ಬ್ರೇಕಿಂಗ್ ನ್ಯೂಸ್
06-11-23 12:09 pm Mangalore Correspondent ಕರಾವಳಿ
ಉಳ್ಳಾಲ, ನ.6: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಐದು ವರ್ಷದ ಹೆಣ್ಮಗಳ ಚಿಕಿತ್ಸೆಗಾಗಿ ಉಳ್ಳಾಲದ ಟೀಮ್ ಹನುಮಾನ್ ಸಂಘಟನೆಯ ಉತ್ಸಾಹಿ ಯುವಕರ ತಂಡವು ನವರಾತ್ರಿಯಂದು ವೇಷ ಧರಿಸಿ ಕುಣಿದು ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ದುಡ್ಡನ್ನು ದೇಣಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಉಳ್ಳಾಲ ಧರ್ಮನಗರ ನಿವಾಸಿ ರಂಜಿನಿ ಎಂಬವರ ಐದು ವರ್ಷದ ಮಗಳು ಶ್ರೇಯಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ರಂಜಿನಿ ಅವರ ಕುಟುಂಬ ಆರ್ಥಿಕವಾಗಿ ಸೊರಗಿದ್ದು ಮಗಳ ಕಾಯಿಲೆಯ ಚಿಕಿತ್ಸೆಗೆ ಹಣ ಭರಿಸಲು ಅಶಕ್ತವಾಗಿದೆ. ಶ್ರೇಯಾಳ ಚಿಕಿತ್ಸೆಗೆ ಸಹಕರಿಸಲು ಮುಂದಾದ ಸ್ಥಳೀಯ ಟೀಮ್ ಹನುಮಾನ್ ತಂಡದ ಎಳೆಯ ಪ್ರಾಯದ ಯುವಕರು ಕಳೆದ ನವರಾತ್ರಿಯಂದು ಯಕ್ಷಗಾನ ಶೈಲಿಯ ವೇಷ ಧರಿಸಿ ಮನೆ ಮನೆಗೆ ತೆರಳಿ ಕುಣಿದು ಹಣ ಸಂಪಾದಿಸಿದ್ದಾರೆ.
ಅಲ್ಲದೆ, ಉಳ್ಳಾಲ ಶಾರದೋತ್ಸವಕ್ಕೂ ಟ್ಯಾಬ್ಲೋ ಇಳಿಸಿ ಶೋಭಾಯಾತ್ರೆಗೆ ಮೆರುಗು ನೀಡಿದ್ದಾರೆ. ವೇಷ ತೊಟ್ಟು ಕ್ರೋಢೀಕರಿಸಿದ ಒಟ್ಟು 1,67,649 ರೂಪಾಯಿಗಳ ಚೆಕ್ಕನ್ನ ಧರ್ಮ ನಗರದ ನಾಗ ಸಾನಿಧ್ಯದಲ್ಲಿ ಟೀಮ್ ಹನುಮಾನ್ ಯುವಕರು ಹಿರಿಯರ ಕೈಯಿಂದ ರಂಜಿನಿ ಅವರಿಗೆ ಹಸ್ತಾಂತರಿಸಿದ್ದಾರೆ. ಕಳೆದ ವರ್ಷವೂ ಯುವಕರು ನವರಾತ್ರಿಗೆ ವೇಷ ಧರಿಸಿ ಸಂಗ್ರಹಗೊಂಡ 1,26,000 ರೂ.ಗಳನ್ನ ಮೂಡುಬಿದಿರೆಯ ಐದು ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿ ಶ್ರೇಯಾ ಎಂಬವಳಿಗೆ ನೀಡಿದ್ದು ಆಕೆ ಈಗ ಕ್ಯಾನ್ಸರ್ ನಿಂದ ಗುಣಮುಖವಾಗಿ ಶಾಲೆಗೆ ತೆರಳುತ್ತಿರುವುದು ಖುಷಿ ಕೊಟ್ಟಿದೆ ಎಂದು ತಂಡದ ಮುಖ್ಯಸ್ಥ ಜಗದೀಶ್ ಗೋಳಿಯಾಡಿ ತಿಳಿಸಿದ್ದಾರೆ.
ಸರಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿರುವ ಖಾಸಗಿ ಮೆಡಿಕಲ್ ಮಾಫಿಯಾಗಳ ಮುಂದೆ ಬಡ ಜನರು ಕಾಯಿಲೆ ಗುಣಪಡಿಸಲು ದಿನನಿತ್ಯವೂ ಭಿಕ್ಷೆ ಬೇಡುವ ಸ್ಥಿತಿ ಬಂದೊದಗಿದೆ. ಇಂತಹ ಕಾಲ ಘಟ್ಟದಲ್ಲಿ ಪರರ ಕಣ್ಣೀರೊರೆಸಲು ವೇಷ ಧರಿಸಿ ಹಣ ಸಂಗ್ರಹಿಸುವ ಯುವಕರ ಉದಾರತೆಗೆ ಶಹಬಾಷ್ ಎನ್ನಲೇ ಬೇಕು.
Ullal Five year old girl suffers from Heart issue, Youths collect money by dancing for Dasara, donate 1.70 lakhs in Mangalore.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm