ಬ್ರೇಕಿಂಗ್ ನ್ಯೂಸ್
31-03-24 10:19 pm Mangalore Correspondent ಕರಾವಳಿ
ಮಂಗಳೂರು, ಮಾ.31: ದೇಶದೆಲ್ಲೆಡೆ ಐಪಿಎಲ್ ಕ್ರಿಕೆಟ್ ಹಬ್ಬದ ಸಂಭ್ರಮ ಮನೆಮಾಡಿದೆ. ಟಿವಿಯ ಮುಂದೆ ಕುಳಿತು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಆಟವನ್ನು ನೋಡಿ ಸವಿಯುತ್ತಿದ್ದಾರೆ. ಆದರೆ ಐಪಿಎಲ್ ಶೋ ನಡುವಲ್ಲೇ ಕ್ಯಾಡ್ ಬರಿ ಚಾಕಲೇಟಿನ ವಿಭಿನ್ನ ಜಾಹೀರಾತೊಂದು ಗಮನ ಸೆಳೆಯುತ್ತಿದೆ. ಕ್ರಿಕೆಟ್ ಹೀರೋಗಳನ್ನು ಜಗತ್ತಿಗೆ ಪರಿಚಯಿಸಿದ ಕೋಚ್ ಗಳನ್ನು ಇದೇ ಮೊದಲ ಬಾರಿಗೆ ಬಹುರಾಷ್ಟ್ರೀಯ ಕಂಪನಿ ತನ್ನ ಜಾಹೀರಾತಿಗೆ ಬಳಸಿಕೊಂಡಿದ್ದು ಕ್ರಿಕೆಟ್ ಗುರುಗಳಿಗೆ ವಿಭಿನ್ನ ರೀತಿಯ ಗೌರವ ನೀಡಿದೆ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಸದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಮಂಗಳೂರಿನವರು ಅನ್ನೋದು ಎಲ್ಲರಿಗೂ ಗೊತ್ತು. ರಾಹುಲ್ ಹತ್ತು ವರ್ಷದ ಹುಡುಗನಾಗಿದ್ದಾಗಲೇ ಆತನ ಪ್ರೌಢಿಮೆಯನ್ನು ಮೊದಲ ಬಾರಿಗೆ ಗುರುತಿಸಿದ್ದು ಕೋಚ್ ಸಾಮ್ಯುಯೆಲ್ ಜಯರಾಜ್. ಮಂಗಳೂರಿನ ನೆಹರು ಮೈದಾನದಲ್ಲಿ ರಾಹುಲ್ ಗೆ ಕ್ರಿಕೆಟ್ ಆಟದ ಎಬಿಸಿಡಿಯನ್ನು ಹೇಳಿಕೊಟ್ಟಿದ್ದ ಜಯರಾಜ್, ಆತನಲ್ಲಿ ಮಹಾನ್ ತಾರೆಯಾಗುವ ಕನಸು ಬಿತ್ತಿದ್ದರು. ಅಲ್ಲದೆ, ಆತನಲ್ಲಿ ಅಡಗಿದ್ದ ಕ್ರಿಕೆಟ್ ಆಟದ ಹುಮ್ಮಸ್ಸಿಗೆ ತಕ್ಕಂತೆ ಬ್ಯಾಟಿಂಗ್ ಶೈಲಿಯ ಕರಾಮತ್ತನ್ನು ಹೇಳಿಕೊಟ್ಟಿದ್ದರು.
