ಬ್ರೇಕಿಂಗ್ ನ್ಯೂಸ್
15-03-24 09:36 pm Mangalore Correspondent ಕರಾವಳಿ
ಉಳ್ಳಾಲ, ಮಾ.15: ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಮುಂದಿನ 30 ವರ್ಷದ ಯೋಜನೆಯನ್ನು ಗಮನದಲ್ಲಿಟ್ಟು ನಿರಂತರ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದ್ದು, ಈಗಾಗಲೇ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ, ಎರಡನೇ ಹಂತವಾಗಿ ತೊಕ್ಕೊಟ್ಟು - ಜೆಪ್ಪು 33 ಕೆ.ವಿ. ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದು, ಉಳ್ಳಾಲವನ್ನು 200 ಕೋಟಿ ಯೋಜನೆಯಡಿ ಸಂಪೂರ್ಣವಾಗಿ ಭೂಗತ ಕೇಬಲ್ (ಯುಜಿ)ನಿಂದ ಆಭಿವೃದ್ಧಿ ಪಡಿಸಲು ಪ್ರಸ್ತಾವನೆ ಸಲ್ಲಿಸಿದ್ದು, ರಾಜ್ಯದ ಪ್ರಥಮ ವಿದ್ಯುತ್ ಭೂಗತ ಕೇಬಲ್ ಹೊಂದಿರುವ ನಗರವಾಗಿ ಉಳ್ಳಾಲ ರೂಪುಗೊಳ್ಳಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ತೊಕ್ಕೊಟ್ಟು ಚೆಂಬುಗುಡ್ಡೆ ಯಲ್ಲಿರುವ ಉಳ್ಳಾಲ ಮೆಸ್ಕಾಂ ಉಪ ವಿಭಾಗದಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ತೊಕ್ಕೊಟ್ಟು - ಜೆಪ್ಪು 33 ಕೆ.ವಿ. ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕೋಟೆಕಾರು ಮೆಸ್ಕಾಂ ಉಪ ಕೇಂದ್ರಕ್ಕೆ ಈಗಾಗಲೇ 8 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದ್ದು, ನೂತನವಾಗಿ ಕೊಣಾಜೆ ಉಪ ವಿಭಾಗವನ್ನು ಆರಂಭಿಸಲಾಗಿದೆ. ಇದರೊಂದಿಗೆ ಗ್ರಾಮಗಳನ್ನು ವಿಂಗಡನೆ ಮಾಡಿ ಸೆಕ್ಷನ್ ಕಚೇರಿಯನ್ನು ಆರಂಭಿಸುತ್ತಿದ್ದು, ಕಾಮಗಾರಿ ಪೂರ್ಣಗೊಂಡರೆ ಮುಂದಿನ 30 ವರುಷಗಳ ಕಾಲ ನಿರಂತರ ವಿದ್ಯುತ್ ಪೂರೈಕೆಯೊಂದಿಗೆ ಈ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಂಡವಾಳ ಹರಿದು ಬರಲಿದೆ ಎಂದರು.


ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ ಮಾತನಾಡಿ ವಿದ್ಯುತ್ ಅಡಚಣೆಯನ್ನು ನಿಗ್ರಹಿಸಲು ಕೊಣಾಜೆ ಉಪ ಕೇಂದ್ರದಿಂದ ದೇರಳಕಟ್ಟೆ ತನಕ ಉಳ್ಳಾಲ ಎಕ್ಸ್ ಪ್ರೆಸ್ ಫೀಡರಿನ ರಾಬಿಟ್ ವಾಹಕವನ್ನು ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗೆ ರೂ.1.8 ಕೋಟಿಗಳು, 110/33/11ಕೆವಿ ಜೆಪ್ಪು ಉಪಕೇಂದ್ರದಿಂದ ನೂತನ ಕಡೆಕಾರ್ ಫ್ರೀಡರ್ ರಚನೆಯ ಕಾಮಗಾರಿಗೆ ಅನುಮೋದನೆ ಯಾಗಿದೆ. ವಿದ್ಯುತ್ ಅಡಚಣೆಯನ್ನು ನಿಗ್ರಹಿಸಲು ಈ ಕೆಳಗಿನ ಫೀಡರ್ ಗಳನ್ನು ಭೂಗತ ಕೇಬಲ್ ಅಳವಡಿಸಲು ಅಂದಾಜು ಪಟ್ಟಿ ಮಂಜೂರಾತಿ ಹಂತದಲ್ಲಿದೆ. 1.11 ಕೆವಿ ಕಿನ್ಯಾ ಫ್ರೀಡರ್, 11 ಕೆವಿ ಬೆಲ್ಮ ಫೀಡರ್, 33 ಕೆವಿ ತೊಕೊಟ್ಟು ಉಪ ಕೇಂದ್ರವನ್ನು 110 ಕೆವಿ ಉಪ ಕೇಂದ್ರಕ್ಕೆ, ಉನ್ನತೀಕರಣದ ಡಿ.ಪಿ.ಆರ್ ತಯಾರಾಗಿದ್ದು ಕಾಮಗಾರಿಯ ಅಂದಾಜು ಮೊತ್ತ 67 ಕೋಟಿಯಾಗಿರುತ್ತದೆ. ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿರುವ ಹೆಚ್.ಟಿ ಮತ್ತು ಎಲ್.ಟಿ ರಾಬಿಟ್ ವಾಹಕವನ್ನು ಭೂಗತ ಕೇಬಲ್ ಅಳವಡಿಸುವ ಕಾಮಗಾರಿಯೂ ಅಂದಾಜು ಪಟ್ಟಿ ಮಂಜೂರಾತಿ ಹಂತದಲ್ಲಿರುತ್ತದೆ. ಅಂದಾಜು ಪಟ್ಟಿಯ ಮೊತ್ತ 210 ಕೋಟಿಯಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಮುಖರಾದ ಈಶ್ವರ ಉಳ್ಳಾಲ್, ಸುರೇಶ್ ಭಟ್ನಗರ, ಸುಹಾಸಿನಿ ಬಬ್ಬುಕಟ್ಟೆ, ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು,ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ., ತಾಂತ್ರಿಕ ನಿರ್ದೇಶಕ ರಮೇಶ್,ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಮೌರಿಸ್ ಡಿ.ಸೋಜ, ಮುಖ್ಯ ಇಂಜಿನಿಯರ್ ಪುಷ್ಪಾ, ಕಾರ್ಯನಿರ್ವಾಹಕ ಅಭಿಯಂತರ ಲೋಹಿತ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ್, ಸೋಮೇಶ್ವರ ಶಾಖಾಧಿಕಾರಿ ನಿತೇಶ್ ಹೊಸಗದ್ದೆ ಮೊದಲಾದವರು ಉಪಸ್ಥಿತರಿದ್ದರು.
Mangalore Thokottu Bajpe underworld cable work for current inaugurated by MLA khader.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm