ಬ್ರೇಕಿಂಗ್ ನ್ಯೂಸ್
11-12-23 04:39 pm Mangalore Correspondent ಕರಾವಳಿ
ಉಳ್ಳಾಲ, ಡಿ.11: ವಿವಿಧ ಕಾರಣಗಳಿಂದ ರಾಜ್ಯದ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ತೆರವಾದ, ಖಾಲಿ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗವು ಉಪ ಚುನಾವಣೆ ನಡೆಸಲು ಆದೇಶಿಸಿದ್ದು ಸೋಮೇಶ್ವರ ಪುರಸಭೆಗೆ ಬರೋಬ್ಬರಿ ನಾಲ್ಕು ವರುಷದ ಬಳಿಕ ಡಿ.27 ರಂದು ಚುನಾವಣೆ ನಡೆಯಲಿದೆ.
ಓಬಿಸಿ ಮೀಸಲಾತಿ ಕುರಿತಾದ ಕಾನೂನು ಹೋರಾಟ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ರಾಜ್ಯದ ಬಹಳಷ್ಟು ನಗರ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಅಧಿಕಾರಿಗಳೇ ಅಧಿಕಾರ ನಡೆಸುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗಿತ್ತು. 61 ಸದಸ್ಯ ಬಲವಿದ್ದ ಸೋಮೇಶ್ವರ ಗ್ರಾಮ ಪಂಚಾಯಿತಿ 2019 ರ ಜೂನ್ ತಿಂಗಳಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಐದೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಸಹಜವಾಗಿ ಮೊಟಕುಗೊಂಡಿತ್ತು. ಅಂದಿನಿಂದ ಸೋಮೇಶ್ವರ ಪುರಸಭೆಗೆ ಚುನಾವಣೆ ನಡೆದಿಲ್ಲ.
ಇದೀಗ ರಾಜ್ಯ ಚುನಾವಣಾ ಆಯೋಗವು ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಆದೇಶಿಸಿದ್ದು ಇದೇ ಡಿ.8 ರಂದು ಅಧಿಸೂಚನೆ ಹೊರಡಿಸಿದೆ. ಡಿ.15 ಅಭ್ಯರ್ಥಿಗಳಿಗೆ ನಾಮ ಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಡಿ.16 ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ಡಿ.18 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು ಡಿ.27 ರಂದು ಮತದಾನ ನಡೆಯಲಿದೆ. ಡಿ.30 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
ಸೋಮೇಶ್ವರ ಪುರಸಭೆಯಲ್ಲಿ 23 ವಾರ್ಡ್ ಗಳನ್ನ ವಿಂಗಡಿಸಲಾಗಿದ್ದು 23 ವಾರ್ಡ್ ಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮೀಸಲಾತಿ ಪ್ರಕಟಿಸಲಾಗಿದ್ದು ಅದರ ವಿವರ ಹೀಗಿದೆ.
ವಾರ್ಡ್ ಸಂಖ್ಯೆ 1 ಮುಂಡೋಳಿ- ಹಿಂದುಳಿದ ವರ್ಗ-ಎ(ಮಹಿಳೆ) 2. ಪ್ರಕಾಶ್ ನಗರ- ಸಾಮಾನ್ಯ, 3. ಲಕ್ಷ್ಮೀ ಗುಡ್ಡೆ, ಪ್ರಕಾಶ್ ನಗರ- ಹಿಂದುಳಿದ ವರ್ಗ-ಬಿ(ಮಹಿಳೆ) 4. ಪಿಲಾರು-ಸಾಮಾನ್ಯ, 5. ಆಶ್ರಯ ಕಾಲನಿ- ಹಿಂದುಳಿದ ವರ್ಗ(ಎ), 6. ಬಗಂಬಿಲ-ಪರಿಶಿಷ್ಟ ಪಂಗಡ, 7. ಮಡ್ಯಾರ್ -ಪರಿಶಿಷ್ಟ ಜಾತಿ, 8.ಕೃಷ್ಣನಗರ-ಹಿಂದುಳಿದ ವರ್ಗ(ಬಿ), 9.ಪಿಲಾರು ಅಂಬಿಕಾರೋಡ್-ಸಾಮಾನ್ಯ(ಮಹಿಳೆ), 10. ಚೇತನ ನಗರ- ಸಾಮಾನ್ಯ,11. ಹನುಮಾನ್ ನಗರ-ಹಿಂದುಳಿದ ವರ್ಗ(ಎ), 12.ಕುಜುಮ ಗದ್ದೆ-ಹಿಂದುಳಿದ ವರ್ಗ-ಎ (ಮಹಿಳೆ), 13.ಕುಂಪಲ-ಸಾಮಾನ್ಯ, 14.ಸರಸ್ವತ ಕಾಲನಿ,ಲಾಲ್ ಭಾಗ್-ಸಾಮಾನ್ಯ(ಮಹಿಳೆ), 15.ನೆಹರು ನಗರ-ಹಿಂದುಳಿದ ವರ್ಗ-ಎ(ಮಹಿಳೆ), 16.ಕನೀರು ತೋಟ ಕೊಲ್ಯ- ಸಾಮಾನ್ಯ,17. ಪರ್ಯತ್ತೂರು ಕೊಲ್ಯ-ಸಾಮಾನ್ಯ, 18.ಪೆರಿಬೈಲ್-ಹಿಂದುಳಿದ ವರ್ಗ(ಎ), 19.ಬೀರಿ- ಸಾಮಾನ್ಯ(ಮಹಿಳೆ), 20.ಸಂಕೋಳಿಗೆ-ಸಾಮಾನ್ಯ, 21.ಉಚ್ಚಿಲ-ಸಾಮಾನ್ಯ(ಮಹಿಳೆ), 22. ಕಾಟಂಗರ ಗುಡ್ಡೆ-ಸಾಮಾನ್ಯ(ಮಹಿಳೆ), 23.ಬಟ್ಟಪ್ಪಾಡಿ-ಸಾಮಾನ್ಯ (ಮಹಿಳೆ).
The State Election Commission has ordered by-elections to the vacant seats in urban and local bodies in the state, which fell vacant due to various reasons, and elections to the Someshwara Municipality will be held on December 27 after a gap of four years.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm