ಬ್ರೇಕಿಂಗ್ ನ್ಯೂಸ್
28-10-23 09:13 pm Mangalore Correspondent ಕರಾವಳಿ
ಮಂಗಳೂರು, ಅ.28: ರಾವಳಿಯಲ್ಲಿ ಮೀನುಗಳ ಕ್ಷಾಮ ಎದುರಾಗುವುದನ್ನು ತಪ್ಪಿಸಲು ಮೀನುಗಾರಿಕೆ ಇಲಾಖೆಯಿಂದ ಹೊಸ ಪ್ರಯೋಗಕ್ಕೆ ಯತ್ನ ನಡೆದಿದೆ. ತಮಿಳುನಾಡು, ಕೇರಳ ಭಾಗದಲ್ಲಿ ಯಶಸ್ವಿಯಾಗಿರುವ ಪ್ರಯೋಗವನ್ನು ಕರ್ನಾಟಕದ ಕರಾವಳಿಯಲ್ಲೂ ಜಾರಿಗೆ ತರಲು ಇಲಾಖೆ ಮುಂದಾಗಿದೆ. ಇದರಂತೆ, ಕಡಲಿನ ಕರಾವಳಿಯ ನಿರ್ದಿಷ್ಟ ಸ್ಥಳಗಳಲ್ಲಿ ಕೃತಕ ಕಾಂಕ್ರೀಟ್ ಕಲ್ಲುಗಳನ್ನು ಇಟ್ಟು ಆ ಭಾಗದಲ್ಲಿ ಮೀನುಗಳ ಸಂತಾನೋತ್ಪತ್ತಿ ಹೆಚ್ಚಿಸಲು ಯೋಜನೆ ಹಾಕಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ 56 ಜಾಗಗಳನ್ನು ಇದಕ್ಕಾಗಿ ಗುರುತಿಸಿದ್ದು, ಆರ್ಟಿಫಿಷಿಯಲ್ ರೀಫ್ (ಕೃತಕ ಬಂಡೆ)ಗಳನ್ನು ಸಮುದ್ರದಲ್ಲಿ ಹಾಕಲು ಯೋಜನೆ ತಯಾರಿಸಲಾಗಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಈ ರೀತಿಯ ಪ್ರಯೋಗ ಯಶಸ್ಸು ಕಂಡಿದೆ ಎನ್ನಲಾಗುತ್ತಿದ್ದು, ಕೃತಕ ಕಲ್ಲು ಬಂಡೆಗಳನ್ನು ಹಾಕಿರುವಲ್ಲಿ ಮೀನುಗಳ ಸಂತಾನೋತ್ಪತ್ತಿ ಹೆಚ್ಚಿರುವುದು ಕಂಡುಬಂದಿದೆ.
ತಮಿಳುನಾಡು ಕರಾವಳಿಯಲ್ಲಿ ವ್ಯಾಪಕ ಮೀನುಗಾರಿಕೆಯಿಂದಾಗಿ ಮೀನಿನ ಕ್ಷಾಮ ಎದುರಾಗಿತ್ತು. ಇಂಥ ಸಂದರ್ಭದಲ್ಲಿ ಸೆಂಟ್ರಲ್ ಮೆರೈನ್ ಫಿಶರೀಸ್ ರೀಸರ್ಚ್ ಇನ್ ಸ್ಟಿಟ್ಯೂಟ್ ಸಂಸ್ಥೆಯ ತಜ್ಞರು ಅಧ್ಯಯನ ನಡೆಸಿ, ಕೃತಕ ಕಲ್ಲು ಬಂಡೆಗಳನ್ನು ಸಮುದ್ರಕ್ಕೆ ಹಾಕಲು ಯೋಜನೆ ತಯಾರಿಸಿದ್ದರು. ಇದಕ್ಕಾಗಿ ಕೇಂದ್ರ ಸರಕಾರದಿಂದ ದೊಡ್ಡ ಮೊತ್ತದ ಬಜೆಟನ್ನೂ ನೀಡುವಂತೆ ಮಾಡಿದ್ದರು. ಕಾಂಕ್ರೀಟ್ ನಲ್ಲಿ ತಯಾರಿಸಿದ ಬೇರೆ ಬೇರೆ ರೀತಿಯ ಆಕೃತಿಗಳನ್ನು ಒಳಗೊಂಡ ಕಲ್ಲಿನ ಬಂಡೆಗಳನ್ನು ಸಮುದ್ರಕ್ಕೆ ಇಳಿಸಿ, ಅವುಗಳ ಎಡೆಯಲ್ಲಿ ಮೀನುಗಳು ಮೊಟ್ಟೆಯಿಟ್ಟು ಸಂತಾನೋತ್ಪತ್ತಿಗೆ ಅವಕಾಶ ನೀಡಲಾಗಿತ್ತು. ಸಾಮಾನ್ಯವಾಗಿ ಮೀನುಗಳು ತಮಗೆ ಆಹಾರ ಸಿಗಬಲ್ಲ ಪಾಚಿ ಕಟ್ಟಿದ ಪ್ರದೇಶದಲ್ಲಿ ಮಾತ್ರ ಮೊಟ್ಟೆಗಳನ್ನಿಡುತ್ತವೆ. ಸಮುದ್ರದ ಆಳದಲ್ಲಿ ಕೃತಕ ಕಂಬಗಳ ಮಾದರಿಯ ಕಲ್ಲು ಬಂಡೆಗಳನ್ನು ಇರಿಸಿದಲ್ಲಿ ಅವುಗಳಿಗೆ ಪಾಚಿ ಕಟ್ಟಿ ಮೀನುಗಳು ಮೊಟ್ಟೆಯಿಟ್ಟು ಸಂತಾನ ವೃದ್ಧಿಗೆ ಅವಕಾಶ ಆಗುತ್ತದೆ ಅನ್ನುವುದು ಇದರ ಹಿಂದಿನ ಪರಿಕಲ್ಪನೆ.
ಕೇರಳ, ತಮಿಳುನಾಡಿನಲ್ಲಿ ಇಂತಹ ಪ್ರಯತ್ನದಿಂದ ನಾಲ್ಕೈದು ವರ್ಷಗಳಲ್ಲಿ ಮೀನುಗಳು ಆ ಭಾಗದಲ್ಲಿ ಹೆಚ್ಚಿದ್ದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಜ್ಞರ ತಂಡ ದಕ್ಷಿಣ ಕನ್ನಡದಿಂದ ಕಾರವಾರದ ವರೆಗಿನ ಕರಾವಳಿ ಸಮುದ್ರದಲ್ಲಿ ಅಧ್ಯಯನ ಕೈಗೊಂಡು ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿದೆ. ತೀರದಿಂದ 6 ನಾಟಿಕಲ್ ಮೈಲು ದೂರದಲ್ಲಿ ಹೆಚ್ಚು ಆಳ ಇರದ ಹತ್ತರಿಂದ 20 ಅಡಿ ಆಳ ಇರುವಲ್ಲಿ ಇಂತಹ ಕಲ್ಲು ಬಂಡೆಗಳನ್ನ ಇರಿಸಲಾಗುತ್ತಿದೆ. ಇಂತಹ ಪ್ರದೇಶಗಳಲ್ಲಿ ಆಳ ಸಮುದ್ರ ಮೀನುಗಾರಿಕೆಯ ಗಿಲ್ ನೆಟ್, ಟ್ರಾಲಿಂಗ್, ಲೈಟ್ ಫಿಶಿಂಗ್ ನಡೆಸದಂತೆ ಸೂಚನೆಯೂ ಇರುತ್ತದೆ. ಬೃಹತ್ ಗಾತ್ರದ ಕಲ್ಲು ಇರಿಸುವುದರಿಂದ ಆ ಜಾಗದಲ್ಲಿ ಬೃಹತ್ ಬೋಟ್ ಹೋದಲ್ಲಿ ತೊಂದರೆ ಎದುರಾಗುವ ಸಾಧ್ಯತೆಯೂ ಇರುತ್ತದೆ.
