ಬ್ರೇಕಿಂಗ್ ನ್ಯೂಸ್
11-12-23 10:36 pm Mangalore Correspondent ಕರಾವಳಿ
ಉಳ್ಳಾಲ, ಡಿ.11: ಮಫ್ತಿಯಲ್ಲಿ ಡ್ರೆಸ್ಸು, ಸೊಂಟಕ್ಕೆ ಪೊಲೀಸ್ ಇಲಾಖೆಯ ವಾಕಿ ಟಾಕಿ.. ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್ ಐ ಧನರಾಜ್ ಹೆಲ್ಮೆಟ್ ಧರಿಸದೆ, ಮಫ್ತಿಯಲ್ಲಿದ್ದರೂ ಪೊಲೀಸ್ ವಾಕಿಟಾಕಿ ಹಾಕ್ಕೊಂಡು ಹೆದ್ದಾರಿಯಲ್ಲಿ ರಾಜಾರೋಷವಾಗಿ ಟೂ ವೀಲರ್ ಡ್ರೈವ್ ಮಾಡಿದ್ದು, ಕಾನೂನು ಪಾಲಕರೇ ಕಾನೂನು ಭಂಜನೆ ಮಾಡಿ ಸಿಕ್ಕಿಬಿದ್ದಿದ್ದಾರೆ.
ಸಾಮಾನ್ಯ ಜನರು ಹೆಲ್ಮೆಟ್ ಹಾಕದೇ ಇದ್ದರೆ ದಂಡ ವಿಧಿಸುವ ಪೊಲೀಸ್ ಅಧಿಕಾರಿಯೇ ತಮಗೆ ಕಾನೂನು ಪ್ರತ್ಯೇಕ ಇದೆಯೋ ಎನ್ನುವಂತೆ ವರ್ತಿಸಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಉಳ್ಳಾಲ ಠಾಣೆ ಪಿಎಸ್ಐ ಧನರಾಜ್ ಮಫ್ತಿಯಲ್ಲಿ ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟಿನ ಕಡೆಗೆ ದ್ವಿಚಕ್ರ ವಾಹನ ಚಲಾಯಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ಸೊಂಟದಲ್ಲಿ ವಾಕಿ ಟಾಕಿ ಇದ್ದುದನ್ನ ಕಂಡ ಇತರೇ ವಾಹನ ಸವಾರರು ಈತ ಪೊಲೀಸ್ ಎಂದು ಖಾತರಿ ಪಡಿಸಿ ಫೋಟೊ ಕ್ಲಿಕ್ಕಿಸಿದ್ದಾರೆ.

ಪಿಎಸ್ ಐ ಧನರಾಜ್ ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಗಸ್ತಿನಲ್ಲಿರುವಾಗ ಸಂಚಾರಿ ಕಾನೂನು ಉಲ್ಲಂಘಿಸುವ ವಾಹನ ಸವಾರರಿಗೆ ಮುಲಾಜಿಲ್ಲದೆ ದಂಡ ವಿಧಿಸುತ್ತಾರಂತೆ. ಆದರೆ ಕಾನೂನು ರಕ್ಷಣೆ ಮಾಡುವ ಹೊಣೆಗಾರಿಕೆಯುಳ್ಳ ಅದೇ ಪಿಎಸ್ ಐ ಈ ರೀತಿ ಹೆದ್ದಾರಿಯಲ್ಲಿ ಕಾನೂನನ್ನ ಗಾಳಿಗೆ ತೂರಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಪಿಎಸ್ ಐ ಧನರಾಜ್ ಅವರ ತಲೆಗೆ ಸಣ್ಣ ಗಾಯವಾಗಿ ಪ್ಲಾಸ್ಟರ್ ಹಾಕಲಾಗಿದೆ. ಅದನ್ನೇ ನೆಪವಾಗಿಸಿ ಕಳೆದ ಕೆಲವು ದಿನಗಳಿಂದ ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಬುದ್ದಿ ಹೇಳಿದರೂ ಕೇಳುತ್ತಿಲ್ಲವೆಂದು ಉಳ್ಳಾಲ ಠಾಣೆಯ ಸಿಬ್ಬಂದಿಗಳು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ. ತಲೆಗೆ ಗಾಯವಾಗಿದೆ ಎಂದು ಜನರಿಗೆಲ್ಲ ಒಂದೇ ರೀತಿ ಇರುವ ಕಾನೂನನ್ನು ಪೊಲೀಸರು ಉಲ್ಲಂಘನೆ ಮಾಡಲಾಗುತ್ತದೆಯೇ ? ಸಾಮಾನ್ಯ ಜನರು ಇದೇ ರೀತಿ ವರ್ತಿಸಿದರೆ, ಪೊಲೀಸರು ಹಾಗೇ ಬಿಡುತ್ತಾರೆಯೇ? ಮಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ಏನು ಹೇಳುತ್ತಾರೋ..? ಈ ಸುದ್ದಿ ಅವರ ಕಿವಿಗೂ ತಲುಪದೆ ಇರಲಾರದು.
Mangalore Ullal Police PSI Dhanraj photo without helmet goes viral.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
03-09-26 07:27 pm
HK News Staffer
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 10:55 am
HK News Staffer
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm
ಹಿಂಡಲಗಾ ಜೈಲಿನ ಕೈದಿಯೊಂದಿಗೆ ಸರಸ-ಸಲ್ಲಾಪದ ವಿಡಿಯೋ...
03-09-26 05:21 pm