Shivaram Hebbar son, Congress; ಬಿಜೆಪಿಯವರು ನಮ್ಮವರನ್ನು ನಡೆಸಿಕೊಂಡ ರೀತಿಗೆ ಬೇಸರವಾಗಿದೆ, ಕಾಂಗ್ರೆಸ್ ಮತ್ತೆ ಗಟ್ಟಿಗೊಳಿಸುತ್ತೇವೆ ; ಕೈ ಪಕ್ಷ ಸೇರಿದ ಶಾಸಕ ಶಿವರಾಮ ಹೆಬ್ಬಾರ್ ಪುತ್ರ 

11-04-24 09:44 pm       HK NEWS   ಕರಾವಳಿ

ಬಿಜೆಪಿಯವರು ನಮ್ಮ ಬೆಂಬಲಿಗರು, ಕಾರ್ಯಕರ್ತರನ್ನ ನಡೆಸಿಕೊಂಡ ರೀತಿಗೆ ಬೇಸರವಾಗಿದೆ. ಇದೇ ಬೇಸರದಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಹೇಳಿದ್ದಾರೆ.‌

Photo credits : Vijay Karnataka

ಕಾರವಾರ, ಎ.11: ಬಿಜೆಪಿಯವರು ನಮ್ಮ ಬೆಂಬಲಿಗರು, ಕಾರ್ಯಕರ್ತರನ್ನ ನಡೆಸಿಕೊಂಡ ರೀತಿಗೆ ಬೇಸರವಾಗಿದೆ. ಇದೇ ಬೇಸರದಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಹೇಳಿದ್ದಾರೆ.‌

ಬನವಾಸಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ವಿವೇಕ್ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ. ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಅದಕ್ಕೂ ಮೊದಲೇ ಪುತ್ರ ವಿವೇಕ ಹೆಬ್ಬಾರ್ ಕೈ ಪಕ್ಷ ಸೇರಿದ್ದಾರೆ.‌ ಬನವಾಸಿಯ ಟಿಎಂಎಸ್ ಎದುರಿನ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವೇಕ್ ಹೆಬ್ಬಾರ್ ಪಕ್ಷ ಸೇರ್ಪಡೆಯಾಗಿದ್ದಾರೆ.‌

ನಾವು ಮೂಲತಃ ಕಾಂಗ್ರೆಸ್ ಕುಟುಂಬದವರು. ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಜೀವನ ಸಾಗಿಸುತ್ತಿದ್ದವರಾದ್ದರಿಂದ ನಮ್ಮ ಮನೆಗೆ ವಾಪಸ್ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನ ಸದೃಢಗೊಳಿಸುತ್ತೇವೆ. ಲೋಕಸಭಾ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ರನ್ನ ಅತೀ ಹೆಚ್ಚು ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ವಿವೇಕ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ. 

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಐವಾನ್ ಡಿಸೋಜ ಸೇರಿದಂತೆ ಜಿಲ್ಲೆಯ ನಾಯಕರು ಇದ್ದರು.‌

BJP MLA Arabail Shivaram Hebbar's son Vivek Hebbar on Thursday joined the Congress party along with his supporters at Banavasi in Uttara Kannada district. After quitting the BJP, Vivek Hebbar joined the party in the presence of state Congress Vice President and former MLC Ivan D'Souza and other local party leaders.