ಬ್ರೇಕಿಂಗ್ ನ್ಯೂಸ್
05-04-24 07:01 pm Mangalore Correspondent ಕರಾವಳಿ
ಮಂಗಳೂರು, ಎ.5: ಸೌಜನ್ಯಾ ಪರ ಹೋರಾಟಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲ ನೀಡದೇ ಇರುವುದರಿಂದ ಹೋರಾಟಗಾರರು ನೋಟಾ ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ಗಿರೀಶ್ ಮಟ್ಟೆಣ್ಣನವರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನೋಟಾ ಅಭಿಯಾನ ಯಾಕೆ ಮಾಡಬೇಕು, ಅದರಿಂದ ಯಾವ ಸಾಧನೆ ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, ವ್ಯವಸ್ಥೆಯ ವಿರುದ್ಧ ಆಕ್ರೋಶ ಉಂಟಾದಾಗ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಅಸಮ್ಮತಿ ಇದ್ದಾಗ, ರಾಜಕೀಯ ವ್ಯವಸ್ಥೆಯ ಶುದ್ಧೀಕರಣಕ್ಕಾಗಿ ನೋಟಾ ಇರುವುದು. ಇವಿಎಂ ಮೆಷಿನಲ್ಲಿ ಇರುವ ಅಭ್ಯರ್ಥಿಗಳ ಪೈಕಿ ಯಾರಿಗೂ ನನ್ನ ಮತ ಇಲ್ಲವೆಂದು ದಾಖಲೀಕರಣ ಮಾಡುವುದು ನೋಟಾ ಆಗಿರುತ್ತದೆ.
ಅತಿ ಹೆಚ್ಚು ನೋಟಾ ದಾಖಲಾಗುವುದರಿಂದ ವಿಷಯಾಧಾರಿತವಾಗಿ ಇಡೀ ದೇಶದ ಗಮನಸೆಳೆಯಲು ಸಾಧ್ಯವಿದೆ. ನ್ಯಾಯಾಂಗ, ಕಾರ್ಯಾಂಗದ ಗಮನ ಸೆಳೆಯುವುದಕ್ಕಾಗಿ ಅಭಿಯಾನ ಮಾಡುತ್ತೇವೆ. ಬಿಹಾರದ ಲೋಕಸಭೆ ಕ್ಷೇತ್ರ ಒಂದರಲ್ಲಿ 51 ಸಾವಿರ ನೋಟಾ ಮತ ಬಿದ್ದಿರುವುದು ಇಡೀ ದೇಶದ ಗಮನ ಸೆಳೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಚಾರ್ವಾಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇದೇ ರೀತಿ ಗೆದ್ದ ಅಭ್ಯರ್ಥಿಗಿಂತ ಎರಡನೇ ಅತಿ ಹೆಚ್ಚು ನೋಟಾ ಬಿದ್ದಿರುವುದು ದಾಖಲಾಗಿತ್ತು. ರಸ್ತೆಯ ವಿಚಾರದಲ್ಲಿ ಜನರ ಪ್ರತಿಭಟನೆ ಇರುವುದನ್ನು ತಿಳಿದು ಚುನಾವಣೆಯಾದ ಬೆನ್ನಲ್ಲೇ ಅಲ್ಲಿ ರಸ್ತೆ ನಿರ್ಮಾಣ ಆಗಿತ್ತು.
ಇಡೀ ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನೋಟಾ ಅಭಿಯಾನ ಮಾಡುತ್ತಿದ್ದೇವೆ. ಈ ಬಾರಿ ಹೆಣ್ಮಕ್ಕಳ ಪರವಾಗಿ ಧ್ವನಿ ಎತ್ತುವುದಕ್ಕಾಗಿ ನೋಟಾಕ್ಕೆ ಮತ ಹಾಕಬೇಕೆಂದು ಜನರಲ್ಲಿ ಕೇಳಿಕೊಳ್ಳುತ್ತೇವೆ. ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶದಲ್ಲಿ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಅನ್ನುವುದೂ ನಮ್ಮ ಕಳಕಳಿ. ನೋಟಾಗೆ ಅತಿ ಹೆಚ್ಚು ಮತಗಳು ಬಂದರೆ ನ್ಯಾಯಾಂಗದ ಗಮನಕ್ಕೆ ಬಂದು ಸೌಜನ್ಯಾ ಪ್ರಕರಣದ ಬಗ್ಗೆ ನಿರ್ಧಾರಕ್ಕೆ ಬರಬಹುದೆಂಬ ವಿಶ್ವಾಸವಿದೆ. ಸೌಜನ್ಯಾ ಮಾತ್ರವಲ್ಲ, ಈ ಭಾಗದಲ್ಲಿ ವೇದವಲ್ಲಿ, ಪ್ರೇಮಲತಾ ಹೀಗೆ ಹಲವಾರು ಅತ್ಯಾಚಾರ, ಕೊಲೆ ಪ್ರಕರಣವಾಗಿದ್ದು, ಹೀಗಾಗಿ ಕರಾವಳಿ ಜೆಲ್ಲೆಗಳಲ್ಲಿ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸುಳ್ಯದಲ್ಲಿ ಎ.24ರಂದು ಬೃಹತ್ ಜನಜಾಗೃತಿ ಸಮಾವೇಶವನ್ನೂ ಮಾಡುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಪ್ರಸನ್ನ ರವಿ, ತಮ್ಮಣ್ಣ ಶೆಟ್ಟಿ ಉಪಸ್ಥಿತರಿದ್ದರು.
NOTA Movement for Saujanya; Awareness campaign to make the country aware of cases of sexual violence; Girish Mattennavar.
22-09-25 03:31 pm
HK News Desk
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
ಪಂಚಮಸಾಲಿ ಲಿಂಗಾಯತರಲ್ಲಿ ಮತ್ತೆ ಒಡಕು ; ಲಿಂಗಾಯತ ಪೀ...
21-09-25 10:23 pm
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
22-09-25 10:50 am
HK News Desk
ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಗೆ ದಾದಾ ಸಾಹೇಬ್...
20-09-25 11:03 pm
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
22-09-25 01:51 pm
Mangalore Correspondent
ಸೆ.22ರಿಂದ ಮಂಗಳೂರು ದಸರಾ ವೈಭವ ; ಸಾಂಸ್ಕೃತಿಕ ಕಲಾವ...
20-09-25 10:39 pm
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm