ಬ್ರೇಕಿಂಗ್ ನ್ಯೂಸ್
02-03-24 05:05 pm Mangalore Correspondent ಕರಾವಳಿ
ಉಳ್ಳಾಲ, ಮಾ.2: ಉಳ್ಳಾಲದ ಮಾಡೂರಿನ ಪಿಜಿ ಯಿಂದ ನಾಪತ್ತೆಯಾಗಿದ್ದ ಪಿ.ಎಚ್.ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ಗಲ್ಫ್ ರಾಷ್ಟ್ರದ ಕತಾರ್ ತೆರಳಿದ್ದಾಳೆ ಎನ್ನಲಾಗುತ್ತಿದ್ದು, ಆಕೆಯ ಪ್ರಿಯಕರ ಶಾರೂಕ್ ನನ್ನ ಉಳ್ಳಾಲ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ.
ಪುತ್ತೂರಿನ ಪುರುಷರಕಟ್ಟೆ ನಿವಾಸಿ ಚೈತ್ರಾ ಹೆಬ್ಬಾರ್ ತನ್ನ ಪ್ರಿಯಕರ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಶಾರೂಕ್ ಶೇಖ್ ನೆರವಿನಲ್ಲಿ ವಿದೇಶಕ್ಕೆ ವಿಸಿಟಿಂಗ್ ವೀಸಾದಲ್ಲಿ ತೆರಳಿದ್ದಾಳೆ ಎಂಬ ಮಾಹಿತಿ ಲಭಿಸಿದೆ. ದೇರಳಕಟ್ಟೆಯ ಖಾಸಗಿ ವಿ.ವಿಯಲ್ಲಿ ಪಿ.ಎಚ್.ಎಡಿ ವ್ಯಾಸಂಗ ಮಾಡುತ್ತಿದ್ದ ಚೈತ್ರಾ ಹೆಬ್ಬಾರ್ ಕಳೆದ ಫೆ.17 ರಂದು ತಾನು ನೆಲೆಸಿದ್ದ ಕೋಟೆಕಾರು ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರ್ ಸಮೇತ ನಾಪತ್ತೆಯಾಗಿದ್ದಳು. ಫೆ.18 ಕ್ಕೆ ಶಾರೂಕ್ ಶೇಖ್ ಕೂಡಾ ನಾಪತ್ತೆಯಾಗಿದ್ದ. ಚೈತ್ರಾಳ ಸ್ಕೂಟರ್ ಸುರತ್ಕಲ್ ನಲ್ಲಿ ಪತ್ತೆಯಾಗಿದ್ದು ಅಲ್ಲಿಂದ ಬೆಂಗಳೂರಿಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾನಾಯಕ್ ಮತ್ತು ಉಳ್ಳಾಲ ಪಿಎಸ್ ಐ ಶೀತಲ್ ಅಲಗೂರ ನೇತೃತ್ವದ ತಂಡ ಚೈತ್ರಾ ಹೆಬ್ಬಾರ್ ಬೆನ್ನು ಬಿದ್ದಿದ್ದು, ಚೈತ್ರಾ ಬೆಂಗಳೂರಿಂದ ಗೋವಾ- ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿರುವುದಾಗಿ ತಿಳಿದುಬಂದಿದೆ. ಚೈತ್ರಾ ಹೆಬ್ಬಾರ್ 40,000 ರೂಪಾಯಿಗಳನ್ನ ತನ್ನ ಖಾತೆಯಿಂದ ವಿತ್ ಡ್ರಾ ಮಾಡಿ ಹಿಮಾಚಲ ಪ್ರದೇಶದಿಂದ ದೆಹಲಿ ವಿಮಾನ ನಿಲ್ದಾಣದಕ್ಕೆ ತೆರಳಿ ಕತಾರ್ ದೇಶಕ್ಕೆ ಹಾರಿದ್ದಾಳೆ.
ಚೈತ್ರಾಳ ಪ್ರಿಯಕರ ಶಾರೂಕನ್ನ ಪೊಲೀಸರು ಕಳೆದ ಗುರುವಾರ ಹಿಮಾಚಲ ಪ್ರದೇಶದಲ್ಲಿ ಪತ್ತೆ ಹಚ್ಚಿ ಉಳ್ಳಾಲ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶಾರೂಕ್ ತಾನು ಚೈತ್ರಾ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. ಶಾರೂಕನ್ನ ವಿಚಾರಣೆ ನಡೆಸಿದ ಪೊಲೀಸರು ಪ್ರಾಯ ಪ್ರಬುದ್ಧರು ಎನ್ನುವ ಕಾರಣಕ್ಕೆ ಆತನನ್ನ ಬಿಟ್ಟು ಕಳಿಸಿದ್ದಾರೆ. ಶಾರೂಕ್ ಈ ಹಿಂದೆ ವಿದೇಶದಲ್ಲಿದ್ದು ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಈ ಹಿನ್ನಲೆಯಲ್ಲಿ ಶಾರೂಕ್ ಗೆ ಚೈತ್ರಾ ಜತೆ ಕತಾರ್ಗೆ ತೆರಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಆದರೆ ಚೈತ್ರಾಳಿಗೆ ತರಾತುರಿಯಲ್ಲಿ ವಿದೇಶದಿಂದ ವಿಸಿಟಿಂಗ್ ವೀಸಾ ಕಳಿಸಿದ್ದಾದರೂ ಯಾರೆಂಬುದು ಅನುಮಾನಕ್ಕೆ ಕಾರಣವಾಗಿದೆ. ಚೈತ್ರಾ ಕತಾರ್ಗೆ ಹಾರಲು ಆಕೆಯ ಪ್ರಿಯಕರ ಶಾರೂಕ್ ಶೇಖ್ ಸಹಕರಿಸಿರುವ ದಟ್ಟ ಶಂಕೆ ವ್ಯಕ್ತವಾಗಿದೆ. ಚೈತ್ರಾ ಸದ್ಯ ಕತಾರ್ ದೇಶದ ಹೆಣ್ಮಕ್ಕಳ ಪಿ.ಜಿ ಒಂದರಲ್ಲಿ ನೆಲೆಸಿದ್ದಾಳೆಂದು ತಿಳಿದು ಬಂದಿದೆ. ಕತಾರ್ ದೇಶದ ಇಂಡಿಯನ್ ಎಂಬೇಸಿಯಿಂದ ಚೈತ್ರಾ ಉಳ್ಳಾಲ ಪೊಲೀಸರಿಗೆ ಇ-ಮೇಲ್ ಮತ್ತು ವಾಟ್ಸಪ್ ಸಂದೇಶ ಕಳಿಸಿದ್ದು ನಾನು ಪ್ರಬುದ್ಧಳಾಗಿದ್ದೇನೆ. ನನ್ನ ಇಷ್ಟದಲ್ಲಿ ನಾನು ಬಂದಿದ್ದೇನೆ. ನನಗೆ ಪ್ರೀತಿ ಮಾಡುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾಳೆ ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.
ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣವನ್ನ ಭೇದಿಸುವಂತೆ ಉಳ್ಳಾಲ ಪೊಲೀಸರಿಗೆ ಹಿಂದೂ ಸಂಘಟನೆಗಳು ಒತ್ತಡ ಹಾಕಿದ್ದು ಪೊಲೀಸರಿಗೂ ಚೈತ್ರಾ ನಡೆ ತಲೆ ಬಿಸಿ ತಂದೊಡ್ಡಿದೆ.
Mangalore student Chaitra Hebbar missing case, Muslim youth has been caught by Ullal Police at Himachal Pradesh and later has sent after investigating. It is said Chaitra has escaped to Qatar by making visa. Chaitra Hebbar, a 27-year-old Puttur native and PHD student, goes missing from Mangalore
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm