ಬ್ರೇಕಿಂಗ್ ನ್ಯೂಸ್
04-03-24 10:44 pm Mangalore Correspondent ಕರಾವಳಿ
ಮಂಗಳೂರು, ಮಾ.4: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಮುಂದಿನ ಐದು ವರ್ಷದ ಆಡಳಿತಕ್ಕಾಗಿ ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಮತ್ತು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಬಳಗ ಜೊತೆಯಾಗಿದ್ದಾರೆ. ಆಮೂಲಕ ಎಲ್ಲ 16 ನಿರ್ದೇಶಕ ಸ್ಥಾನಗಳನ್ನೂ ಚುನಾವಣೆಯೇ ಇಲ್ಲದೆ ಅವಿರೋಧ ಆಯ್ಕೆಯಾಗುವಂತೆ ಮಾಡಿದ್ದಾರೆ. ಕಳೆದ ಫೆ.5ರಂದು ಡಿಸಿಸಿ ಬ್ಯಾಂಕಿನ 16 ಸ್ಥಾನಗಳ ಚುನಾವಣೆಗೆ ಅಧಿಸೂಚನೆ ಪ್ರಕಟಿಸಲಾಗಿತ್ತು.
ಮಾ.3ರಂದು ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದ್ದು 4ರಂದು ನಾಮಪತ್ರ ಪರಿಶೀಲನೆ ದಿನಾಂಕವಾಗಿದೆ. 16 ಕ್ಷೇತ್ರಗಳಲ್ಲಿ ಬಹುತೇಕ ಒಬ್ಬೊಬ್ಬರೇ ಕಣದಲ್ಲಿ ಉಳಿಯುವಂತೆ ಎರಡೂ ಕಡೆಯವರು ಅಡ್ಜಸ್ಟ್ ಮಾಡಿಕೊಂಡಿದ್ದು, ಅವಿರೋಧ ಆಯ್ಕೆಗೆ ವೇದಿಕೆ ಸಿದ್ಧಪಡಿಸಿದ್ದಾರೆ. ಆಮೂಲಕ ರಾಜೇಂದ್ರ ಕುಮಾರ್ ಅವರ 30 ವರ್ಷಗಳ ನಿರಂತರ ಅಧ್ಯಕ್ಷ ಹುದ್ದೆಯ ಗಾದಿಗೆ ಯಾವುದೇ ತೊಂದರೆಯಾಗದಂತೆ ಒಳ ಒಪ್ಪಂದ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಪತ್ತಿಕ ಸಹಕಾರಿ ಸಂಘಗಳಲ್ಲಿ ಅತಿ ಹೆಚ್ಚು ಬಿಜೆಪಿ ಬೆಂಬಲಿತರದ್ದೇ ಇದ್ದರೂ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೆಚ್ಚಿನ ಕಡೆ ಸಹಕಾರ ಭಾರತಿಯಿಂದ ಅಭ್ಯರ್ಥಿಯನ್ನೇ ಇಳಿಸದೇ ಜೈಕಾರ ಹಾಕಿದ್ದಾರೆ.
ಪುತ್ತೂರಿನಿಂದ ಶಶಿಕುಮಾರ್ ರೈ ಬಾಲ್ಯೊಟ್ಟು, ಸುಳ್ಯದಿಂದ ಎಸ್.ಎನ್ ಮನ್ಮಥ, ಬೆಳ್ತಂಗಡಿಯಿಂದ ಕುಶಾಲಪ್ಪ ಗೌಡ, ಬಂಟ್ವಾಳದಿಂದ ಟಿಜಿ ರಾಜರಾಮ ಭಟ್, ಮಂಗಳೂರು ತಾಲೂಕಿನಿಂದ ಎಂ.ಎನ್.ರಾಜೇಂದ್ರ ಕುಮಾರ್, ಭಾಸ್ಕರ ಕೋಟ್ಯಾನ್, ಹರಿಶ್ಚಂದ್ರ, ವಿನಯ ಕುಮಾರ್ ಸೂರಿಂಜೆ, ಕಾರ್ಕಳದಿಂದ ವಾದಿರಾಜ ಶೆಟ್ಟಿ, ಉಡುಪಿ ತಾಲೂಕಿನಿಂದ ಬೆಳಪು ದೇವಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ, ಕುಂದಾಪುರದಿಂದ ರಾಜೀವ ಪೂಜಾರಿ, ಮಹೇಶ್ ಹೆಗ್ಡೆ, ಟಿಎಪಿಸಿಎಂಎಸ್ ನಿಂದ ಮೋನಪ್ಪ ಶೆಟ್ಟಿ ಎಕ್ಕಾರು, ಕ್ರೆಡಿಟ್ ಸಹಕಾರಿ ಸೊಸೈಟಿ ಕ್ಷೇತ್ರದಿಂದ ಜೈರಾಜ್ ರೈ ಮಾತ್ರವೇ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಯಾಗಲಿದ್ದಾರೆ.
ಇತರ ಸಹಕಾರಿ ಸೊಸೈಟಿಗಳಿಂದ ಆಯ್ಕೆಗೆ ಪುತ್ತೂರಿನ ಹಾಲಿ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳಜ್ಜ ಮತ್ತು ಬಂಟ್ವಾಳದ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ. ಸಂಜೀವ ಪೂಜಾರಿ ಅವರನ್ನು ನಾಮಪತ್ರ ಹಿಂತೆಗೆಸಲು ಭಾರೀ ಒತ್ತಡ ಹೇರಲಾಗಿದ್ದು, ಅವರು ನಾಮಪತ್ರ ಹಿಂಪಡೆದರೆ ಜಯರಾಮ ರೈ ಮತ್ತೆ ಆಯ್ಕೆಯಾಗಲಿದ್ದಾರೆ. ಆಮೂಲಕ ಬಹುತೇಕ ಮುಕ್ಕಾಲು ಪಾಲು ಅಭ್ಯರ್ಥಿಗಳು ಚುನಾವಣೆ ಇಲ್ಲದೆ, ಬಿಜೆಪಿ ಶಾಸಕರು ಮತ್ತು ಆರೆಸ್ಸೆಸ್ ನಾಯಕರ ಬೆಂಬಲದಿಂದ ಮತ್ತೆ 5 ವರ್ಷದ ಅವಧಿಗೆ ಡಿಸಿಸಿ ಬ್ಯಾಂಕ್ ಆಡಳಿತ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಬೆಳ್ತಂಗಡಿಯ ಕುಶಾಲಪ್ಪ ಗೌಡ ಮತ್ತು ಸುಳ್ಯದ ಎಸ್.ಎನ್ ಮನ್ಮಥ ಮಾತ್ರ ಹೊಸತಾಗಿ ಸೇರ್ಪಡೆಗೊಂಡವರಾಗಿದ್ದು ಅವರಿಬ್ಬರು ಮಾತ್ರ ಅಧಿಕೃತ ಬಿಜೆಪಿಯವರು.
ನಿರ್ದೇಶಕ ಸ್ಥಾನದ ಆಯ್ಕೆ ಹೇಗಿರುತ್ತೆ ನೋಡಿ..
ಡಿಸಿಸಿ ಬ್ಯಾಂಕಿನ 13 ನಿರ್ದೇಶಕ ಸ್ಥಾನಗಳಿಗೆ ಕೃಷಿ ಪತ್ತಿನ ಸಹಕಾರಿ ಸಂಘದಿಂದ ನೇರ ಆಯ್ಕೆ ಇರುತ್ತದೆ. ಅಂದರೆ, ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಪ್ರತಿನಿಧಿಗಳು ತಮ್ಮ ಆಯ್ಕೆ ಯಾರು ಎಂಬ ಬಗ್ಗೆ ಮೊದಲೇ ನಿರ್ಧರಿಸಿ, ಸೊಸೈಟಿಯಿಂದ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ಇರುತ್ತದೆ. ಅರ್ಥಾತ್, ಒಂದು ಸೊಸೈಟಿಯಿಂದ ಒಬ್ಬನಿಗಷ್ಟೇ ಮತ ಚಲಾವಣೆಗೆ ಅವಕಾಶ. ಹೀಗಾಗಿ ಈ ಓಟುಗಳೇ ಬಹುತೇಕ ಮಾರಾಟ ಆಗುತ್ತವೆ ಎನ್ನುವ ಆರೋಪ ಇದೆ. ಮಂಗಳೂರು ತಾಲೂಕಿನಲ್ಲಿ ನಾಲ್ವರ ಆಯ್ಕೆ ಇದ್ದರೆ, ಉಡುಪಿಯಲ್ಲಿ ಎರಡು, ಕುಂದಾಪುರ ತಾಲೂಕಿನಲ್ಲಿ ಇಬ್ಬರ ಆಯ್ಕೆಗೆ ಅವಕಾಶ ಇದೆ. ಉಳಿದಂತೆ, ಸುಳ್ಯ, ಪುತ್ತೂರು, ಕಾರ್ಕಳ, ಬೆಳ್ತಂಗಡಿ, ಬಂಟ್ವಾಳದಲ್ಲಿ ತಲಾ ಒಬ್ಬೊಬ್ಬರ ಆಯ್ಕೆ ಇರುತ್ತದೆ. ಆದರೆ ಈ ಬಾರಿ ಎಲ್ಲ ಕಡೆಯೂ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು ಚುನಾವಣೆ ಆಗದಂತೆ ನೋಡಿಕೊಂಡಿದ್ದಾರೆ. ಯಾವುದೇ ಸೊಸೈಟಿ ನಿರ್ದೇಶಕನಿಗೆ ಡಿಸಿಸಿ ಬ್ಯಾಂಕಿಗೆ ಸ್ಪರ್ಧಿಸಲು ಅವಕಾಶ ಇದ್ದರೂ, ಇಲ್ಲಿ ತಮ್ಮ ಹಕ್ಕನ್ನೇ ಗೌಣವಾಗಿಸಿದ್ದಾರೆ.
ಉಳಿದಂತೆ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಟಿಎಪಿಸಿಎಂಎಸ್) ಯಿಂದ ಎರಡು ಜಿಲ್ಲೆಯಿಂದ ಒಂದು ನಿರ್ದೇಶಕ ಸ್ಥಾನದ ಆಯ್ಕೆ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಐದು ಮತ್ತು ಉಡುಪಿ ಜಿಲ್ಲೆಯಲ್ಲಿ ಇರುವ ಮೂರು ಟಿಎಪಿಸಿಎಂಎಸ್ ಆಡಳಿತಗಳು ಈ ಆಯ್ಕೆಯನ್ನು ಮಾಡಬೇಕಾಗುತ್ತದೆ. ಆದರೆ, ಈ ಸ್ಥಾನಕ್ಕೆ ರಾಜೇಂದ್ರ ಕುಮಾರ್ ಬಳಗದ ಮೋನಪ್ಪ ಶೆಟ್ಟಿ ಎಕ್ಕಾರು ಒಬ್ಬ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆಗೆ ಅವಕಾಶ ಇಲ್ಲವಾಗಿದೆ. ಎಂಟು ಜನರು ಆಯ್ಕೆ ಮಾಡಬಲ್ಲ ಸುಲಭದ ಕ್ಷೇತ್ರವನ್ನು ಎರಡು ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರಿದ್ದರೂ ರಾಜೇಂದ್ರ ಕುಮಾರ್ ಪರ ಬಿಟ್ಟು ಕೊಟ್ಟಿದ್ದಾರೆ.
ಇನ್ನೊಂದು ನಿರ್ದೇಶಕ ಸ್ಥಾನವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇರುವ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳಿಂದ ಭರ್ತಿ ಮಾಡಬೇಕು. ಎರಡು ಜಿಲ್ಲೆಗೆ ಆಯ್ಕೆಗೆ ಒಂದೇ ಸ್ಥಾನ ಇರುತ್ತದೆ. ಎರಡು ಜಿಲ್ಲೆಯಲ್ಲಿ ಸುಮಾರು 500 ರಷ್ಟು ಇಂತಹ ಸಂಘಗಳಿದ್ದು ಹೆಚ್ಚಿನವು ಬಿಜೆಪಿ ಬೆಂಬಲಿತರ ಆಡಳಿತ ಹೊಂದಿವೆ. ರಾಜೇಂದ್ರ ಕುಮಾರ್ ಪರ ಇರುವ ಮಂಗಳೂರಿನ ರಾಮಕೃಷ್ಣ ಕ್ರೆಡಿಟ್ ಸೊಸೈಟಿಯ ಜೈರಾಜ್ ರೈ ಈ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಯಾಗಿದ್ದಾರೆ.
ಮತ್ತೊಂದು ನಿರ್ದೇಶಕ ಸ್ಥಾನ ಎರಡು ಜಿಲ್ಲೆಯ ಹಾಲು ಉತ್ಪಾದಕ ಸಹಕಾರಿ ಸಂಘಗಳು ಮತ್ತು ಇನ್ನಿತರ ಸಹಕಾರ ಸಂಘಗಳಿಂದ ಆಯ್ಕೆಯಾಗುತ್ತದೆ. ಆ ಸ್ಥಾನಕ್ಕೆ ಹಾಲಿ ಸದಸ್ಯ ಎಸ್.ಬಿ ಜಯರಾಮ ರೈ ಸ್ಪರ್ಧಿಸಿದ್ದಾರೆ. ಎರಡು ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಹಾಲುತ್ಪಾದಕ ಸಂಘಗಳಿದ್ದು, ಹೆಚ್ಚಿನ ಸಂಘಗಳಲ್ಲಿ ಬಿಜೆಪಿ ಬೆಂಬಲಿತರದ್ದೇ ಆಡಳಿತ ಇದೆ. ಆದರೆ ಈ ಸ್ಥಾನಕ್ಕೆ ಸಹಕಾರ ಭಾರತಿಯಿಂದ ನಾಮಪತ್ರ ಸಲ್ಲಿಕೆ ಆಗಿಲ್ಲ. ಬಂಟ್ವಾಳ ಮೂರ್ತೆದಾರರ ಸಹಕಾರ ಸಂಘದ ಸಂಜೀವ ಪೂಜಾರಿ ನಾಮಪತ್ರ ಹಾಕಿದ್ದಾರೆ.
35 ವರ್ಷಗಳ ರಾಜ್ಯಭಾರಕ್ಕೆ ಸಹಕಾರ !
ಡಿಸಿಸಿ ಬ್ಯಾಂಕಿನಲ್ಲಿ ಕಳೆದ 30 ವರ್ಷಗಳಿಂದ ನಿರಂತರವಾಗಿ ರಾಜೇಂದ್ರ ಕುಮಾರ್ ಅಧ್ಯಕ್ಷರಾಗಿದ್ದು, ಈ ಬಾರಿಯೂ ಮತ್ತೆ ಅಧಿಕಾರಕ್ಕೇರುವುದು ಖಚಿತವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸಿನ ಒಳ ಒಪ್ಪಂದ ಮತ್ತು ಹಣಕಾಸಿನ ಸಹಕಾರದಿಂದಾಗಿ ರಾಜೇಂದ್ರ ಕುಮಾರ್ ಮತ್ತೆ 5 ವರ್ಷಗಳ ಅಧಿಕಾರಕ್ಕೇರಲಿದ್ದು, ನಿರಂತರ 35 ವರ್ಷಗಳ ಅನಿಯಮಿತ ರಾಜ್ಯಭಾರಕ್ಕೆ ಸಹಕಾರಿಗಳೆಲ್ಲ ರೆಡಿಯಾಗಿದ್ದಾರೆ.
Mangalore Cooperation of BJP MLAs for the unopposed election of 16 director positions at scdcc bank. Rajendra Kumar has been the chairman of DCC Bank continuously for the past 30 years, and he is sure to return to power this time as well. Due to the internal agreement and financial cooperation between BJP and Congress, Rajendra Kumar will be in power for another 5 years and all the partners are ready for a continuous 35 years of unlimited government.
26-11-24 06:11 pm
HK News Desk
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
26-11-24 05:37 pm
Mangaluru Correspondent
Mangalore Astra Group, lucky draw: ಕಾರು, ಫ್ಲಾ...
25-11-24 11:14 pm
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm