಬೈಹುಲ್ಲುಗಳಿಗೆ ಕೆಮಿಕಲ್ ಬಳಸುತ್ತಾರೆ. ವೈಟ್ ಗ್ರೋವ್ ಸಂಸ್ಥೆಯಲ್ಲಿ ಪ್ರತಿ ದಿನವೂ ಅಣಬೆ ಬೆಳೆದು ಮಾರುಕಟ್ಟೆಗೆ ಪೂರೈಕೆ ಆಗುತ್ತದೆ. ಅಲ್ಲಿ ಬಳಸುತ್ತಿರುವ ಕೆಮಿಕಲ್ ಕಾರಣದಿಂದಲೇ ದುರ್ವಾಸನೆ ಬರುತ್ತಿದೆ ಅನ್ನುವ ಮಾತನ್ನು ಸ್ಥಳೀಯರು ಹೇಳುತ್ತಾರೆ. ಕೆಮಿಕಲ್ ಬಳಸುವುದಿದ್ದರೆ, ಜನವಸತಿ ಇಲ್ಲದ ಪ್ರದೇಶದಲ್ಲಿ ಇಂತಹ ಕೈಗಾರಿಕೆ ಮಾಡಬೇಕು. ಆಶ್ರಯ ಕಾಲನಿಯಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಅದರ ಮಧ್ಯೆ ಅಣಬೆ ತಯಾರಿ ಕೇಂದ್ರ ಆರಂಭಿಸಿದ್ದು ಯಾಕೆಂದು ಜನರು ಕೇಳುತ್ತಿದ್ದಾರೆ.
A foul smell has started emanating again in the vicinity of the White Grove mushroom manufacturing centre in Vamanjoor, causing panic among the locals. Local residents are suffering due to the mushroom manufacturing unit adjacent to the shelter colony near Pilikula and have expressed concern to the media.
27-04-25 09:22 pm
HK News Desk
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
27-04-25 08:42 pm
HK News Desk
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
ಸಿಂಧು ನದಿಯನ್ನು ತಡೆದರೆ ರಕ್ತ ಹರಿಯುತ್ತದೆ ; ಮಾಜಿ...
26-04-25 08:21 pm
Iran Blast: ಇರಾನ್ ಬಂದರಿನಲ್ಲಿ ಭಯಾನಕ ಸ್ಫೋಟ ; 4...
26-04-25 07:46 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm