Mangalore, Black cobra, snake: ಹೆಬ್ಬಾವನ್ನೇ ನುಂಗಲೆತ್ನಿಸಿದ ಬೃಹತ್ ಕಾಳಿಂಗ ; ಎರಡೂ ಹಾವುಗಳನ್ನು ರಕ್ಷಿಸಿದ ಉರಗ ಪ್ರಿಯರು 

12-12-23 08:20 pm       Mangalore Correspondent   ಕರಾವಳಿ

ಹೆಬ್ಬಾವೊಂದನ್ನು ಭಾರೀ ಗಾತ್ರದ ಕಾಳಿಂಗ ಸರ್ಪ ಬೇಟೆಯಾಡಿದ್ದು ಅದನ್ನು ತಿನ್ನುವ ಪ್ರಯತ್ನದಲ್ಲಿದ್ದಾಗ ಉರಗ ಪ್ರಿಯರು ಸೇರಿ ರಕ್ಷಣೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ‌ ನಡೆದಿದೆ. 

ಬೆಳ್ತಂಗಡಿ, ಡಿ.12: ಹೆಬ್ಬಾವೊಂದನ್ನು ಭಾರೀ ಗಾತ್ರದ ಕಾಳಿಂಗ ಸರ್ಪ ಬೇಟೆಯಾಡಿದ್ದು ಅದನ್ನು ತಿನ್ನುವ ಪ್ರಯತ್ನದಲ್ಲಿದ್ದಾಗ ಉರಗ ಪ್ರಿಯರು ಸೇರಿ ರಕ್ಷಣೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ‌ ನಡೆದಿದೆ. 

ಕಲ್ಲಾಜೆ ಪ್ರಾಥಮಿಕ ಶಾಲೆ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬವರ ಮನೆಯ ಬಳಿಯಲ್ಲಿ 8 ಅಡಿ ಉದ್ದದ ಹೆಬ್ಬಾವನ್ನು ಸುಮಾರು 16 ಅಡಿ ಉದ್ದವಿದ್ದ ಬೃಹತ್ ಕಾಳಿಂಗ ಸರ್ಪ ಬೇಟೆಯಾಡಿತ್ತು. ಇದನ್ನು ನೋಡಿದ ಬಾಲಕೃಷ್ಣ ಗೌಡ, ಕೂಡಲೇ ಲಾಯ್ಲದ ಉರಗ ರಕ್ಷಕ ಸ್ನೇಕ್ ಅಶೋಕ್ ಅವರನ್ನು ಕರೆಸಿದ್ದಾರೆ.

​​​​​​​

ಅಶೋಕ್ ಅವರು ಕಾಳಿಂಗ ಸರ್ಪದ ಹಿಡಿತದಲ್ಲಿದ್ದ ಹೆಬ್ಬಾವನ್ನು ರಕ್ಷಿಸಿದ್ದಾರೆ. ಬಳಿಕ ಕಾಳಿಂಗ ಸರ್ಪ ಮತ್ತು ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Black cobra tries to swallow snake, two snakes rescued at Belthangady in Mangalore.