ಬ್ರೇಕಿಂಗ್ ನ್ಯೂಸ್
04-04-24 10:48 pm Mangalore Correspondent ಕರಾವಳಿ
ಮಂಗಳೂರು, ಎ.4: ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಮೂಡಾ ಆಯುಕ್ತ ಮನ್ಸೂರ್ ಆಲಿ ಬಂಧನಕ್ಕೆ ಕಾರಣವಾಗಿದ್ದ ಮಂಗಳೂರಿನ ರಿಯಲ್ ಎಸ್ಟೇಟ್ ಬಿಲ್ಡರ್ ಗಿರಿಧರ್ ಶೆಟ್ಟಿ ಮತ್ತು ಮಹಾನಗರ ಪಾಲಿಕೆಯ ನಡುವಿನ 10.8 ಎಕರೆ ಜಮೀನಿನ ಡೀಲಿಂಗ್ ವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಅದರಲ್ಲಿ ಭಾರೀ ಅವ್ಯವಹಾರ ಆಗಿದೆಯೆಂದು ತನಿಖೆಗೆ ಒತ್ತಾಯಿಸಿ ಡಿವೈಎಫ್ಐ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಮಾ.23ರಂದು ಬಿಲ್ಡರ್ ಗಿರಿಧರ್ ಶೆಟ್ಟಿ ದೂರಿನ ಆಧಾರದಲ್ಲಿ ಮೂಡಾ ಕಮಿಷನರ್ ಮನ್ಸೂರ್ ಆಲಿ ಅವರನ್ನು 25 ಲಕ್ಷ ಕೇಳಿದ್ದಾರೆಂಬ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಇದಕ್ಕೆ ಕಾರಣವಾಗಿದ್ದು ಕುಡುಪು ಗ್ರಾಮದ ಸರ್ವೆ ನಂಬರ್ 57-ಪಿರಲ್ಲಿನ 10.8 ಎಕರೆ ಜಮೀನು ವ್ಯವಹಾರ. ಈ ಜಮೀನನ್ನು ಬಿಲ್ಡರ್ ಗಿರಿಧರ್ ಶೆಟ್ಟಿ ಖಾಸಗಿಯವರಿಂದ ಖರೀದಿಸಿ ಮಹಾನಗರ ಪಾಲಿಕೆಗೆ ಮಾರಾಟ ಮಾಡಿದ್ದರು. ಮಾರಾಟದ ಸಂದರ್ಭದಲ್ಲಿ ಟಿಡಿಆರ್ ಮೌಲ್ಯದ ಪ್ರಕಾರ ಜಮೀನು ದರ ವಿಧಿಸುವ ಬಗ್ಗೆ ಮಾತುಕತೆ ಆಗಿತ್ತು. ಇದಕ್ಕಾಗಿ ಮೂಡಾದಿಂದ ಟಿಡಿಆರ್ ಸರ್ಟಿಫಿಕೇಟ್ ನೀಡಬೇಕಿದ್ದು ಬಿಲ್ಡರ್ ಒತ್ತಾಯ ಮಾಡಿದ್ದಕ್ಕೆ ಆಯುಕ್ತ ಮನ್ಸೂರ್ ಆಲಿ 25 ಲಕ್ಷ ಲಂಚ ಕೇಳಿದ್ದರು. ಅಲ್ಲದೆ, ಟಿಡಿಆರ್ ನೀಡುವಿಕೆಯಲ್ಲಿ ನಿಯಮಗಳ ಉಲ್ಲಂಘನೆ ಆಗಿರುವುದರಿಂದ ಆಯುಕ್ತ ಮನ್ಸೂರ್ ಆಲಿ ಆ ಫೈಲನ್ನು ಸರಕಾರಕ್ಕೆ ಹಿಂತಿರುಗಿಸಲು ಬಯಸಿದ್ದರು ಎನ್ನಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಿಂದ ಭೂಸ್ವಾಧೀನ ಪಡಿಸಿ, ಆ ಭೂಮಿಯ ಹಣದ ಮೌಲ್ಯದ ಬದಲಾಗಿ ಭೂಮಾಲಿಕರಿಗೆ ಟಿಡಿಆರ್ ಸರ್ಟಿಫಿಕೇಟ್ ಕೊಡಲು ಮಾಡಿಕೊಂಡ ಒಪ್ಪಂದ ಟಿಡಿಆರ್ ನಿಯಮಾವಳಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ. ಸದರಿ ಬಿಲ್ಡರ್ ಗಿರಿಧರ್ ಶೆಟ್ಟಿ ಜಮೀನಿನ ಮೂಲ ಮಾಲೀಕರಿಂದ ಭೂ ವ್ಯವಹಾರದ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು ಟಿಡಿಆರ್ ತನ್ನ ಪರವಾಗಿ ನೀಡಬೇಕು ಎಂದು ಬೇಡಿಕೆ ಇಟ್ಟಿರುವುದು ನಿಯಮಕ್ಕೆ ವಿರುದ್ಧ. ಟಿಡಿಆರ್ ನಿಯಮದಲ್ಲಿ ಮೂಲ ಮಾಲಕನ ಬದಲಿಗೆ ಮಧ್ಯವರ್ತಿ, ಜಮೀನಿನ ಎಗ್ರಿಮೆಂಟ್ ಹೋಲ್ಡರ್‌ನೊಂದಿಗೆ ವ್ಯವಹಾರ ಕುದುರಿಸಲು ಅವಕಾಶ ಇರುವುದಿಲ್ಲ.
ಗಿರಿಧರ್ ಶೆಟ್ಟಿ ಮೂಲ ಮಾಲೀಕರೊಂದಿಗೆ 7 ಕೋಟಿ ರೂ. ಮೌಲ್ಯಕ್ಕೆ ಜಮೀನು ಖರೀದಿಸುವ ಕುರಿತು ಮಾತುಕತೆ ನಡೆಸಿ 1 ಕೋಟಿ ರೂಪಾಯಿ ಮುಂಗಡ ನೀಡಿ ಎಗ್ರಿಮೆಂಟ್ ಮಾಡಿದ್ದಾರೆ. ಈಗ ಮಂಗಳೂರು ನಗರ ಪಾಲಿಕೆ ಗಿರಿಧರ್ ಶೆಟ್ಟಿಗೆ ನೀಡಲು ಒಪ್ಪಿಕೊಂಡಿರುವ ಟಿಡಿಆರ್ ಮಾರುಕಟ್ಟೆ ಮೌಲ್ಯ ಸುಮಾರು 50 ಕೋಟಿ ಎನ್ನಲಾಗಿದೆ. ಇವರಿಗೆ ಪ್ರಭಾವಿ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಒಡನಾಟ ಇದ್ದು ವ್ಯವಹಾರದಲ್ಲಿ ಪಾಲುದಾರಿಕೆ ಹೊಂದಿರುವ ಶಂಕೆಯಿದೆ. ಹೀಗಾಗಿ ಸದರಿ ವಹಿವಾಟನ್ನು ಸರಕಾರದ ಮಟ್ಟದಲ್ಲಿ ತಡೆಹಿಡಿದು ಆಗಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆಗೆ ಆದೇಶ ಮಾಡಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಮಂಗಳೂರಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
Mangalore Dyfi demands probe over arrest of Muda officer Mansoor Ali. The Karnataka Lokayukta on Saturday arrested Mangaluru Urban Development Authority (MUDA) commissioner Mansoor Ali and broker Mohammad Salim for allegedly taking a bribe of Rs 25 lakh for issuing a transferable development rights (TDR) certificate to a city resident.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm