Mangalore Nirmala Travels Owner death: ನಿರ್ಮಲಾ ಟ್ರಾವೆಲ್ಸ್ ಸಂಸ್ಥಾಪಕಿ ನಿರ್ಮಲಾ ಕಾಮತ್ ನಿಧನ, 50 ವರ್ಷಗಳಲ್ಲಿ ದೇಶದ ಮುಂಚೂಣಿ ಸಂಸ್ಥೆಯಾಗಿಸಿದ್ದ ಮಹಿಳಾ ಸಾಧಕಿ

15-04-24 10:43 pm       Mangalore Correspondent   ಕರಾವಳಿ

ಪ್ರವಾಸಿ ತಾಣಗಳ ಟೂರಿಸ್ಟ್ ಕಾರಣಕ್ಕೆ ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ನಿರ್ಮಲಾ ಟ್ರಾವೆಲ್ಸ್ ಸಂಸ್ಥೆಯ ಸಂಸ್ಥಾಪಕಿ ನಿರ್ಮಲಾ ಕಾಮತ್ (65) ಅಲ್ಪಕಾಲದ ಅಸೌಖ್ಯದ ಬಳಿಕ ನಿಧನ ಹೊಂದಿದ್ದಾರೆ.

ಮಂಗಳೂರು, ಎ.15: ಪ್ರವಾಸಿ ತಾಣಗಳ ಟೂರಿಸ್ಟ್ ಕಾರಣಕ್ಕೆ ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ನಿರ್ಮಲಾ ಟ್ರಾವೆಲ್ಸ್ ಸಂಸ್ಥೆಯ ಸಂಸ್ಥಾಪಕಿ ನಿರ್ಮಲಾ ಕಾಮತ್ (65) ಅಲ್ಪಕಾಲದ ಅಸೌಖ್ಯದ ಬಳಿಕ ನಿಧನ ಹೊಂದಿದ್ದಾರೆ.

1971ರಲ್ಲಿ ಚೋಲ್ಪಾಡಿ ಉಪೇಂದ್ರ ಕಾಮತ್ ಮತ್ತು ಅವರ ಪತ್ನಿ ನಿರ್ಮಲಾ ಕಾಮತ್ ಅವರು ಟೂರಿಸ್ಟ್ ಸೇವೆಗೆಂದೇ ನಿರ್ಮಲಾ ಟ್ರಾವೆಲ್ಸ್ ಉದ್ಯಮವನ್ನು ಸ್ಥಾಪಿಸಿದ್ದರು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ಈ ಉದ್ಯಮ ದೇಶ- ವಿದೇಶದಲ್ಲಿ ಸೇವೆ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಲ್ಲದೆ, ಪ್ರವಾಸೋದ್ಯಮದಲ್ಲಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಮಾನ್ಯತೆ ಪಡೆದಿದೆ. 20ಕ್ಕೂ ಹೆಚ್ಚು ಲಕ್ಸುರಿ ಬಸ್ ಗಳನ್ನು ಹೊಂದಿದ್ದಲ್ಲದೆ, ದೇಶಾದ್ಯಂತ ಪ್ರವಾಸಿ ತಾಣಗಳಿಗೆ ರೈಲು, ವಿಮಾನದಲ್ಲಿ ತಮ್ಮದೇ ಏಜಂಟರನ್ನು ಇಟ್ಟುಕೊಂಡು ಪ್ರವಾಸ ಏರ್ಪಡಿಸುವುದರಲ್ಲಿ ನಿರ್ಮಲಾ ಟ್ರಾವೆಲ್ಸ್ ಪ್ರಸಿದ್ಧಿ ಪಡೆದಿದೆ.

ನಿರ್ಮಲಾ ಕಾಮತ್ ಅವರ ಮಗಳು ವಾಟಿಕಾ ಕಾಮತ್ ವಾಟಿಕಾ ಟ್ರಾವೆಲ್ಸ್ ಹೆಸರಲ್ಲಿ ಮತ್ತೊಂದು ಟೂರಿಸ್ಟ್ ಉದ್ಯಮ ನಡೆಸುತ್ತಿದ್ದಾರೆ. ಸದ್ಯಕ್ಕೆ ದೇಶಾದ್ಯಂತ ನಿರ್ಮಲಾ ಸಂಸ್ಥೆಯ ಬುಕ್ಕಿಂಗ್ ಸೆಂಟರ್ ಗಳಿದ್ದು, ದೇಶದ ವಿಖ್ಯಾತ ಟೂರಿಸ್ಟ್ ಸಂಸ್ಥೆಗಳಲ್ಲಿ ಒಂದಾಗಿ ನಿರ್ಮಲಾ ಟ್ರಾವೆಲ್ಸ್ ಬೆಳೆದಿದೆ.

Mangalore Nirmala Travels owner Nirmala Kamath dies at 65. Nirmala Travels was founded in 1971 by the travel enthusiast couple, Mr. Cholpady Upendra Kamath and Mrs. C. Nirmala Kamath. Nirmala Kamath, the founder of Nirmala Travels, passed away on April 15 at her residence in Kottara in the city. She was 65. She is survived by her husband C. Upendra Kamath, daughter Vatika Pai and their extended family.