Rowdies Mangalore exile order lok sabha elections 2024: ಲೋಕಸಭೆ ಚುನಾವಣೆ ಹಿನ್ನೆಲೆ ; ಮಂಗಳೂರಿನ 19 ರೌಡಿಗಳಿಗೆ ಗಡೀಪಾರು ಶಿಕ್ಷೆ

20-03-24 11:55 am       Mangalore Correspondent   ಕರಾವಳಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 19 ರೌಡಿ ಶೀಟರ್ ಗಳನ್ನು ಜಿಲ್ಲೆಯಿಂದ ಗಡೀಪಾರುಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಮಾಡಿದ್ದಾರೆ.

ಮಂಗಳೂರು, ಮಾ.20: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 19 ರೌಡಿ ಶೀಟರ್ ಗಳನ್ನು ಜಿಲ್ಲೆಯಿಂದ ಗಡೀಪಾರುಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಮಾಡಿದ್ದಾರೆ.

ಮೂಡುಬಿದಿರೆಯ ಅತ್ತೂರು ಅಸೀಬ್(40), ಕಾಟಿಪಳ್ಳದ ಶ್ರೀನಿವಾಸ್ ಎಚ್.(24), ಬಜ್ಪೆ ಶಾಂತಿಗುಡ್ಡದ ಮಹಮ್ಮದ್ ಸಫ್ವಾನ್ (28), ಬೋಂದೇಲ್ ನ ಜಯೇಶ್ ಯಾನೆ ಸಾಚು(28), ನೀರುಮಾರ್ಗ ಭಟ್ರಕೋಡಿಯ ವರುಣ್ ಪೂಜಾರಿ(30), ಅಶೋಕ ನಗರದ ಮಹಮ್ಮದ್ ಅಜೀಜ್(40), ಕಾವೂರಿನ ಮಹಮ್ಮದ್ ಇಶಾಮ್ (30), ಸುರತ್ಕಲ್ ಇಡ್ಯಾದ ಕಾರ್ತಿಕ್ ಶೆಟ್ಟಿ(28), ಕೈಕಂಬ- ಗಣೇಶಪುರದ ದೀಕ್ಷಿತ್ ಪೂಜಾರಿ(23), ಕೃಷ್ಣಾಪುರದ ಲಕ್ಷ್ಮೀಶ್ ಉಳ್ಳಾಲ(27), ಬೊಂಡಂತಿಲದ ಕಿಶೋರ್ ಸನಿಲ್ (36), ಉಳ್ಳಾಲ ಕೋಡಿಯ ಹಸೈನಾರ್ ಸೈಯದ್ ಆಲಿ (38), ಕುದ್ರೋಳಿ ಕರ್ಬಲಾ ರಸ್ತೆಯ ಅಬ್ದುಲ್ ಜಲೀಲ್ (28), ಬೋಳೂರಿನ ರೋಶನ್ ಕಿಣಿ(18), ಕಸಬಾ ಬೆಂಗರೆಯ ಅಹ್ಮದ್ ಸಿನಾನ್ (21), ಜಪ್ಪಿನಮೊಗರಿನ ದಿತೇಶ್ ಕುಮಾರ್ (28), ಬಜಾಲ್ ಕುತ್ತಡ್ಕದ ಗುರುಪ್ರಸಾದ್ (38) ಮತ್ತು ಭರತ್ ಪೂಜಾರಿ(31), ಜಪ್ಪು ಕುಡುಪಾಡಿಯ ಸಂದೀಪ್ ಶೆಟ್ಟಿ(37) ಗಡೀಪಾರು ಆದೇಶಕ್ಕೆ ಒಳಗಾದ ರೌಡಿಗಳು.

ಇವರ ವಿರುದ್ಧ ಮಂಗಳೂರು ನಗರದ ಹಲವಾರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಲ್ಲಿ ವಿವಿಧ ಠಾಣಾಧಿಕಾರಿಗಳ ವರದಿಯ ಪ್ರಕಾರ 19 ರೌಡಿಶೀಟರ್ ಗಳ ವಿರುದ್ಧ ಪೊಲೀಸ್ ಕಮಿಷನರ್ ಗಡೀಪಾರು ಆದೇಶ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ 7 ರೌಡಿಶೀಟರ್ ಗಳ ವಿರುದ್ಧ ಗಡೀಪಾರು ಆದೇಶ ಹೊರಡಿಸಲಾಗಿತ್ತು. ಈ ರೌಡಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಿದ್ದು ಅವರ ಚಟುವಟಿಕೆ ಬಗ್ಗೆ ನಿಗಾ ಇರಿಸಲಾಗುವುದು. ಪದೇ ಪದೇ ಅಪರಾಧ ಕೃತ್ಯಗಳನ್ನು ಎಸಗುವ 367 ಮಂದಿಯ ವಿರುದ್ಧ ಆಯಾ ಠಾಣೆಗಳಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

19 rowdies from Mangalore issues exile order over lok sabha elections 2024. In an effort to conduct Lok Sabha elections 2024 peacefully and fairly based on guidelines of the Election Commission of India, the Mangaluru city police commissionerate has been implementing preventive measures to maintain public peace and order within its jurisdiction.