ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್ಲಿ 150 ಕಾಲೇಜಿನ 8500 ಮಂದಿ ತಪಾಸಣೆ, 98 ವಿದ್ಯಾರ್ಥಿಗಳು ಪಾಸಿಟಿವ್, ಮತ್ತೆ ಟೆಸ್ಟಿಂಗ್ ನಲ್ಲಿ 38 ನೆಗೆಟಿವ್, ಪೊಲೀಸ್ ಕಾರ್ಯಕ್ಕೆ ಪಾಸಿಟಿವ್ ಸಂದೇಶ

11-09-26 09:42 pm       HK News Staffer   ಕರಾವಳಿ

ಕಾಲೇಜು ವಿದ್ಯಾರ್ಥಿಗಳನ್ನು ಡ್ರಗ್ಸ್ ಮುಕ್ತಗೊಳಿಸಲು ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಮುಂದಾಗಿದ್ದು ಕಳೆದ ಜನವರಿಯಿಂದ ಈವರೆಗೆ ಮಂಗಳೂರಿನ 150 ಕಾಲೇಜುಗಳಲ್ಲಿ 8500 ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗಿದ್ದು ಆ ಪೈಕಿ 98 ಮಂದಿ ಪಾಸಿಟಿವ್ ಆಗಿದ್ದಾರೆಂದು ತಿಳಿಸಿದ್ದಾರೆ.

ಮಂಗಳೂರು, ಸೆ.11: ಕಾಲೇಜು ವಿದ್ಯಾರ್ಥಿಗಳನ್ನು ಡ್ರಗ್ಸ್ ಮುಕ್ತಗೊಳಿಸಲು ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಮುಂದಾಗಿದ್ದು ಕಳೆದ ಜನವರಿಯಿಂದ ಈವರೆಗೆ ಮಂಗಳೂರಿನ 150 ಕಾಲೇಜುಗಳಲ್ಲಿ 8500 ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗಿದ್ದು ಆ ಪೈಕಿ 98 ಮಂದಿ ಪಾಸಿಟಿವ್ ಆಗಿದ್ದಾರೆಂದು ತಿಳಿಸಿದ್ದಾರೆ. 

ಪಾಸಿಟಿವ್ ಆದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮತ್ತು ಪೋಷಕರ ಮೂಲಕ ಕೌನ್ಸೆಲಿಂಗ್ ಮಾಡಿಸಿದ್ದು ಅವರನ್ನು ವ್ಯಸನದಿಂದ ಬಿಡಿಸಲು ಪ್ರಯತ್ನ ಪಡಲಾಗಿತ್ತು. ಆದರೆ ಇದೀಗ ಮತ್ತೆ ಅದೇ ವಿದ್ಯಾರ್ಥಿಗಳನ್ನು ಡ್ರಗ್ಸ್ ತಪಾಸಣೆಗೆ ಒಳಪಡಿಸಿದ್ದು ಸೆ.10ರಂದು ನಡೆಸಿದ ಡ್ರೈವ್ ನಲ್ಲಿ 50 ಮಂದಿ ಪಾಸಿಟಿವ್ ಆಗಿದ್ದಾರೆ. ಇದೇ ವೇಳೆ, ಈ ಹಿಂದೆ ಪಾಸಿಟಿವ್ ಆಗಿದ್ದ ಪೈಕಿ 38 ಮಂದಿ ನೆಗೆಟಿವ್ ಆಗಿದ್ದು ಅವರು ನಾವು ಈಗ ಡ್ರಗ್ಸ್ ಬಳಕೆ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ಈ ಹಿಂದೆ ಪಾಸಿಟಿವ್ ಆಗಿದ್ದವರು ನೆಗೆಟಿವ್ ಬಂದಿರೋದು ವ್ಯಸನ ಬಿಟ್ಟಿರುವುದರ ಸಂಕೇತ. ಹಿಂದೆ ಪಾಸಿಟಿವ್ ಆಗಿದ್ದವರ ಪೈಕಿ 75 ಶೇ. ನೆಗೆಟಿವ್ ಬಂದಿದ್ದು ವಿದ್ಯಾರ್ಥಿಗಳು ಈ ಕಾರ್ಯಾಚರಣೆಯನ್ನು ಪಾಸಿಟಿವ್ ಆಗಿ ತೆಗೆದುಕೊಂಡಿರುವುದನ್ನು ಸೂಚಿಸುತ್ತದೆ. ಇದರಲ್ಲೂ ಪಾಸಿಟಿವ್ ಆದ 12 ಮಂದಿಯನ್ನು ಹೆಚ್ಚು ನಿಗಾ ವಹಿಸುವಂತೆ ಕಾಲೇಜು ಆಡಳಿತ ಮತ್ತು ಪೋಷಕರಿಗೆ ಸೂಚಿಸಲಾಗಿದೆ. 

ಕಾಲೇಜು ಆಡಳಿತ ಮತ್ತು ಪೊಲೀಸರು ಜಂಟಿಯಾಗಿ ಡ್ರಗ್ಸ್ ತಪಾಸಣೆ ಕಾರ್ಯಾಚರಣೆ ನಡೆಸಿದ್ದರು. ಮಂಗಳೂರಿನ ಸಾರ್ವಜನಿಕರು ಸಹಕರಿಸಿದರೆ ವಿದ್ಯಾರ್ಥಿಗಳನ್ನು ಡ್ರಗ್ಸ್ ಮುಕ್ತಗೊಳಿಸಲು ಸಾಧ್ಯವಿದೆ ಎಂದು ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.