ಮತ್ತೆ ನಾಲ್ವರ ಮೇಲೆ ಗೂಂಡಾ ಕಾಯ್ದೆ ; ಮತ್ತೆ 13 ಮಂದಿಗೆ ಗಡೀಪಾರು, ಲೋಕಸಭೆ ಚುನಾವಣೆ ನೆಪದಲ್ಲಿ ಪೊಲೀಸ್ ಕಮಿಷನರ್ ಗದಾಪ್ರಹಾರ

26-03-24 10:17 pm       Mangalore Correspondent   ಕರಾವಳಿ

ಲೋಕಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಮತ್ತೆ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಅಲ್ಲದೆ, ಮತ್ತೆ 13 ಮಂದಿಯನ್ನು ಲಿಸ್ಟ್ ಮಾಡಿ ಜಿಲ್ಲೆಯಿಂದ ಬೇರೆಡೆಗೆ ಗಡೀಪಾರು ಮಾಡಲಾಗಿದೆ.

ಮಂಗಳೂರು, ಮಾ.26: ಲೋಕಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಮತ್ತೆ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಅಲ್ಲದೆ, ಮತ್ತೆ 13 ಮಂದಿಯನ್ನು ಲಿಸ್ಟ್ ಮಾಡಿ ಜಿಲ್ಲೆಯಿಂದ ಬೇರೆಡೆಗೆ ಗಡೀಪಾರು ಮಾಡಲಾಗಿದೆ.

ಉಳ್ಳಾಲ ಅಂಬ್ಲಮೊಗರು ನಿವಾಸಿ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ(29), ಉಳ್ಳಾಲ ಕೈರಂಗಳ ನಿವಾಸಿ ನವಾಜ್ ಅಲಿಯಾಸ್ ನವ್ವಾ(36), ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್ (26), ಬೋಳೂರು ನಿವಾಸಿ ಚರಣ್ ಶೇಟ್ ಅಲಿಯಾಸ್ ಚರಣ್ ಪಾಲ್ (39) ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗೂಂಡಾ ಕಾಯ್ದೆ ಹೇರಿದ್ದಾರೆ.

ಹೇಮಚಂದ್ರ ವಿರುದ್ಧ ಮುಲ್ಕಿ, ಉಳ್ಳಾಲ, ಮಂಗಳೂರು ದಕ್ಷಿಣ, ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಬಂಟ್ವಾಳ ಠಾಣೆಯಲ್ಲಿ ಕೊಲೆಯತ್ನ, ಕೊಲೆ, ಗಲಭೆ, ಕಿಡ್ನಾಪ್ ಸೇರಿ ಒಟ್ಟು 17 ಕೇಸುಗಳನ್ನು ಎದುರಿಸುತ್ತಿದ್ದಾನೆ. ಅನೀಶ್ ವಿರುದ್ಧ 18 ಕೇಸುಗಳಿದ್ದು, ಮಂಗಳೂರು ದಕ್ಷಿಣ, ಕದ್ರಿ, ಪಾಂಡೇಶ್ವರ, ಬರ್ಕೆ, ಕಂಕನಾಡಿ ಠಾಣೆಗಳಲ್ಲಿ ಕೊಲೆಯತ್ನ, ಡ್ರಗ್ಸ್ ಕೇಸು, ಗಲಭೆ, ಕಳ್ಳತನ, ಹಲ್ಲೆ ಪ್ರಕರಣಗಳಿವೆ.

ಮುಡಿಪು ನವಾಜ್ ವಿರುದ್ಧ 13 ಕೇಸುಗಳಿದ್ದು, ಕೊಣಾಜೆ, ಉಳ್ಳಾಲ, ಮುಲ್ಕಿ, ಸುರತ್ಕಲ್ ಠಾಣೆಯಲ್ಲಿ ಹಲ್ಲೆ, ಕೊಲೆಯತ್ನ, ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಚರಣ್ ವಿರುದ್ಧ 11 ಕೇಸುಗಳಿದ್ದು, ಬರ್ಕೆ, ಉರ್ವಾ, ಪಣಂಬೂರು ಠಾಣೆಯಲ್ಲಿ ಪ್ರಕರಣ ಇದೆ. ಹಲ್ಲೆ, ಗಲಭೆ, ಕೊಲೆಯತ್ನ, ಎರಡು ಕೊಲೆ ಪ್ರಕರಣ, ಕಿಡ್ನಾಪ್, ರಾಬರಿ ಕೇಸುಗಳಲ್ಲಿ ಭಾಗಿಯಾದ ಪ್ರಕರಣ ಎದುರಿಸುತ್ತಿದ್ದಾನೆ.

ಮತ್ತೆ 13 ಮಂದಿಗೆ ಗಡೀಪಾರು ಶಿಕ್ಷೆ

ಇದೇ ವೇಳೆ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತೆ 13 ಮಂದಿ ಅಪರಾಧ ಹಿನ್ನೆಲೆಯವರನ್ನು ಜಿಲ್ಲೆಯಿಂದ ಬೇರೆಡೆಗೆ ಗಡೀಪಾರು ಮಾಡಲು ಪೊಲೀಸ್ ಕಮಿಷನರ್ ಆದೇಶ ಮಾಡಿದ್ದಾರೆ. ವಾರದ ಹಿಂದೆ 48 ಮಂದಿಯ ವಿರುದ್ಧ ಗಡೀಪಾರು ಆದೇಶ ಮಾಡಲಾಗಿತ್ತು. ಈಗ ಚುನಾವಣೆ ಹಿನ್ನೆಲೆಯಲ್ಲಿ ಮತ್ತಷ್ಟು ಮಂದಿಯನ್ನು ಲಿಸ್ಟ್ ಮಾಡಿ ಮೂರು ತಿಂಗಳ ಕಾಲ ಗಡೀಪಾರು ಮಾಡಲು ಆದೇಶ ಮಾಡಲಾಗಿದೆ.

ಬೋಳಾರ ನಿವಾಸಿ ಜ್ಞಾನೇಶ್ ನಾಯಕ್(25), ಕುದ್ರೋಳಿ ನಿವಾಸಿ ಫಹಾದ್(25), ಉಳ್ಳಾಲ ಮೊಗವೀರಪಟ್ನ ನಿವಾಸಿ ಧನುಷ್ (30), ಕಾವೂರು ಶಾಂತಿನಗರದ ಮೊಹಮ್ಮದ್ ಸಾಹೇಬ್(28), ಮೂಡುಶೆಡ್ಡೆ ದೀಪಕ್ ಪೂಜಾರಿ(38), ಕೃಷ್ಣಾಪುರದ ಶಾಹಿಲ್ ಇಸ್ಮಾಯಿಲ್(27), ಉಳ್ಳಾಲ ಬಸ್ತಿಪಡ್ಪು ನಿವಾಸಿ ಮಹಮ್ಮದ್ ಶಕೀರ್(30), ಉಳ್ಳಾಲ ಮೇಲಂಗಡಿಯ ಇಬ್ರಾಹಿಂ ಖಲೀಲ್ (22), ಕುದ್ರೋಳಿ ಧನುಷ್ (28), ಬಜಾಲಿನ ನೌಫಾಲ್ (35), ಮರೋಳಿಯ ಹವಿತ್ ಪೂಜಾರಿ(28), ಫರಂಗಿಪೇಟೆಯ ಕೌಶಿಕ್ ನಿಹಾಲ್ (24), ಬೆಳುವಾಯಿ ನಿವಾಸಿ ಸಂತೋಷ್ ಶೆಟ್ಟಿ (34) ವಿರುದ್ಧ ಗಡೀಪಾರು ಆದೇಶ ಮಾಡಲಾಗಿದೆ.

Loksabha elections Goonda act again on 13 rowdies in Mangalore. Recently Three accused booked under Goonda Act in Mangalore. Nawaz from Gurupur, Mohammed Kabeer from Kotepura and Jayaprashanth from Shakti Nagara.