Kundapur resort; ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ ಬಾಲಕ ಸಾವು, ಕುಂದಾಪುರದ ಖಾಸಗಿ ರೆಸಾರ್ಟ್ ನಲ್ಲಿ ಘಟನೆ 

12-04-24 04:21 pm       HK NEWS   ಕರಾವಳಿ

ಖಾಸಗಿ ರೆಸಾರ್ಟ್ ಒಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕನೊಬ್ಬ ಸಾವನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಎಂಬಲ್ಲಿ ನಡೆದಿದೆ. ಹೂಡೆ ಮೂಲದ ಮುಹಮ್ಮದ್ ಅರೀಝ್ (10) ಮೃತ ಬಾಲಕ. 

ಕುಂದಾಪುರ, ಎ.12: ಖಾಸಗಿ ರೆಸಾರ್ಟ್ ಒಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕನೊಬ್ಬ ಸಾವನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಎಂಬಲ್ಲಿ ನಡೆದಿದೆ. ಹೂಡೆ ಮೂಲದ ಮುಹಮ್ಮದ್ ಅರೀಝ್ (10) ಮೃತ ಬಾಲಕ. 

ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಅರೀಝ್ ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಕುಟುಂಬದ ಜೊತೆಗೆ ಹೆಂಗವಳ್ಳಿಯ ಖಾಸಗಿ ರೆಸಾರ್ಟ್ ಗೆ ತೆರಳಿದ್ದ. ಈ ವೇಳೆ ರೆಸಾರ್ಟಿನ ಸ್ವಿಮಿಂಗ್ ಪೂಲ್ ನ ನೀರಿಗೆ ಮುಹಮ್ಮದ್ ಅರೀಝ್ ಬಿದ್ದಿದ್ದಾನೆ. ತೀವ್ರ ಅಸ್ವಸ್ಥಗೊಂಡಿದ್ದ ಮುಹಮ್ಮದ್‌ನನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುಹಮ್ಮದ್‌ ಕೊನೆಯುಸಿರೆಳೆದಿದ್ದಾನೆ. ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.

A fourth-grade student who had gone to play in a private swimming pool to celebrate the Eid festival drowned in the pool. The deceased has been identified as Mohammed Azeez (10). He had gone to a private resort at Hengavalli with his family members on Thursday to celebrate the Eid festival. Azeez was critically ill after he drowned in the swimming pool and later died.