ಬ್ರೇಕಿಂಗ್ ನ್ಯೂಸ್
30-03-24 10:35 pm Mangalore Correspondent ಕರಾವಳಿ
ಪುತ್ತೂರು, ಮಾ.30: ಕಡಬದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುಸ್ಲಿಂ ಮುಖಂಡರು ತಮ್ಮನ್ನು ಪಕ್ಷದಲ್ಲಿ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ನಾಯಕರ ಜೊತೆಗೆ ವಾಗ್ವಾದ ನಡೆಸಿದ ಪ್ರಸಂಗ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಏರು ಧ್ವನಿಯಲ್ಲಿ ರಾಜ್ಯ ಮಟ್ಟದ ನಾಯಕರು ಸ್ಥಳೀಯ ನಾಯಕರು ಪ್ರಶ್ನೆ ಮಾಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಡಬ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಕೃಷ್ಣಪ್ಪ ಅವರನ್ನು ರಾಜ್ಯ ಘಟಕ ಅಭ್ಯರ್ಥಿ ಮಾಡಿದ್ದಕ್ಕೆ ಸ್ಥಳೀಯ ನಾಯಕರು ವಿರೋಧಿಸಿದ್ದರು. ತಮ್ಮ ಅಭ್ಯರ್ಥಿ ನಂದ ಕುಮಾರ್ ಎಂದು ಪ್ರತ್ಯೇಕವಾಗಿ ಸಭೆಯನ್ನೂ ನಡೆಸಿದ್ದರು. ಬಂಡಾಯ ಸ್ಪರ್ಧಿಸುವ ಬಗ್ಗೆಯೂ ಮಾತನಾಡಿದ್ದರು. ಬಳಿಕ ಆ ವಿಚಾರವನ್ನು ಅಲ್ಲಿಂದಲ್ಲಿಗೆ ಕೊನೆಗೊಳಿಸಲಾಗಿತ್ತು. ನಂದಕುಮಾರ್ ಬಣವೂ ತಣ್ಣಗಾಗಿತ್ತು.
ಆದರೆ ಇದೀಗ ಲೋಕಸಭೆ ಚುನಾವಣೆಯ ಪ್ರಚಾರ ಶುರುವಾಗುತ್ತಿದ್ದಂತೆ ಕಡಬ ಬ್ಲಾಕ್ ಕಾಂಗ್ರೆಸಿನ ಮುಸ್ಲಿಂ ಮುಖಂಡರು ಜಿಲ್ಲಾ ನಾಯಕರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಸಭೆ ಶುರುವಾಗೋದಕ್ಕೂ ಮುನ್ನ ಕೆಲವು ಸ್ಥಳೀಯ ಪುಢಾರಿಗಳು ತಮಗೇನೂ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಪ್ರಶ್ನೆ ಎತ್ತಿದ್ದಾರೆ. ಸಮಾಧಾನಿಸಲು ಬಂದು ವಿನಯ ಕುಮಾರ್ ಸೊರಕೆ, ಚಂದ್ರಹಾಸ ಶೆಟ್ಟಿ, ಅಭ್ಯರ್ಥಿ ಪದ್ಮರಾಜ್ ಜೊತೆಗೂ ವಾಗ್ವಾದ ನಡೆಸಿದ್ದಾರೆ. ಒಂದು ಹಂತದಲ್ಲಿ ನಾವು ಸಭೆಗೆ ಬರೋದಿಲ್ಲ ಎಂದು ಹೊರಗೆ ನಡೆದಿದ್ದಾರೆ. ಬಳಿಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅಸಮಾಧಾನಗೊಂಡ ಕಾರ್ಯಕರ್ತರನ್ನು ಮನವೊಲಿಸಲು ಯತ್ನಿಸಿದ್ದಾರೆ.
ಈ ಬಗ್ಗೆ ಸುಳ್ಯ ಕಾಂಗ್ರೆಸಿನ ನಾಯಕರೊಬ್ಬರಲ್ಲಿ ಕೇಳಿದಾಗ, ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಸುಳ್ಯ ಮತ್ತು ಕಡಬ ಬ್ಲಾಕ್ ಇದೆ. ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ಸಮಿತಿ ಮತ್ತು ಗ್ಯಾರಂಟಿ ಯೋಜನೆ ಸಮಿತಿ ಎರಡರಲ್ಲೂ ಮುಸ್ಲಿಮರನ್ನೇ ಅಧ್ಯಕ್ಷರಾಗಿ ಮಾಡಲಾಗಿದೆ. ಸುಳ್ಯದಲ್ಲಿ 24 ಸಾವಿರದಷ್ಟು ಮುಸ್ಲಿಂ ಮತದಾರರಿದ್ದಾರೆ. ಈಗಲೇ ತಮ್ಮ ಓಟು ಪೂರ್ತಿ ಕಾಂಗ್ರೆಸಿಗೆ ಹಾಕುತ್ತೇವೆಂದು ಹೇಳಿ ಎಲ್ಲ ಪ್ರಮುಖ ಹುದ್ದೆಗಳನ್ನೂ ಕೇಳಿ ಪಡೆಯುತ್ತಿದ್ದಾರೆ. ಕಡಬದಲ್ಲಿ ಪ್ರತ್ಯೇಕವಾಗಿ ಪ್ರಚಾರ ಸಮಿತಿ ಮಾಡಿಲ್ಲ. ಸುಳ್ಯದ ಒಟ್ಟು ಮತದಾರರಲ್ಲಿ 70 ಶೇಕಡಾ ಒಕ್ಕಲಿಗರೇ ಇದ್ದಾರೆ. ಜಾತಿವಾರು ಕೇಳಿದರೆ, ಎಲ್ಲರಿಗೂ ಕೊಡಬೇಕಾದೀತು. ಇವರು ಇಷ್ಟೆಲ್ಲ ಕೊಟ್ಟರೂ ಪಕ್ಷದ ಪ್ರಚಾರ ಸಭೆಯಲ್ಲಿ ಅಪಸ್ವರ ಎತ್ತಿದ್ದಾರೆ ಎಂದು ಹೇಳಿದ್ದಾರೆ.
