ಬ್ರೇಕಿಂಗ್ ನ್ಯೂಸ್
29-11-20 12:07 am Mangaluru Crime Correspondent ಕರಾವಳಿ
ಮಂಗಳೂರು, ನ.29: ಮಂಗಳೂರಿನಲ್ಲಿ ಮತ್ತೊಂದು ಕಡೆ ಮತಾಂಧರ ಗೋಡೆ ಬರಹ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಮಂಗಳೂರಿನ ಪಿವಿಎಸ್ ಬಳಿಯ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಉರ್ದು ಭಾಷೆಯಲ್ಲಿ ಬರಹ ಕಂಡುಬಂದಿದೆ.
ಕೋರ್ಟ್ ಆವರಣದಲ್ಲಿರುವ ಜನರೇಟರ್ ರೂಂ ಗೋಡೆಯ ಮೇಲೆ ಉರ್ದು ಭಾಷೆಯಲ್ಲಿ "Gustak E Rasool ek hi saza Sar tan say juda" ಎಂದು ಬರೆದಿದ್ದಾರೆ. ಇದರರ್ಥ "ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು" ಎಂಬುದಾಗಿ ಎನ್ನಲಾಗಿದೆ. ಈ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನಗಳ ಹಿಂದೆ ಬಿಜೈ ಅಪಾರ್ಟ್ಮೆಂಟ್ ಆವರಣದಲ್ಲಿ ಉಗ್ರರ ಪರ ಗೋಡೆ ಬರಹ ಪತ್ತೆಯಾಗಿ ಸಂಚಲನ ಮೂಡಿಸಿತ್ತು. ಸಂಘ ಪರಿವಾರದ ವಿರುದ್ಧ ಬೆದರಿಕೆ ಹಾಕುವ ರೀತಿ ಲಷ್ಕರ್, ತಾಲಿಬಾನ್ ಉಗ್ರರನ್ನು ಕರೆಸಬೇಕಾದೀತು ಎಂಬರ್ಥದಲ್ಲಿ ಕಿಡಿಗೇಡಿಗಳು ಉಗ್ರರ ಪರವಾಗಿ ಬರಹ ಬರೆದಿದ್ದರು.
ಬಿಜೈ ಹಾಗು ಕೋರ್ಟ್ ಅವರಣದ ಗೋಡೆ ಬರಹದಲ್ಲಿ ಸಾಮ್ಯತೆ ಕಂಡುಬಂದಿದ್ದು ಎರಡೂ ಕೃತ್ಯವನ್ನು ಒಂದೇ ತಂಡ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೈಕ್ ನಲ್ಲಿ ಬಂದು ಸ್ಪ್ರೇ ಪೇಂಟ್ ಮೂಲಕ ಗೋಡೆ ಬರಹ ಬರೆದು ಪರಾರಿಯಾಗುತ್ತಿರುವ ಬಗ್ಗೆ ಈಗಾಗಲೇ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ನಗರದ ಸಿಸಿಟಿವಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಪತ್ತೆ ಕಾರ್ಯಾಚರಣೆಗೆ ಪೊಲೀಸರ ವಿಶೇಷ ತಂಡ ಇಳಿದಿರುವಾಗಲೇ ಮತ್ತೊಂದು ಕಡೆ ಮತಾಂಧರು ಕಿಡಿಗೇಡಿ ಕೃತ್ಯ ನಡೆಸಿರುವುದು ಪೊಲೀಸರಿಗೇ ಸವಾಲಾಗುವ ರೀತಿ ಇದೆ.
Also Read: 'ಲಷ್ಕರ್ ಜಿಂದಾಬಾದ್' ಗೋಡೆ ಬರಹ ; ಯಾರೇ ಬರೆದಿದ್ದರೂ ಕಠಿಣ ಕ್ರಮ
After Miscreants graffiti wall in support of Anti-terrorist groups at Kadri in Mangalore, another graffiti has been reported at the Mangalore Court Wall on November 28, Saturday, 2020. The Police rushed to the spot and have erased graffiti by painting on the same.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm