ಬ್ರೇಕಿಂಗ್ ನ್ಯೂಸ್
29-10-23 05:27 pm Mangalore Correspondent ಕರಾವಳಿ
ಉಳ್ಳಾಲ, ಅ.29: ಸಿನೆಮಾ ಶೂಟಿಂಗ್ ವೇಳೆ ಸಹ ನಟನ ಬಾಯಿ ತಪ್ಪಿಂದ ಕೊರಗಜ್ಜನ ಡೈಲಾಗ್ ಬಂದಿದ್ದು ಅದಕ್ಕಾಗಿ ಕೊರಗಜ್ಜನ ಸಾನಿಧ್ಯಕ್ಕೆ ಬಂದು ತನ್ನ ನಾಯಕ ನಟನೆಯ ನೂತನ ಸಿನೆಮಾ "ಕಾಲಾಯ ನಮಃ"ದ ಯಶಸ್ಸಿಗೆ ಪ್ರಾರ್ಥಿಸಿರುವುದಾಗಿ ಸ್ಯಾಂಡಲ್ ವುಡ್ ನಟ ಮಿಸ್ಟರ್ ಗರಗಸ ಖ್ಯಾತಿಯ ಕೋಮಲ್ ಹೇಳಿದ್ದಾರೆ.
ನಟ ಕೋಮಲ್ ಇಂದು ಪತ್ನಿ ಅನುಸೂಯ ಜೊತೆ ಮಂಗಳೂರು ಹೊರವಲಯದ ಕಲ್ಲಾಪು, ಬುರ್ದುಗೋಳಿ ಗುಳಿಗ, ಕೊರಗತನಿಯ ಉದ್ಭವ ಶಿಲೆಯ ಆದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು."ಕಾಲಾಯ ನಮಃ" ಸಿನೆಮಾ ಶೂಟಿಂಗ್ ಸನ್ನಿವೇಶವೊಂದರಲ್ಲಿ ಸಹನಟ ಶೈನ್ ಶೆಟ್ಟಿಯವರು ಹೇಯ್ ನಿನಗೆ ಒಳ್ಳೆದಾಯ್ತು ಮಾರಾಯ.. ಕೊರಗಜ್ಜನಿಗೆ ಚಕ್ಕುಳಿ, ವೀಳ್ಯ ಇಟ್ಟು ಪ್ರಸಾದ ತಗೊಳ್ಳಬೇಕೆಂದು ಬಾಯಿ ತಪ್ಪಿ ಡೈಲಾಗ್ ಹೇಳಿದ್ದರು. ಶೂಟಿಂಗ್ ಬ್ರೇಕ್ ವೇಳೆ ಶೈನ್ ಶೆಟ್ಟಿ ಅವರಲ್ಲಿ ವಿಚಾರಿಸಿದಾಗ ಕೊರಗಜ್ಜ ದೈವದ ಕಾರಣಿಕದ ಬಗ್ಗೆ ನನಗೆ ವಿವರಿಸಿದ್ದಾರೆ. ಹಾಗಾಗಿ ಸಿನೆಮಾ ಬಿಡುಗಡೆಗೂ ಮುನ್ನ ಕೊರಗಜ್ಜನಲ್ಲಿಗೆ ಬಂದು ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿರೋದಾಗಿ ಕೋಮಲ್ ಹೇಳಿದರು.



ಈಗಾಗಲೇ ನಮೋ ಭೂತಾತ್ಮ 2 ಮತ್ತು ಉಂಡೇನಾಮ ಸಿನೆಮಾಗಳು ರಿಲೀಸ್ ಆಗಿ ಯಶಸ್ಸು ಗಳಿಸಿದೆ. ಮುಂದೆ ನನ್ನ ನಟನೆಯ ರೊಲ್ಯಾಕ್ಸ್ , ಹುಕುಂ, ವಜ್ರಮುನಿ, ಕೋಣ ಮೊದಲಾದ ಸಿನೆಮಾಗಳು ಚಿತ್ರೀಕರಣಗೊಳ್ಳುತ್ತಿದ್ದು ಶೀಘ್ರದಲ್ಲೇ ಬಿಡುಗಡೆಗೊಳ್ಳಲಿವೆ ಎಂದರು. ಕೋಮಲ್ ಆಪ್ತರಾದ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕ ಬಾಲಕೃಷ್ಣ, ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ನಾಯ್ಕ್, ಗೌರವ ಸಲಹೆಗಾರರಾದ ಚಂದ್ರಹಾಸ್ ಪಂಡಿತ್ ಹೌಸ್, ಗೌರವ ಅಧ್ಯಕ್ಷರಾದ ಸಂಜೀವ ಭಂಡಾರಿ, ಪ್ರಮುಖರಾದ ದೇವದಾಸ್ ಕಾಯಂಗಲ, ಕಮಲಾಕ್ಷ ವಿ ಕುಲಾಲ್, ನವೀನ್ ಕಾಯಂಗಳ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.
Komal kannada actor visits Kallapu, Burdugoli temple in Mangalore.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm