Mangalore, moral policing: ನೈತಿಕ ಪೊಲೀಸ್ ಕೃತ್ಯ ; ಪುತ್ತೂರಿನಲ್ಲಿ ಮತ್ತೊಬ್ಬ ಹಿಂದು ಸಂಘಟನೆ ಕಾರ್ಯಕರ್ತನಿಗೆ ಬೀದರ್ ಜಿಲ್ಲೆಗೆ ಗಡೀಪಾರು ನೋಟಿಸ್ 

16-12-23 03:44 pm       Mangalore Correspondent   ಕರಾವಳಿ

ಪುತ್ತೂರಿನಲ್ಲಿ ಮತ್ತೋರ್ವ ಹಿಂದು ಸಂಘಟನೆ ಕಾರ್ಯಕರ್ತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲು ಪೊಲೀಸರು ಮುಂದಾಗಿದ್ದಾರೆ. ಡಿವೈಎಸ್ಪಿ ವರದಿ ಹಿನ್ನೆಲೆ ಪುತ್ತೂರು ಸಹಾಯಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. 

ಪುತ್ತೂರು, ಡಿ.16: ಪುತ್ತೂರಿನಲ್ಲಿ ಮತ್ತೋರ್ವ ಹಿಂದು ಸಂಘಟನೆ ಕಾರ್ಯಕರ್ತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲು ಪೊಲೀಸರು ಮುಂದಾಗಿದ್ದಾರೆ. ಡಿವೈಎಸ್ಪಿ ವರದಿ ಹಿನ್ನೆಲೆ ಪುತ್ತೂರು ಸಹಾಯಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. 

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ನಿವಾಸಿ ಪ್ರವೇಶ್ ಕುಮಾರ್ ನಾಯರ್ ಎಂಬವರಿಗೆ ನೋಟಿಸ್ ನೀಡಲಾಗಿದ್ದು ನಿಮ್ಮನ್ನ ಯಾಕೆ ಗಡೀಪಾರು ಮಾಡಬಾರದು ಎಂದು ಕಾರಣ ಕೇಳಿ ಪುತ್ತೂರು ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ. 

ಸದ್ಯ ಅಯ್ಯಪ್ಪ ಮಾಲಾಧಾರಿಯಾಗಿರುವ ಪ್ರವೀಶ್ ಕುಮಾರ್, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತ. ಹಲ್ಲೆ, ನೈತಿಕ ಪೊಲೀಸ್ ಗಿರಿ ಮಾದರಿಯ ನಾಲ್ಕು ಪ್ರಕರಣಗಳಲ್ಲಿ ಪ್ರವೇಶ್ ಆರೋಪಿಯಾಗಿದ್ದು ಈತ ಪುತ್ತೂರಿನಲ್ಲೇ ಇದ್ದರೆ ಕೋಮು ವೈಷಮ್ಯ, ಗಲಭೆ ಆಗುವುದಕ್ಕೆ ಆಸ್ಪದ ನೀಡಿದಂತಾಗುತ್ತದೆ. ಆದ್ದರಿಂದ ಕೋರ್ಟ್ ಹಾಜರಾತಿ ಹೊರತುಪಡಿಸಿ ದ.ಕ. ಜಿಲ್ಲೆಯಲ್ಲಿ ಇರದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಗಡೀಪಾರು ಮಾಡಬೇಕು ಎಂದು ಪುತ್ತೂರು ಡಿವೈಎಸ್ಪಿ ವರದಿ ನೀಡಿದ್ದಾರೆ. 

ಪೊಲೀಸರ ವರದಿ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಂದು ಸಹಾಯಕ ಆಯುಕ್ತರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಪ್ರವೇಶ್ ಕುಮಾರ್ ಗೆ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ. ಪೊಲೀಸರ ಈ ನಡೆಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ. ಇತ್ತೀಚೆಗೆ ಇದೇ ಮಾದರಿಯಲ್ಲಿ ನಾಲ್ವರು ಸಂಘಟನೆ ಕಾರ್ಯಕರ್ತರನ್ನು ಗಡೀಪಾರು ಮಾಡಲು ನೋಟಿಸ್ ಮಾಡಲಾಗಿತ್ತು. ಗಡೀಪಾರು ಆದೇಶ ಆಗುವ ಮೊದಲೇ ನ್ಯಾಯಾಲಯದಿಂದ ತಡೆ ವಿಧಿಸಲಾಗಿತ್ತು.

The police are planning to deport another Hindu outfit activist Pravish Kumar from Puttur to Bidar district. Puttur Assistant Commissioner has issued a notice based on the DySP's report.