ಬ್ರೇಕಿಂಗ್ ನ್ಯೂಸ್
31-10-23 11:00 am Mangaluru Correspondent ಕರಾವಳಿ
ಮಂಗಳೂರು, ಅ.31: ಕರಾವಳಿಯ ಪ್ರಖ್ಯಾತ "ಆಭರಣ" ಸಂಸ್ಥೆಯ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಉಡುಪಿ, ಮಂಗಳೂರು, ಬೆಳ್ತಂಗಡಿ, ಪಡುಬಿದ್ರಿ, ಬ್ರಹ್ಮಾವರ ಸೇರಿದಂತೆ ಸಂಸ್ಥೆಯ ಮಳಿಗೆಗಳಲ್ಲಿ ದಾಳಿ ನಡೆಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಸಂಸ್ಥೆಯ ಎಲ್ಲ ಆಭರಣ ಮಳಿಗೆಗಳ ಒಳಹೊಕ್ಕಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸಾಮಾನ್ಯವಾಗಿ ಜುವೆಲ್ಲರಿ ಸಂಸ್ಥೆಯ ಮಳಿಗೆ 9.30ರ ವೇಳೆಗೆ ತೆರೆದುಕೊಳ್ಳುತ್ತದೆ. ಎಂದಿನಂತೆ ನೌಕರರು ಮಳಿಗೆಯ ಕಡೆಗೆ ಬರುತ್ತಿದ್ದಂತೆ ಶಾಕ್ ಆಗಿದ್ದು ಅದಾಗಲೇ ಮಳಿಗೆ ಓಪನ್ ಆಗಿತ್ತು. ಐಟಿ ಅಧಿಕಾರಿಗಳು ಒಳಗಡೆ ತಪಾಸಣೆಯಲ್ಲಿ ತೊಡಗಿದ್ದರು.


ಉಡುಪಿ ಮತ್ತು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಭರಣ ಜುವೆಲ್ಲರಿ ಸಂಸ್ಥೆ ಹದಿನೈದು ವರ್ಷಗಳ ಮೊದಲಿಗೆ ಉಡುಪಿಯಲ್ಲಿ ಆರಂಭಗೊಂಡಿತ್ತು. ಗುಜ್ಜಾಡಿ ನರಸಿಂಹ ನಾಯಕ್ ಸೋದರರು ಮಳಿಗೆಯನ್ನು ಸ್ಥಾಪಿಸಿದ್ದು ಆನಂತರದ ವರ್ಷಗಳಲ್ಲಿ ರಾಜ್ಯಾದ್ಯಂತ ಮಳಿಗೆಯನ್ನು ಆರಂಭಿಸಿದ್ದರು. ಉಡುಪಿ ಜಿಲ್ಲೆಯ ಉಡುಪಿ, ಪಡುಬಿದ್ರಿ, ಬ್ರಹ್ಮಾವರ, ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮೂರು ಕಡೆ ಜುವೆಲ್ಲರಿ ಇದೆ. ಬಂಟ್ವಾಳ, ಬೆಳ್ತಂಗಡಿಯಲ್ಲೂ ಶಾಖೆ ಇದೆ. ಆಬಳಿಕ ಬೆಂಗಳೂರು, ಶಿವಮೊಗ್ಗದಲ್ಲಿಯೂ ಮಳಿಗೆ ಸ್ಥಾಪನೆಯಾಗಿತ್ತು.
ದಿಢೀರ್ ಐಟಿ ಇಲಾಖೆಯ ದಾಳಿಯಿಂದಾಗಿ ಮಳಿಗೆಯ ನೌಕರರು, ಸಂಸ್ಥೆಯ ಮಾಲಕರು ಬೆಚ್ಚಿ ಬಿದ್ದಿದ್ದಾರೆ. ಅಧಿಕಾರಿಗಳು ಜುವೆಲ್ಲರಿ ಸಂಸ್ಥೆಯ ವಹಿವಾಟು, ಆಸ್ತಿ, ತೆರಿಗೆ ಸಂಗ್ರಹ ವಿಚಾರದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನ ಕದ್ರಿಯ ಶಿವಭಾಗ್ ನಲ್ಲಿ ಆಭರಣ ಜ್ಯುವೆಲ್ಲರಿಗೂ ಐಟಿ ದಾಳಿಯಾಗಿದ್ದು ಐಟಿ ಅಧಿಕಾರಿಗಳು ಟ್ಯಾಕ್ಸಿ ಇನೋವಾ ವಾಹನಗಳಲ್ಲಿ ದಾಳಿಗೆ ಬಂದಿದ್ದರು. ಐದಾರು ಮಂದಿ ಅಧಿಕಾರಿಗಳು ತಪಾಸಣೆಯಲ್ಲಿ ತೊಡಗಿದ್ದು ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ ಎನ್ನುವ ಮಾಹಿತಿಯಿದ್ದು ಎಲ್ಲ ಕಡೆಯೂ ದಾಳಿ ಆಗಿದೆ ಎನ್ನಲಾಗುತ್ತಿದೆ.
Income Tax (IT) officials conducted routine checks at the showrooms of Abharan Jewellers, a renowned jeweller of brand of coastal Karnataka, on Tuesday October 31. The routine checks by the IT officials began in the morning at multiple showrooms of the jewellery brand at Udupi, Mangaluru, Hebri, Karkala and Brahmavar.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm