ಬ್ರೇಕಿಂಗ್ ನ್ಯೂಸ್
12-12-23 09:17 pm Mangalore Correspondent ಕರಾವಳಿ
ಮಂಗಳೂರು, ಡಿ.12: ಮಂಗಳಾ ಸ್ಟೇಡಿಯಂ ಆವರಣದಲ್ಲಿರುವ ಈಜು ಕೊಳದಲ್ಲಿ ಯುವಕನೊಬ್ಬ ಈಜುತ್ತಿದ್ದಾಗಲೇ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಹರ್ಯಾಣದ ಗುರ್ಗಾಂವ್ ಮೂಲದ ಅಭಿಷೇಕ್ ಆನಂದ್ (30) ಎನ್ನುವ ಯುವಕ ಮೃತ ವ್ಯಕ್ತಿ. ಸಂಜೆ 5 ಗಂಟೆಯ ವೇಳೆಗೆ ಅಭಿಷೇಕ್ ಈಜು ಕೊಳಕ್ಕೆ ಬಂದಿದ್ದು ಟಿಕೇಟ್ ಪಡೆದು ಈಜಲು ಮುಂದಾಗಿದ್ದ. ಇದೇ ವೇಳೆ, ಅಭಿಷೇಕ್ ಈಜು ಬಾರದೆ ನೀರಿನಲ್ಲಿ ಮುಳುಗಡೆಯಾಗಿದ್ದಾನೆ ಎನ್ನಲಾಗುತ್ತಿದೆ.
ಆರು ಗಂಟೆಯ ವೇಳೆಗೆ ಮಕ್ಕಳು ಈಜುತ್ತಿದ್ದಾಗ ನೀರಿನ ಅಡಿಯಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಗಮನಿಸಿ ಕೋಚ್ ಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆತನನ್ನು ನೀರಿನಿಂದ ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಲು ಯತ್ನಿಸಿದ್ದಾರೆ. ಅಲ್ಲದೆ, ವೆನ್ಲಾಕ್ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಯುವಕ ಮೃತಪಟ್ಟಿದ್ದ. ಅಭಿಷೇಕ್ ಮಂಗಳೂರಿನಲ್ಲಿ ಗ್ಯಾರೇಜ್ ಒಂದರಲ್ಲಿ ಕೆಲಸಕ್ಕಿದ್ದು, ಕೆಲವೊಮ್ಮೆ ಈಜು ಕೊಳಕ್ಕೆ ಬರುತ್ತಿದ್ದ ಎನ್ನುವ ಮಾಹಿತಿ ಅಲ್ಲಿನ ಸಿಬಂದಿಯಿಂದ ತಿಳಿದುಬಂದಿದೆ.
ಅಭಿಷೇಕ್ ಮಂಗಳೂರಿನಲ್ಲಿ ಯಾವುದೇ ಸಂಬಂಧಿಕರನ್ನು ಹೊಂದಿಲ್ಲ. ಹೀಗಾಗಿ ಆತನ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮಹಾನಗರ ಪಾಲಿಕೆಯಿಂದ ನಿರ್ವಹಿಸಲ್ಪಡುವ ಮಂಗಳಾ ಈಜು ಕೊಳದಲ್ಲಿ ಸಾರ್ವಜನಿಕರು, ಮಕ್ಕಳು ಈಜುತ್ತಿರುವಾಗ ನೋಡಿಕೊಳ್ಳಲು ಸಿಬಂದಿ ಇರುತ್ತಾರೆ. ಯಾವುದೇ ಅಪಾಯಗಳಾದಲ್ಲಿ ಮುಂಜಾಗ್ರತೆ ವಹಿಸಲು ಲೈಫ್ ಗಾರ್ಡ್ ಇರುತ್ತಾರೆ. ಆದರೂ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಸಿಬಂದಿ ನಿರ್ಲಕ್ಷ್ಯ ಎನ್ನಬೇಕಷ್ಟೆ. ಸಾರ್ವಜನಿಕ ಪ್ರವೇಶ ಇರುವ ಸಂಜೆ ಹೊತ್ತಿಗೆ ಬಹಳಷ್ಟು ಮಂದಿ ಈಜು ಕಲಿಯಲು ಬರುತ್ತಿದ್ದು ಟಿಕೆಟ್ ಪಡೆದು ತಮ್ಮಷ್ಟಕ್ಕೆ ಈಜಲು ಪ್ರಯತ್ನ ಪಡುತ್ತಾರೆ. ಇಂಥ ಸಂದರ್ಭದಲ್ಲಿಯೇ ಅಭಿಷೇಕ್ ನೀರಿನಾಳದಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆಯಿದೆ.
Gurgaon, Haryana native drowns at Mangala swimming pool in Mangalore.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
03-09-26 07:27 pm
HK News Staffer
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 10:55 am
HK News Staffer
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm
ಹಿಂಡಲಗಾ ಜೈಲಿನ ಕೈದಿಯೊಂದಿಗೆ ಸರಸ-ಸಲ್ಲಾಪದ ವಿಡಿಯೋ...
03-09-26 05:21 pm