ಇದೀಗ Cadbury Dairy Milk ಕಂಪನಿಯವರು #ThankYouFirstCoach ಹೆಸರಲ್ಲಿ ಕ್ರಿಕೆಟ್ ಗುರುಗಳಿಗೆ ಗೌರವ ಕೊಡುವ ಸಲುವಾಗಿ ಅಭಿಯಾನದ ರೀತಿ ಜಾಹೀರಾತು ಮಾಡಿದ್ದಾರೆ. ಆಮೂಲಕ ಕ್ರಿಕೆಟ್ ಜಗತ್ತಿನ ಉದಯೋನ್ಮುಖ ತಾರೆಯರನ್ನು ಪರಿಚಯಿಸಿದ ಮೊದಲ ಗುರುವರ್ಯರನ್ನು ಗುರುತಿಸಿ, ಅವರಿಗೆ ವಿಶೇಷ ಗೌರವ ನೀಡುವ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಎನ್ನುವಂತೆ ಮಂಗಳೂರಿನ ಕ್ರಿಕೆಟ್ ಗುರು ಒಬ್ಬರನ್ನು ಜಗತ್ತಿನಾದ್ಯಂತ ಪ್ರಸಾರವಾಗುವ ಕ್ಯಾಡ್ ಬರಿ ಚಾಕಲೇಟ್ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿರುವ ಸೂರ್ಯ ಕುಮಾರ್ ಅವರ ಕೋಚ್ ಮುಂಬೈನ ಅಶೋಕ್ ಕುಮಾರ್ ಅವರನ್ನೂ ಜಾಹೀರಾತಿನಲ್ಲಿ ಬಳಸಿದ್ದಾರೆ.
ಈ ಬಗ್ಗೆ ಕ್ರಿಕೆಟ್ ಕೋಚ್ ಸಾಮ್ಯುಯೆಲ್ ಜಯರಾಜ್ ಅವರನ್ನು ಹೆಡ್ ಲೈನ್ ಕರ್ನಾಟಕದಿಂದ ಸಂಪರ್ಕಿಸಿದಾಗ, ಕ್ರಿಕೆಟ್ ತಾರೆಯರನ್ನು ಬೆಳಕಿಗೆ ತಂದವರನ್ನು ಜಾಹೀರಾತಿನಲ್ಲಿ ತೋರಿಸಿ ಕ್ಯಾಡ್ ಬರಿಯವರು ವಿಭಿನ್ನ ರೀತಿಯ ಕ್ಯಾಂಪೇನ್ ಮಾಡುತ್ತಿದ್ದಾರೆ. ಕಳೆದ ಬಾರಿ ಗ್ರೌಂಡಿನಲ್ಲಿ ಇರುವವರನ್ನು ಜಾಹೀರಾತಿನಲ್ಲಿ ತೋರಿಸಿದ್ದರು. ಮಂಗಳೂರಿನ ಕೋಚ್ ಒಬ್ಬರನ್ನು ಬಹುರಾಷ್ಟ್ರೀಯ ಕಂಪನಿಯೊಂದು ಗುರುತಿಸಿ ಗೌರವ ಕೊಟ್ಟಿದ್ದು ಖುಷಿ ನೀಡಿದೆ. ಇದು ಕ್ರೀಡಾ ಕ್ಷೇತ್ರಕ್ಕೆ ಸಂದ ಗೌರವ ಎಂದಿದ್ದಾರೆ.
ಕ್ಯಾಡ್ ಬರಿ ಜಾಹೀರಾತು ವಿಭಾಗದ ಚೀಫ್ ಕ್ರಿಯೇಟಿವ್ ಆಫೀಸರ್ ಸುಕೇಶ್ ನಾಯಕ್ ಪ್ರತಿಕ್ರಿಯಿಸಿದ್ದು, ಕ್ರಿಕೆಟ್ ಆಟಗಾರರು ಸೂಪರ್ ಶಾಟ್ಸ್ ಗಳನ್ನು ಆಡಿದಾಗ ಅಭಿಮಾನಿಗಳು ಚೀಯರ್ ಆಗುವುದು ಸಹಜ. ಆದರೆ, ತಮ್ಮ ಫೇವರಿಟ್ ಸ್ಟಾರ್ ಗಳು ಅಂಥ ಸೂಪರ್ ಶಾಟ್ಸ್ ಗಳನ್ನು ಹೊಡೆಯಲು ಕಾರಣವಾಗಿದ್ದು ಯಾರೆಂಬುದು ಯಾರಿಗೂ ತಿಳಿದಿರಲ್ಲ. ಆಟಗಾರರು ಖ್ಯಾತಿಯ ಉತ್ತುಂಗಕ್ಕೇರಲು ನೈಜ ಕಾರಣ ಯಾರೆನ್ನುವುದನ್ನು ಅಭಿಮಾನಿಗಳಿಗೆ ತಿಳಿಸುವುದು ನಮ್ಮ ಕಳಕಳಿಯಾಗಿತ್ತು. ಕ್ರಿಕೆಟ್ ತಾರೆಯರ ಗುರುಗಳನ್ನು ದೇಶಕ್ಕೆ ಪರಿಚಯಿಸಬೇಕು, ಫೇವರಿಟ್ ಆಟಗಾರರ ಹಿಂದೆ ಇಂಥ ಗುರುಗಳು ಬೆವರು ಹರಿಸಿದ್ದಾರೆ ಎನ್ನುವುದನ್ನು ತೋರಿಸುವುದಕ್ಕಾಗಿ ಈ ರೀತಿಯ ಜಾಹೀರಾತು ಮಾಡಿದ್ದೇವೆ ಎಂದಿದ್ದಾರೆ.
ಕ್ಯಾಡ್ ಬರಿ ಚೀಫ್ ಕ್ಲೈಂಟ್ ಆಫೀಸರ್ ಶೇಖರ್ ಬ್ಯಾನರ್ಜಿ ಇಕನಾಮಿಕ್ ಟೈಮ್ಸ್ ಗೆ ಪ್ರತಿಕ್ರಿಯಿಸಿದ್ದು, ಕ್ರಿಕೆಟ್ ಹೀರೋಗಳ ಹಿಂದಿನ ಮೊದಲ ಗುರುಗಳನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ಉದ್ದೇಶ. ತೆರೆಯ ಹಿಂದಿನ ಹೀರೋಗಳನ್ನು ಬೆಳಕಿಗೆ ತರುವುದು, ಕ್ರಿಕೆಟ್ ತಾರೆಯರಿಗೆ ಮೊದಲ ಬಾರಿಗೆ ಒಂದು ಶೇಪ್ ಕೊಟ್ಟವರನ್ನು ತೋರಿಸುವ ಅಭಿಯಾನವನ್ನು ಈ ಐಪಿಎಲ್ ಸೀಸನ್ನಲ್ಲಿ ಮಾಡುತ್ತೇವೆ. ಇದು ಅಭಿಮಾನಿಗಳ ಪಾಲಿಗೆ ಹೊಸ ಅನುಭವ ನೀಡಲಿದೆ ಎಂದಿದ್ದಾರೆ.
Mangalore Samuel Jayaraj, Coach Of Indian Cricketer KL Rahul star of Cadbury Dairy Milk chocolate. The Cadbury thank you coach advertisement has been aired all over the world. The adversitiement on Cadbury yotube channel has been viewed by 3 million people. Jayaraj, who started cricket training in Mangalore, is trying to attract future cricket stars. Amrita Vidyalaya started a four-day free training where both boys and girls can join. They will train people aged 7 to 16 years and teach them cricket tips for free for four days. For this purpose, arrangements have been made for net training at Vidyalaya Stadium.
22-09-25 03:31 pm
HK News Desk
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
ಪಂಚಮಸಾಲಿ ಲಿಂಗಾಯತರಲ್ಲಿ ಮತ್ತೆ ಒಡಕು ; ಲಿಂಗಾಯತ ಪೀ...
21-09-25 10:23 pm
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
22-09-25 10:50 am
HK News Desk
ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಗೆ ದಾದಾ ಸಾಹೇಬ್...
20-09-25 11:03 pm
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
22-09-25 04:09 pm
Mangalore Correspondent
ದೋಷಯುಕ್ತ ಇಲೆಕ್ಟ್ರಿಕ್ ವಾಹನ ; ಓಲಾ ಕಂಪನಿ ವಿರುದ್...
22-09-25 01:51 pm
ಸೆ.22ರಿಂದ ಮಂಗಳೂರು ದಸರಾ ವೈಭವ ; ಸಾಂಸ್ಕೃತಿಕ ಕಲಾವ...
20-09-25 10:39 pm
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm