ಬ್ರೇಕಿಂಗ್ ನ್ಯೂಸ್
10-04-24 10:11 pm Mangalore Correspondent ಕರಾವಳಿ
ಮಂಗಳೂರು, ಎ.10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವೇರುತ್ತಿದ್ದು, ಬಿಜೆಪಿ- ಕಾಂಗ್ರೆಸ್ ನೇರ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಈ ಬಾರಿ ನಾಮಪತ್ರ ಪರಿಶೀಲನೆಯ ಬಳಿಕ ಒಟ್ಟು ಒಂಬತ್ತು ಮಂದಿ ಕಣದಲ್ಲಿದ್ದಾರೆ. ಅದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಪ್ರೀತ್ ಕುಮಾರ್ ಪೂಜಾರಿ ಒಬ್ಬರು.
ಅಸೆಂಬ್ಲಿ ಅಥವಾ ಲೋಕಸಭೆಯ ಪ್ರತಿ ಚುನಾವಣೆಗಳಲ್ಲೂ ಸ್ಪರ್ಧಾ ಕಣಕ್ಕಿಳಿಯುವುದನ್ನೇ ರೂಢಿ ಮಾಡಿಕೊಂಡಿರುವ ಸುಪ್ರೀತ್ ಪೂಜಾರಿ ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಎರಡು ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಪಕ್ಷೇತರ ಸ್ಪರ್ಧೆ, ಉಡುಪಿ ಕ್ಷೇತ್ರದಲ್ಲಿ ಜನಹಿತ ಪಾರ್ಟಿ ಹೆಸರಲ್ಲಿ ಕಣಕ್ಕಿಳಿದಿದ್ದಾರೆ.
ಪ್ರತಿ ಬಾರಿ ಜೆಡಿಯು ಪಕ್ಷದಿಂದ ಸ್ಪರ್ಧಿಸುತ್ತಿದ್ದ ಅವರಿಗೆ ಈ ಬಾರಿ ಆ ಪಕ್ಷದಿಂದ ಟಿಕೆಟ್ ಸಿಕ್ಕಿಲ್ಲ. ಬಿಹಾರದಲ್ಲಿ ಅಧಿಕಾರದಲ್ಲಿರುವ ಜೆಡಿಯು ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟದಲ್ಲಿದೆ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಲು ಅವಕಾಶ ಇಲ್ವಂತೆ. ಹೀಗಾಗಿ ಸುಪ್ರೀತ್ ಪೂಜಾರಿ ಮಂಗಳೂರಿನಲ್ಲಿ ಪಕ್ಷೇತರ, ಉಡುಪಿಯಲ್ಲಿ ಜನಹಿತ ಪಾರ್ಟಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಮಂಗಳೂರಿನ ಕಾವೂರು ನಿವಾಸಿಯಾಗಿರುವ ಸುಪ್ರೀತ್ ತನ್ನದೇ ಆದ ಏಡ್ ಏಜನ್ಸಿಯನ್ನು ಇಟ್ಟುಕೊಂಡಿದ್ದು, ಪ್ರತಿ ಚುನಾವಣೆಯಲ್ಲಿ ಠೇವಣಿ ದುಡ್ಡನ್ನು ತಾನೇ ಕಟ್ಟಿ ಸ್ಪರ್ಧಿಸಿ ಸುದ್ದಿಯಾಗುತ್ತಿದ್ದಾರೆ. ಚುನಾವಣೆ ಸ್ಪರ್ಧೆ ಅನ್ನೋದು ಅವರಿಗೆ ಹವ್ಯಾಸ ಆಗಿಬಿಟ್ಟಿದೆ.
ಉದ್ಯೋಗಕ್ಕಾಗಿ ನನ್ನ ಹೋರಾಟ
ಈ ಬಗ್ಗೆ ಅವರಲ್ಲಿ ಯಾಕಾಗಿ ಸ್ಪರ್ಧೆ ಎಂದು ಕೇಳಿದಾಗ, 2008ರಿಂದ ಚುನಾವಣೆ ಸ್ಪರ್ಧೆಯಲ್ಲಿ ತೊಡಗಿದ್ದೇನೆ. ಪ್ರತಿ ಬಾರಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಇದೆ. ಬಿಜೆಪಿ, ಕಾಂಗ್ರೆಸಿನಲ್ಲಿ ಸ್ಪರ್ಧಿಸಲು ಅವಕಾಶ ಸಿಗಲ್ಲ. ಅಲ್ಲಿ ಹಣ ಇಲ್ಲದವರು, ಸಾಮಾನ್ಯರು ಕೇವಲ ಕಾರ್ಯಕರ್ತ ಅಷ್ಟೇ ಆಗಿರಬೇಕು. ಜೆಡಿಯು ಪಕ್ಷದಿಂದ ನಾನು ಸ್ಪರ್ಧೆ ಮಾಡುತ್ತಿದ್ದೆ. ಈ ಬಾರಿ ಪಕ್ಷೇತರ ಸ್ಪರ್ಧಿಸುತ್ತಿದ್ದೇನೆ. ಮಂಗಳೂರಿನಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಅಲ್ಲಿಂದ ಪದವಿ ಪಡೆದು ಬರುವವರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ನೀಡುವ ಫ್ಯಾಕ್ಟರಿಯಾಗಲೀ, ಕಂಪನಿಯಾಗಲೀ ಇಲ್ಲಿಗೆ ಬರುತ್ತಿಲ್ಲ. ಜನಪ್ರತಿನಿಧಿಯಾದವರು ಉದ್ಯೋಗದ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ. ಈ ಹೋರಾಟ ಮುಂದಿಟ್ಟು ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ಯಾವಾಗ ಆದ್ರೂ ಒಮ್ಮೆಗೆ ನಾನು ಗೆಲ್ಲುವ ಅವಕಾಶ ಬರಬಹುದು ಎಂದು ಹೇಳುತ್ತಾರೆ.
Supreeth Kumar Poojary files nomination at both Mangalore and Udupi as independent candidate for the coming loksabha elections 2024.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm