ಮಾ.20ರಿಂದ 25 ; ಅಲೋಶಿಯಸ್ ಕಾಲೇಜಿನಲ್ಲಿ ನಿರ್ದಿಗಂತ ತಂಡದಿಂದ ‘’ನೇಹದ ನೇಯ್ಗೆ’’ ; ನಾಟಕ, ಸಂಗೀತ, ಸಾಹಿತ್ಯ ಸಮ್ಮಿಲನ  

19-03-24 11:03 pm       Mangalore Correspondent   ಕರಾವಳಿ

ಶಾಲೆ, ಕಾಲೇಜು ಹಂತದಲ್ಲಿಯೇ ರಂಗಭೂಮಿ, ಕಲೆಗಳ ಬಗ್ಗೆ ಆಸಕ್ತಿ ಹುಟ್ಟಿಸುವ ದೃಷ್ಟಿಯಿಂದ ಬಹುಭಾಷಾ ನಟ ಪ್ರಕಾಶ್ ರೈ ನಿರ್ದಿಗಂತ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ಮಂಗಳೂರು, ಮಾ.19: ಶಾಲೆ, ಕಾಲೇಜು ಹಂತದಲ್ಲಿಯೇ ರಂಗಭೂಮಿ, ಕಲೆಗಳ ಬಗ್ಗೆ ಆಸಕ್ತಿ ಹುಟ್ಟಿಸುವ ದೃಷ್ಟಿಯಿಂದ ಬಹುಭಾಷಾ ನಟ ಪ್ರಕಾಶ್ ರೈ ನಿರ್ದಿಗಂತ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಮೈಸೂರಿನ ಶ್ರೀರಂಗಪಟ್ಟಣದಲ್ಲಿ ನೆಲೆ ನಿಂತಿರುವ ಈ ತಂಡವು ಮಂಗಳೂರಿನಲ್ಲಿ ರಂಗೋತ್ಸವ ತಂಡದ ಜೊತೆ ಸೇರಿ ನೇಹದ ನೇಯ್ಗೆ ಎನ್ನುವ ವಿಶಿಷ್ಟ ನಾಟಕ, ಸಂಗೀತ, ಚಿತ್ರ, ಸಿನೆಮಾ, ಸಾಹಿತ್ಯಗಳ ಸಮ್ಮಿಲನದ ಕಾರ್ಯಕ್ರಮವನ್ನು ಆಯೋಜಿಸಿದೆ.

ಮಂಗಳೂರಿನ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದಲ್ಲಿ ಮಾರ್ಚ್ 20ರಿಂದ 25ರ ವರೆಗೆ ಈ ಅಪೂರ್ವ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 20ರಂದು ಸಂಜೆ 5.30ಕ್ಕೆ ಖ್ಯಾತ ನಟ ನಾನಾ ಪಾಟೇಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 7ರಿಂದ 8.30ರ ವರೆಗೆ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ಎನ್ನುವ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ರಂಗ ವಿನ್ಯಾಸ, ನಿರ್ದೇಶನ ಕೆಪಿ ಲಕ್ಷ್ಮಣ ಮಾಡಲಿದ್ದಾರೆ.

ಮಾರ್ಚ್ 21ರಂದು ಬೆಳಗ್ಗೆ 9.30ರಿಂದ 1 ಗಂಟೆ ವರೆಗೆ ರಂಗ ಸಂವಾದಗಳು, ನಾಟಕದ ಬಗ್ಗೆ ಚರ್ಚೆ, ಮಾತುಕತೆ ಇರಲಿದೆ. ನಟ, ನಿರ್ದೇಶಕ ಶಕೀಲ್ ಅಹ್ಮದ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2ರಿಂದ ದ್ವೀಪ ಎನ್ನುವ ನಾಟಕ ಪ್ರದರ್ಶನ ಇದೆ. 3.30ರಿಂದ ಮದರ್ ಥೆರೆಸಾ ಪಾಸ್ ಪಾರ್ಕ್ ನಲ್ಲಿ ಸಿನೆಮಾ ನಟ ಅಚ್ಯುತ್ ಕುಮಾರ್ ಅವರು ಬಯಲ ರಂಗ ಸಂಭ್ರಮ ಕುರಿತು ಮಾತನಾಡಲಿದ್ದಾರೆ. ಇದೇ ವೇಳೆ, ರಿದಂ ಅಡ್ಡಾ ಮೈಸೂರು ಇವರಿಂದ ಲಯವಾದ್ಯ ಸಮ್ಮಿಳನ ಇರಲಿದೆ. ರಾತ್ರಿ 7ರಿಂದ ತಪ್ಪಿದ ಎಳೆ ಎನ್ನುವ ನಾಟಕ ಪ್ರದರ್ಶನ ಇದೆ.

22ರಂದು ಬೆಳಗ್ಗೆ ಪ್ರಯೋಗಗೊಂಡ ನಾಟಕ ಚರ್ಚೆ, ಶಶಿಧರ ಅಡಪ ಅವರಿಂದ ರಂಗವಿನ್ಯಾಸ ಪ್ರಾತ್ಯಕ್ಷಿಕೆ ಇರಲಿದೆ. ಮಧ್ಯಾಹ್ನ 2.30ರಿಂದ ಅನಾಮಿಕನ ಸಾವು ನಾಟಕ. ಶಕೀಲ್ ಅಹ್ಮದ್ ನಿರ್ದೇಶನ ಮಾಡಲಿದ್ದಾರೆ. ಸಂಜೆ 5ರಿಂದ ಜರ್ನಿ ಥಿಯೇಟರ್ ಮಂಗಳೂರು ಇವರಿಂದ ರಂಗ ಸಂಗೀತ ಇರಲಿದೆ. ರಾತ್ರಿ 7ರಿಂದ ನಾವು ಮೈಸೂರು ಇವರಿಂದ ಪ್ರತಿರೋಧದ ಹಾಡುಗಳು, ಬ್ಲಾಕ್ ಬಲೂನ್ ನಾಟಕ ಪ್ರದರ್ಶನ ಇರಲಿದೆ. ಪ್ರಸ್ತುತಿ ಶಾಲಾರಂಗ ನಿರ್ದಿಗಂತ ತಂಡದಿಂದ.

23ರಂದು ಬೆಳಗ್ಗೆ ರಂಗ ಸಂವಾದಗಳು, ನಾಟಕ ಚರ್ಚೆ, ತಜ್ಞರೊಂದಿಗೆ ಮಾತುಕತೆ ಇರಲಿದೆ. ರಂಗಭೂಮಿ ತಜ್ಞ ಐಕೆ ಬೊಳುವಾರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಎಲ್ ಸಿಆರ್ ಐ ಅಡಿಟೋರಿಯಂನಲ್ಲಿ ಫೋಟೋ ಎನ್ನುವ ಸಿನೆಮಾ ಪ್ರದರ್ಶನ ಇದೆ. ಸಂವಾದ ಕಾರ್ಯಕ್ರಮದಲ್ಲಿ ಹೇಮಂತ್ ರಾವ್, ಮಂಸೋರೆ, ಸುಮನಾ ಕಿತ್ತೂರು, ಈರೇಗೌಡ, ಅಭಯಸಿಂಹ, ಶಶಾಂಕ್ ಸೌಗಾಲ್ ಪಾಲ್ಗೊಳ್ಳುವರು. ಸಂಜೆ 5ರಿದಂ ಗೃಹಭಂಗ ಯಕ್ಷರೂಪಕ ಇದೆ. ಪರಿಕಲ್ಪನೆ ಡಾ.ದಿನೇಶ್ ನಾಯಕ್ ಅವರದ್ದು. ಸಂಜೆ 7ರಿಂದ ಮತ್ತಾಯ ನಾಟಕ ಪ್ರದರ್ಶನ, ನಿರ್ದೇಶನ ಅರುಣ ಲಾಲ್ ಅವರದ್ದು.

24ರಂದು ಬೆಳಗ್ಗೆ ವಿಚಾರ ಸಂಕಿರಣ- ಎಚ್ಎಸ್ ಶಿವಪ್ರಕಾಶ್, ಸವಿತಾರಾಣಿ, ಕೃಪಾಕರ ಸೇನಾನಿ, ಕೆ.ರಾಮಯ್ಯ, ಕೆವೈ ನಾರಾಯಣ ಸ್ವಾಮಿ ಪಾಲ್ಗೊಳ್ಳುವರು. ಸಂಜೆ 5.30ಕ್ಕೆ ಕೊಂಕಣಿ ಬ್ರಾಸ್ ಬ್ಯಾಂಡ್ ತಂಡದ ಪ್ರದರ್ಶನ. ಸಂಜೆ 7ರಿಂದ ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್ ಎನ್ನುವ ನಾಟಕ ಪ್ರದರ್ಶನ ಇರಲಿದೆ. 25ರಂದು ರಂಗಸಂವಾದ, ಮಾತುಕತೆ- ಸುಧಾ ಆಡುಕಳ ಇವರೊಂದಿಗೆ. ಮಧ್ಯಾಹ್ನ 2.30ರಿಂದ ರಂಗಭೂಮಿಯ ವರ್ತಮಾನ- ಮಾತುಕತೆ. ಸಂಜೆ 5.30ಕ್ಕೆ ಬಹುವಾದ್ಯಗಳ ನುಡಿ ನಡಿಗೆ,. ರಾತ್ರಿ 7ರಿಂದ ಮಂಟೇಸ್ವಾಮಿ ಕಾವ್ಯ ಪ್ರಯೋಗ, ನಿರ್ದೇಶನ ಡಾ.ಶ್ರೀಪಾದ ಭಟ್ ಇವರಿಂದ. ಒಟ್ಟು ಕಾರ್ಯಕ್ರಮವನ್ನು ನಿರ್ದಿಗಂತ ನಿರ್ದೇಶನ ಪ್ರಕಾಶ್ ರೈ ಮತ್ತು ರಂಗೋತ್ಸವ ನಿರ್ದೇಶಕ ಶ್ರೀಪಾದ ಭಟ್ ಇವರು ನಡೆಸಿಕೊಡಲಿದ್ದಾರೆ.

Multilingual actor Prakash Raj has launched an organisation called Nirdigantha with a view to generate interest in theatre and arts at the school and college level. The troupe, which has been based at Srirangapatna in Mysuru for the past four months, has organised a unique drama, music, film, cinema and literature fusion programme titled Neha Weave in association with Rangotsava troupe in Mangaluru.