ಬ್ರೇಕಿಂಗ್ ನ್ಯೂಸ್

AVBP protest, Mangalore University: ಏಕಾಏಕಿ ಶುಲ್ಕ ಏರಿಕೆ ; ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ- ಗಾಜಿನ ಬಾಗಿಲು ಪುಡಿ, ಸರ್ಕಾರದ ಹಣ ಬರ್ತಾ ಇಲ್ಲ, ಏನ್ಮಾಡ್ಲಿ ಎಂದ ಕುಲಪತಿಗೆ ವಿದ್ಯಾರ್ಥಿಗಳ ತರಾಟೆ, ನಿಮ್ಮ ಹೊರೆಯನ್ನು ವಿದ್ಯಾರ್ಥಿಗಳಿಗೆ ಹಾಕ್ತೀರಾ ಎಂದು ಆಕ್ರೋಶ    |    ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ್, ಡೀಸೆಲ್ ಬಿಡಿ, ಇಂಧನವೇ ಇಲ್ಲದೆ ಓಡಲಿದೆ ರೈಲು ! ಬರೀ ನೀರು ಬಳಸ್ಕೊಂಡೇ ಹೈಡ್ರೋಜನ್ ರೈಲು, ಅತಿ ಕಡಿಮೆ ವೆಚ್ಚ, ಪರಿಸರ ಸ್ನೇಹಿ !    |    Waqf row, Mangalore, CM Siddaramaiah; ವಕ್ಫ್ ಆಸ್ತಿ ಹೆಸರಲ್ಲಿ ಭೂ ಕಬಳಿಕೆಗೆ ಮುಖ್ಯ ಕಾರ್ಯದರ್ಶಿಯಿಂದ್ಲೇ ಆದೇಶ ; ಖಬರಸ್ತಾನಕ್ಕೂ ಸಾವಿರಾರು ಎಕ್ರೆ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಗ್ರೀನ್ ಸಿಗ್ನಲ್, ‘ಗೊತ್ತಿಲ್ಲ, ನೋಟೀಸ್ ನೀಡಿಲ್ಲ’ ಎನ್ನುತ್ತಿದ್ದವರಿಗಿಲ್ಲಿದೆ ಸಾಕ್ಷ್ಯ!!    |   

Mangalore, girls Short movie, Film Festival 2023: ಕಿರುಚಿತ್ರ "ಹೈಡ್ ಅಂಡ್ ಸೀಕ್" ಪ್ರತಿಷ್ಠಿತ ಕೇನ್ಸ್ ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆ ; ಮಂಗಳೂರು ಮೂಲದ ಹುಡುಗಿ ಕರೆನ್ ನಿರ್ದೇಶನದ ಚಿತ್ರ 

11-12-23 08:00 pm       Mangalore Correspondent   ಕರಾವಳಿ

ಮಂಗಳೂರು ಮೂಲದ 20ರ ಹರೆಯದ ಹುಡುಗಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಕಿರು ಚಿತ್ರ ಹೈಡ್ & ಸೀಕ್ ಪ್ರತಿಷ್ಠಿತ ಕೇನ್ಸ್ ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಮಂಗಳೂರು, ಡಿ.11: ಮಂಗಳೂರು ಮೂಲದ 20ರ ಹರೆಯದ ಹುಡುಗಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಕಿರು ಚಿತ್ರ ಹೈಡ್ & ಸೀಕ್ ಪ್ರತಿಷ್ಠಿತ ಕೇನ್ಸ್ ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

"ಹೈಡ್ ಅಂಡ್ ಸೀಕ್" ಎಂಬ ಹೆಸರಿನ ಕಿರುಚಿತ್ರವನ್ನು ಭಾರತದ ಯುವ ನಿರ್ದೇಶಕಿ 20 ವರ್ಷ ವಯಸ್ಸಿನ ಮಿಸ್ ಕರೆನ್ ಕ್ಷಿತಿ ಸುವರ್ಣ ನಿರ್ದೇಶಿಸಿದ್ದಾರೆ. ಇದು ಸ್ಕಿಜೋಫ್ರೀನಿಯಾ ಮತ್ತು ಅದರ ತೀವ್ರ ಪರಿಣಾಮಗಳ ಕುರಿತು ಸಂದೇಶವನ್ನು ಹೊಂದಿರುವ 10 ನಿಮಿಷಗಳ ಕಿರುಚಿತ್ರವಾಗಿದೆ. ಖಿನ್ನತೆ ಮತ್ತು ಸ್ಕಿಜೊಫ್ರೀನಿಯಾ ಕಾಯಿಲೆಯಿಂದಾಗಿ ಕುಟುಂಬ ಹತ್ಯೆಗಳು / ಸಾಮೂಹಿಕ ಹತ್ಯೆಗಳನ್ನು ನೋಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಇದೇ ಕತೆಯನ್ನು ಮುಂದಿಟ್ಟು ಚಿತ್ರ ಮಾಡಿರುವುದು ವಿಶೇಷ. 

ಕರೆನ್ ಕ್ಷಿತಿ ಸುವರ್ಣ ಅವರು ತಮ್ಮ ಕ್ರಾಫ್ಟ್ ಮತ್ತು ಕಲೆಗಾಗಿ ಮೆಚ್ಚುಗೆ ಪಡೆದಿದ್ದಾರೆ. ಈ ಕಿರುಚಿತ್ರವನ್ನು ವಿಸಿಕಾ ಫಿಲಂಸ್ ಜೊತೆಗೆ ಮೋಹನ್ ಮತ್ತು ಮನು ಗೊರೂರ್ ಸಹ ನಿರ್ಮಾಪಕರಾಗಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅನಿಲ್ ಕುಮಾರ್ ಛಾಯಾಗ್ರಹಣವಿದೆ. ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ಸಂಯೋಜನೆಯ ಬಾಪಿ ತುತುಲ್ ಅವರ ಹಿನ್ನೆಲೆ ಸಂಗೀತವಿದೆ. 

ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಕಿರುಚಿತ್ರ ಪ್ರದರ್ಶಿಸಲಾಗಿದೆ.  ಅವುಗಳಲ್ಲಿ ದೊಡ್ಡದು ಕೇನ್ಸ್ ವಿಶ್ವ ಚಲನಚಿತ್ರೋತ್ಸವ. ಇದನ್ನು ಕೊಲಂಬಿಯನ್ ಇನ್‌ಕ್ಲೂಸಿನ್ ಫೆಸ್ಟಿವಲ್ ಸೇರಿದಂತೆ ಹಲವಾರು ಅರ್ಹತಾ ಚಲನಚಿತ್ರೋತ್ಸವದಲ್ಲಿ ಕೂಡ ಪ್ರದರ್ಶಿಸಲಾಗಿದೆ. ಈ ನಡುವೆ, ನಿರ್ದೇಶಕಿ ಕರೆನ್ ಕೂಡ ಈ ಚಿತ್ರವನ್ನು ಅಕಾಡೆಮಿ ಮತ್ತು BAFTA ಪ್ರಶಸ್ತಿಗಳಿಗೆ ಕಳುಹಿಸಲು ಸಜ್ಜಾಗುತ್ತಿದ್ದಾರೆ.

Mangalorean girls Short movie Hide and seek nominated for Cannes Film Festival 2023.