ಸಭೆಯಲ್ಲಿದ್ದ ಇನ್ನೊಬ್ಬರಲ್ಲಿ ಕೇಳಿದಾಗ, ಕಡಬ ಬ್ಲಾಕ್ ಕಾಂಗ್ರೆಸ್ ನಲ್ಲಿ ಮುಸ್ಲಿಮರಿಗೆ ಪದಾಧಿಕಾರಿ ಹುದ್ದೆ ಕೊಟ್ಟಿಲ್ಲ ಅನ್ನುವುದು ಆವರ ಆಕ್ಷೇಪ ಆಗಿತ್ತು. ಇಲ್ಲಿಂದ ನಾವು ಕೆಲವರ ಹೆಸರನ್ನು ಕಳಿಸಿಕೊಟ್ಟಿದ್ದೆವು. ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಬೇರೆ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು ಎಂದಿದ್ದಾರೆ. ಬಳಿಕ ಜಿಲ್ಲಾಧ್ಯಕ್ಷರು ಮತ್ತು ವಿನಯ ಕುಮಾರ್ ಸೊರಕೆ ಅವರು, ನಿಮ್ಮಲ್ಲಿ ಒಬ್ಬರಿಗೆ ಎರಡೇ ದಿನದಲ್ಲಿ ಪ್ರಮುಖ ಹುದ್ದೆಯನ್ನು ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುಸ್ಲಿಂ ಮುಖಂಡರನ್ನು ಸಮಾಧಾನಪಡಿಸಿದ ಬಳಿಕ ಕಾರ್ಯಕರ್ತರ ಸಭೆ ನಡೆಯಿತು. ಅಭ್ಯರ್ಥಿ ಪದ್ಮರಾಜ್ ಮಾತನಾಡಿ, ಈ ಭಾಗದ ಪ್ರಮುಖ ಬೆಳೆಯಾದ ಅಡಿಕೆ ಮತ್ತು ರಬ್ಬರ್ ಬೆಲೆಯ ವಿಚಾರದಲ್ಲಿ ಲೋಕಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಅಲ್ಲದೆ, ಅಡಿಕೆ ಹಳದಿ ರೋಗದ ಬಗ್ಗೆ ಸಂಶೋಧನೆ ನಡೆಸಲು ಅಧ್ಯಯನ ಸಮಿತಿಯನ್ನು ರಚಿಸಲು ಕೇಂದ್ರ ಮಟ್ಟದಲ್ಲಿ ಒತ್ತಡ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಭೆಯಲ್ಲಿ ಕೆಪಿಸಿಸಿ ಸದಸ್ಯ ಕೃಷ್ಣಪ್ಪ, ಸುಳ್ಯ ಬ್ಲಾಕ್ ಅಧ್ಯಕ್ಷ ಪಿಸಿ ಜಯರಾಮ್, ಕೆಪಿಸಿಸಿ ಸದಸ್ಯ ಡಾ.ರಘು, ಸುಳ್ಯ ಕ್ಷೇತ್ರದ ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಚುನಾವಣಾ ಉಸ್ತುವಾರಿ ಬಾಲಕೃಷ್ಣ ಬಳ್ಳೇರಿ, ಪ್ರಚಾರ ಸಮಿತಿ ಉಸ್ತುವಾರಿ ವೆಂಕಪ್ಪ ಗೌಡ, ಕಿರಣ್ ಬುಡ್ಲೆಗುತ್ತು ಮತ್ತಿತರರು ಇದ್ದರು.
Congress Muslim leaders fight erupts amid leaders in Kadaba office in Mangalore for not giving any post at congress party even after 24 thousand Muslims voters are in Kadaba
11-08-25 11:01 pm
Bangalore Correspondent
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
Forced Marriage, Chitradurga: ನನಗಿನ್ನೂ ಹದಿನಾರ...
11-08-25 11:18 am
ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ 5 ಲಕ್ಷ ರೂ. ಕೊಡ...
10-08-25 09:12 pm
11-08-25 08:55 pm
HK News Desk
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
ಭಾರತದ ವಿರುದ್ಧ ಟ್ರಂಪ್ ಸುಂಕಾಸ್ತ್ರಕ್ಕೆ ಅಮೆರಿಕದ ತ...
09-08-25 11:09 pm
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
11-08-25 07:39 pm
Mangalore Correspondent
Padmalatha Murder Case, Dharmasthala, SIT: 19...
11-08-25 03:33 pm
Ground Penetrating Radar, Dharmasthala: ಧರ್ಮಸ...
11-08-25 11:49 am
Kudla Rampage YouTuber, Ajay Anchan Case: ಬೈಕ...
11-08-25 11:38 am
ಹೊಸ್ತಿಲು ಬರೆದು, ಪಾತ್ರೆ ತೊಳೆದು, ದೇವರ ಸ್ತೋತ್ರ ಹ...
10-08-25 04:32 pm
11-08-25 12:37 pm
Mangalore Correspondent
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm