ಬ್ರೇಕಿಂಗ್ ನ್ಯೂಸ್
28-12-23 08:48 pm Mangalore Correspondent ಕರಾವಳಿ
ಮಂಗಳೂರು, ಡಿ.28: ಕ್ಯಾಪ್ಟನ್ ಬೃಜೇಶ್ ಚೌಟ ನೇತೃತ್ವದ ಏಳನೇ ವರ್ಷದ ಮಂಗಳೂರು ಕಂಬಳ ಈ ಬಾರಿ ಡಿ.30 ಮತ್ತು 31ರಂದು ಕುಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡುಕರೆಯಲ್ಲಿ ನಡೆಯಲಿದೆ.
ಡಿ.30ರಂದು ಬೆಳಗ್ಗೆ 8.30ಕ್ಕೆ ಕಂಬಳವನ್ನು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮಂಗಳೂರು ರಾಮಕೃಷ್ಣ ಮಠದ ಸ್ವಾಮೀಜಿ ಜಿತಕಾಮಾನಂದ ಜೀ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕಂಕನಾಡಿ ಗರೋಡಿಯ ಅಧ್ಯಕ್ಷ ಕೆ.ಚಿತ್ತರಂಜನ್, ಸ್ಪೀಕರ್ ಯುಟಿ ಖಾದರ್ ಭಾಗವಹಿಸಲಿದ್ದಾರೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಅಂದು ಸಂಜೆ 5 ಗಂಟೆಗೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಯುಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಸಂಸದ ನಳಿನ್ ಕುಮಾರ್, ಮಾಜಿ ಸಚಿವ ಸುನಿಲ್ ಕುಮಾರ್, ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ಅಶೋಕ್ ರೈ ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ.
ಜೋಡುಕರೆಯ ಕಂಬಳದಲ್ಲಿ ಒಟ್ಟು ಎಂಟು ವಿಭಾಗಗಳಿದ್ದು ಅಂದಾಜು 150ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಲಿವೆ. ಕರಾವಳಿ ತುಳುನಾಡಿನ ಜನಪದ ಕ್ರೀಡೆ ಕಂಬಳ ನಿಷೇಧಗೊಂಡ ಸಂದರ್ಭದಲ್ಲಿ ನಾವು ಯುವಕರೇ ಸೇರಿಕೊಂಡು ಇದರ ವಿರುದ್ಧ ಚಳವಳಿ ರೂಪಿಸಿ, ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಂಬಳ ಏರ್ಪಡಿಸಿದ್ದೆವು. ಆನಂತರ, ನಿರಂತರ ಏಳು ವರ್ಷಗಳಿಂದ ಕಂಬಳ ನಡೆಸಿಕೊಂಡು ಬಂದಿದ್ದೇವೆ. ಕಂಬಳ ಅನ್ನುವುದು ಅಪ್ಪಟ ರೈತರ ಕ್ರೀಡೆಯಾಗಿದ್ದರೂ, ನಾವೆಲ್ಲ ರೈತರ ಮಕ್ಕಳೇ ಆಗಿದ್ದರೂ, ಕೃಷಿ ಕೆಲಸ ಮಾಡುವವರಲ್ಲ. ಆದರೆ, ಕಂಬಳದ ಮೇಲೆ ಪ್ರೀತಿ ಇಟ್ಟುಕೊಂಡು ಎರಡು ದಿನಗಳ ಕಾಲ ಎಲ್ಲ ಯುವಕರು ಸೇರಿಕೊಂಡು ಕಂಬಳದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಬೃಜೇಶ್ ಚೌಟ, ಮಂಗಳೂರು ಕಂಬಳ ಆರಂಭಿಸಿದ ಹಿನ್ನೆಲೆ ಮತ್ತು ಯುವಕರ ಪ್ರಯತ್ನವನ್ನು ನೆನಪಿಸಿಕೊಂಡರು.
ಕಂಬಳದ ಸಂದರ್ಭದಲ್ಲಿ ಮಕ್ಕಳಿಗೆ ಕಲರ್ ಕೂಟ ಹೆಸರಿನಲ್ಲಿ ವರ್ಣಚಿತ್ರ ಕಲೆಯ ಸ್ಪರ್ಧೆ ಏರ್ಪಡಿಸಲಾಗಿದೆ. 10ನೇ ವಯಸ್ಸಿನ ತನಕದ ಮಕ್ಕಳಿಗೆ ರಂಗ್ ದ ಎಲ್ಯ, 10ರಿಂದ 15ನೇ ವಯಸ್ಸಿನ ತನಕದ ಮಕ್ಕಳಿಗೆ ರಂಗ್ ದ ಎಲ್ಯ ಮತ್ತು ಮುಕ್ತ ಅವಕಾಶದಲ್ಲಿ ರಂಗ್ ದ ಕೂಟ ಎನ್ನುವ ಹೆಸರಲ್ಲಿ ಸ್ಪರ್ಧೆ ಇರಲಿದೆ. ಇದಲ್ಲದೆ, ಇನ್ ಸ್ಟಾದಲ್ಲಿ ರೀಲ್ಸ್ ಮಾಡುವವರಿಗೆ ಕಂಬಳದ ವಿಡಿಯೋ ಮಾಡಿ ತಮ್ಮ ಪೇಜ್ ನಲ್ಲಿ ಅಪ್ಲೋಡ್ ಮಾಡಿ mangaluru kambala 2023 ಎಂದು ಟ್ಯಾಗ್ ಮಾಡಬೇಕಿದೆ. ಜನವರಿ 1ರ ವರೆಗಿನ ಅವಧಿಯಲ್ಲಿ ಯಾರಿಗೆ ಅತಿ ಹೆಚ್ಚು ಲೈಕ್ಸ್ ಬರತ್ತೆ ಅವರಿಗೆ ಬಹುಮಾನ ಇರಲಿದೆ. ಛಾಯಾಗ್ರಾಹಕರಿಗೂ ಅತ್ಯುತ್ತಮ ಫೋಟೊ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ ಎಂದು ಕಂಬಳ ಸಮಿತಿಯ ಈಶ್ವರ್ ಪ್ರಸಾದ್ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಕಂಬಳ ಸಮಿತಿ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಪ್ರೀತಮ್ ರೈ, ವಿಜಯ ಕುಮಾರ್ ಕಂಗಿನಮನೆ ಉಪಸ್ಥಿತರಿದ್ದರು.
December 30 and 31st Kambala in Mangalore by Brijesh Chowta, at Gold finch city. Those who shoot good reels and videos will be awarded price he added.
01-08-25 02:55 pm
Bangalore Correspondent
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
01-08-25 02:31 pm
HK News Desk
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am