Mangalore Dental doctor Swathi Shetty, death: ಬಿಡಿಎಸ್ ಓದಿದ್ದ ಉಳ್ಳಾಲದ ಯುವತಿ ಪಾಂಡೇಶ್ವರ ಪಿಜಿಯಲ್ಲಿ ಸಾವು ; ವೈದ್ಯೆಯಾಗಿ ಇಂದೇ ಕೆಲಸಕ್ಕೆ ಸೇರಬೇಕಿದ್ದ ಯುವತಿಗೆ ಆಗಿದ್ದೇನು ?! 

16-04-24 07:15 pm       Mangalore Correspondent   ಕರಾವಳಿ

ಉಳ್ಳಾಲ ತಾಲೂಕಿನ ನರಿಂಗಾನ‌ ನಿವಾಸಿ, ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಶೆಟ್ಟಿ (24) ಮಂಗಳವಾರ ಬೆಳಗ್ಗೆ ಪಾಂಡೇಶ್ವರದ ಪಿಜಿಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. 

ಮಂಗಳೂರು, ಎ.16: ಉಳ್ಳಾಲ ತಾಲೂಕಿನ ನರಿಂಗಾನ‌ ನಿವಾಸಿ, ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಶೆಟ್ಟಿ (24) ಮಂಗಳವಾರ ಬೆಳಗ್ಗೆ ಪಾಂಡೇಶ್ವರದ ಪಿಜಿಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. 

ಎ.ಜೆ. ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿ ಪೂರೈಸಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಎ.16ರ ಮಂಗಳವಾರದಿಂದಲೇ ಕೆಲಸಕ್ಕೆ ಹಾಜರಾಗಬೇಕಿತ್ತು. ನಿನ್ನೆಯಷ್ಟೇ ತಾಯಿ ಜೊತೆಗೆ ಪಾಂಡೇಶ್ವರ ಕ್ಲಿನಿಕ್ ಗೆ ಬಂದು ಕೆಲಸದ ಬಗ್ಗೆ ಮಾತನಾಡಿ, ಅಲ್ಲಿನ ಪಿಜಿಯಲ್ಲಿ ಉಳಿದುಕೊಂಡಿದ್ದರು. ಪಾಂಡೇಶ್ವರ ಪೊಲೀಸ್ ಠಾಣೆ ಹಿಂಭಾಗದ ಪಿಜಿಯಲ್ಲಿ ಸೋಮವಾರ ಸಂಜೆಯಿಂದ ಉಳಿದಿದ್ದರು. ರಾತ್ರಿ ತಾಯಿ ಜತೆಗೆ ಮೊಬೈಲ್ ನಲ್ಲಿ ಮಾತನಾಡಿದ್ದ ಯುವತಿ, ವಿಪರೀತ ತಲೆನೋವು ಎಂದು ಹೇಳಿದ್ದರು. ಬಳಿಕ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದರು. 

ಮಲಗಿದ್ದ ಸ್ವಾತಿಯ ದೇಹ ಬೆಳಗ್ಗೆ ತಣ್ಣಗಾಗಿದ್ದನ್ನು ಕಂಡು ಇತರರು ಪಿಜಿಯ ಸೂಪರ್ ವೈಸರ್ ಗಮನಕ್ಕೆ ತಂದಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್ ಲಾಕ್ ಗೆ ದಾಖಲಿಸಿದ್ದು ಅಲ್ಲಿ ಕೊನೆಯುಸಿರೆಳೆದಿದ್ದಾಗಿ ವೈದ್ಯರು ತಿಳಿಸಿದ್ದರು. ಸ್ವಾತಿ ಶೆಟ್ಟಿಗೆ ಕೆಲಸ ಸಿಕ್ಕ ಕೂಡಲೇ ಪೋಷಕರು ಮದುವೆ ಮಾಡಲು ತಯಾರಿ ನಡೆಸಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸರಲ್ಲಿ ಕೇಳಿದಾಗ, ಬಾಯಲ್ಲಿ ನೊರೆ ಬಂದಿತ್ತು ಎಂದು ಜೊತೆಗಿದ್ದವರು ತಿಳಿಸಿದ್ದರು. ಏನೋ ಫಿಟ್ಸ್ ಕಾಯಿಲೆ ಇದ್ದಿರುವ ಬಗ್ಗೆ ಮನೆಯವರು ಹೇಳಿದ್ದಾರೆ. ಘಟನೆ ಬಗ್ಗೆ ಮನೆಮಂದಿ ಸಂಶಯ ವ್ಯಕ್ತಪಡಿಸಿಲ್ಲ. ಸಹಜ ಸಾವು ಆಗಿರಬಹುದೆಂದು ತನಿಖೆಗಾಗಿ ದೂರು ಕೊಟ್ಟಿಲ್ಲ ಎಂದಿದ್ದಾರೆ. 

ಸಾವು ಹೇಗಾಯ್ತು ಎನ್ನುವುದರ ಬಗ್ಗೆ ಪೊಲೀಸರಿಗೂ ಮಾಹಿತಿ ಇಲ್ಲ. ಹೃದಯಾಘಾತದಿಂದ ಸಾವು ಆಗಿದ್ದರೆ ವೈದ್ಯರಿಗೆ ಆರಂಭದಲ್ಲಿಯೇ ತಿಳಿಯುತ್ತದೆ. ಮಲಗಿದ್ದಲ್ಲಿಯೇ ಸಾವು ಕಂಡಿದ್ದರು ಎನ್ನುವುದಷ್ಟೇ ಮಾಹಿತಿಯಾಗಿದ್ದು ಸಣ್ಣ ವಯಸ್ಸಿನ ಆರೋಗ್ಯವಂತ ಯುವತಿ ಸಾವನ್ನಪ್ಪಿದ್ದು ಹೇಗೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.

Mangalore 24 year old Dental doctor Swathi Shetty dies of sudden death at PG in Pandeshwar. She was rushed to the hospital but breathed her last on the way. It is said she had got job to work from today at a private clinic near 4m mall.