ಸದ್ಯಕ್ಕೆ ಮಂಗಳೂರಿನ ಸೋಮೇಶ್ವರ, ಉಳ್ಳಾಲ, ಪಣಂಬೂರು, ಬೈಕಂಪಾಡಿ, ಹೊಸಬೆಟ್ಟು ಸುರತ್ಕಲ್, ಮೂಲ್ಕಿ, ಸಸಿಹಿತ್ಲು ಹಾಗೂ ಉಡುಪಿ ಜಿಲ್ಲೆಯ ಹೆಜಮಾಡಿ, ಪಡುಬಿದ್ರಿ, ತೆಂಕ ಎರ್ಮಾಳು, ಬಡ ಎರ್ಮಾಳು, ಕಾಪು ಲೈಟ್ ಹೌಸ್, ಕೋಡಿ ಕನ್ಯಾನ, ಮಣೂರು, ಗೋಪಾಡಿ, ಮರವಂತೆ, ನಾವುಂದ, ಬೀಜಾಡಿ, ಕೆಸರಕೋಡಿ ಪ್ರದೇಶವನ್ನು ಗುರುತಿಸಿದ್ದು ಅಲ್ಲಿ ಕೃತಕ ಕಲ್ಲು ಬಂಡೆಗಳನ್ನು ಸಮುದ್ರಕ್ಕೆ ಹಾಕಲು ಮೀನುಗಾರಿಕಾ ಇಲಾಖೆ ಯೋಜಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 36 ಜಾಗಗಳನ್ನು ಗುರುತು ಮಾಡಲಾಗಿದೆ.
ಕರಾವಳಿ ಭಾಗದಲ್ಲಿ ರಾತ್ರಿ ವೇಳೆ ಲೈಟ್ ಫಿಶಿಂಗ್ ನಡೆಸೋದು, ಕೈಗಾರಿಕೆಗಳ ಮಾಲಿನ್ಯವನ್ನು ನೇರವಾಗಿ ಸಮುದ್ರಕ್ಕೆ ಬಿಡುವುದು, ಜೂನ್- ಜುಲೈ ತಿಂಗಳ ನಿಷೇಧ ಅವಧಿಯಲ್ಲಿ ಮೀನುಗಾರಿಕೆ ನಡೆಸುವುದು ಮೀನುಗಳ ಕ್ಷಾಮಕ್ಕೆ ಕಾರಣ. ಅನಿಯಂತ್ರಿತ ಮೀನುಗಾರಿಕೆಯಿಂದಾಗಿ ಕರಾವಳಿ ಭಾಗದಲ್ಲಿ ಡಿಸೆಂಬರ್ ಕಳೆದರೆ ಮೀನುಗಳ ಕ್ಷಾಮ ಎದುರಾಗುತ್ತದೆ. ಆದರೆ ಈ ರೀತಿಯ ವೈರುಧ್ಯಗಳಿಗೆ ನಿಯಂತ್ರಣ ಹಾಕುವ ಬದಲು ಸಮುದ್ರಕ್ಕೆ ಕಲ್ಲು ಹಾಕಲು ಯೋಜನೆ ಹಾಕಿದ್ದು, ಕಡಲ್ಕೊರೆತಕ್ಕೆ ಕಲ್ಲು ಹಾಕಿ ಕೋಟ್ಯಂತರ ರೂ. ಅನುದಾನ ಪೋಲು ಮಾಡಿದ ರೀತಿ ಆದೀತು ಅನ್ನುವ ಮಾತುಗಳೂ ಮೀನುಗಾರರಿಂದ ಕೇಳಿಬರುತ್ತಿದೆ.
Duplicate sea stacks placed beneath sea to increase fish generation in Mangalore.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm