Mangalore, UT Khader, SDPI Riaz Kadambu: ಸ್ಪೀಕರ್ ಯುಟಿ ಖಾದರ್ ಬಗ್ಗೆ ಅವಹೇಳನ ಪೋಸ್ಟ್ ; ಎಸ್ಡಿಪಿಐ ಮುಖಂಡನ ಬಂಧಿಸಿದ ಮಂಗಳೂರು ಪೊಲೀಸರು 

12-12-23 10:19 pm       Mangalore Correspondent   ಕರಾವಳಿ

ಸಾವರ್ಕರ್ ವಿಚಾರದಲ್ಲಿ ಸಾಫ್ಟ್ ಹೇಳಿಕೆ ನೀಡಿದ್ದ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಬಗ್ಗೆ ಅವಹೇಳನ ಮಾಡಿ ಫೇಸ್ಬುಕ್ ಪೋಸ್ಟ್ ಹಾಕಿರುವ ಎಸ್ ಡಿಪಿಐ ಪಕ್ಷದ ಮುಖಂಡನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ‌

ಮಂಗಳೂರು, ಡಿ.12: ಸಾವರ್ಕರ್ ವಿಚಾರದಲ್ಲಿ ಸಾಫ್ಟ್ ಹೇಳಿಕೆ ನೀಡಿದ್ದ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಬಗ್ಗೆ ಅವಹೇಳನ ಮಾಡಿ ಫೇಸ್ಬುಕ್ ಪೋಸ್ಟ್ ಹಾಕಿರುವ ಎಸ್ ಡಿಪಿಐ ಪಕ್ಷದ ಮುಖಂಡನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ‌

ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬು ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದು ಉರ್ವಾ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ‌ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ತೆರವು ಮಾಡಬೇಕೆಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಯ ಬಗ್ಗೆ ಸ್ಪೀಕರ್ ಖಾದರ್ ತನ್ನ ಅಭಿಪ್ರಾಯ ತಿಳಿಸಿದ್ದರು. 'ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಕುವುದಲ್ಲ' ಎಂದು ಹೇಳಿಕೆ ನೀಡಿ ವಿವಾದ ತಣ್ಣಗಾಗಿಸಿದ್ದರು. 

ಖಾದರ್ ನೀಡಿದ್ದ ಈ ಹೇಳಿಕೆಯ ವಿರುದ್ಧವಾಗಿ ಫೇಸ್ಬುಕ್ ನಲ್ಲಿ ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬು ಕುಹಕ ಮಾಡಿ ಪೋಸ್ಟ್ ಹಾಕಿದ್ದರು.‌ 'ಇಷ್ಟೇ... ಅದ್ಯಾವ ಪರಿಸರ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್ ನ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ.. ಈ ವ್ಯಕ್ತಿಯಿಂದ RSS ವಿರುದ್ಧ ನಿಲ್ಲಲು ಈ ಆಯಸ್ಸು ಪೂರ್ತಿ ಅಧಿಕಾರದಲ್ಲಿದ್ದರೂ ಸಾಧ್ಯವಿಲ್ಲ.‌ 'ಚುನಾವಣೆಯಲ್ಲಿ ಕೇಳ್ತಿದ್ರಲ್ಲಾ SDPI ಯಾಕೆ ಒಬ್ಬ ಮುಸ್ಲಿಂ MLA ವಿರುದ್ಧ ಸ್ಪರ್ಧೆ ಮಾಡುವುದು ಅಂತ. 

'ನೋಡಿ ಉತ್ತರ ಸ್ಪಷ್ಟವಿದೆ, ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ, ಕೋಮುವಾದಿ RSS ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿರುವುದಕ್ಕೆ.. 'ಎಂದಾದರೂ ಒಂದು ದಿನ SDPI ಅದೊರಳಗೆ ಲಗ್ಗೆ ಇಟ್ಟರೆ, ಕಿತ್ತು ಬಿಸಾಕಿಯೇ ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ ಕೂಡ. 'ಈ ಸಭಾಧ್ಯಕ್ಷರಿಗೆ ಚಾಲೆಂಜ್ ಹಾಕುತ್ತೇನೆ. ನೀವು ಸಾವರ್ಕರ್ ಫೋಟೊ ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ ಎಂದು ಸ್ಪೀಕರ್ ಹುದ್ದೆಗೆ ಅಗೌರವ ತೋರಿಸಿ ಪೋಸ್ಟ್ ಮಾಡಿದ್ದರು. 

Karnataka polls: Khader holds fort in Hindutva heartland - The New Indian  Express

ಎಸ್ಡಿಪಿಐ ಮುಖಂಡ ಪರೋಕ್ಷವಾಗಿ ಖಾದರ್ ಅವರ ಸಂಘರ್ಷ ರಹಿತ ನಿಲುವನ್ನು ಟೀಕಿಸಿ, ಸಾವರ್ಕರ್ ಬಗ್ಗೆ ಟೀಕೆ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಪ್ರಮುಖರು ನೀಡಿದ ಸೂಚನೆಯಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

The Mangaluru police have arrested an SDPI leader Riaz Kadambu for allegedly posting a Facebook post derogatory remarks against Assembly Speaker U T Khader for his soft remarks on Savarkar.