NMPT, Mangalore Port, Cruise: ಐಷಾರಾಮಿ ಹಡಗಿನಲ್ಲಿ ಅಧಿಕಾರಿಗಳಿಂದ ಮತದಾನ ಜಾಗೃತಿ ; ಜನಪ್ರತಿನಿಧಿಗಳ ಆಯ್ಕೆ ಹಕ್ಕನ್ನು ಚಲಾಯಿಸಲು ಕರೆ 

18-04-24 08:33 pm       Mangalore Correspondent   ಕರಾವಳಿ

ಪಣಂಬೂರು ಬಂದರಿಗೆ ಎಂ.ಎಸ್. ಸೆವೆನ್ಸ್ ನ್ಯಾವಿಗೇಟರ್ ಐಷಾರಾಮಿ ಪ್ರವಾಸಿಗರ ಹಡಗು ಆಗಮಿಸಿದೆ. ಹಡಗಿನ ಪ್ರವಾಸಿಗರಿಗಾಗಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ದ.ಕ. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಆಯೋಜಿಸಲಾಯಿತು.

ಮಂಗಳೂರು, ಏ.18: ಪಣಂಬೂರು ಬಂದರಿಗೆ ಎಂ.ಎಸ್. ಸೆವೆನ್ಸ್ ನ್ಯಾವಿಗೇಟರ್ ಐಷಾರಾಮಿ ಪ್ರವಾಸಿಗರ ಹಡಗು ಆಗಮಿಸಿದೆ. ಹಡಗಿನ ಪ್ರವಾಸಿಗರಿಗಾಗಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ದ.ಕ. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಆಯೋಜಿಸಲಾಯಿತು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯಸ್ಥರೂ ಆಗಿರುವ ಡಾ. ಆನಂದ್ ಮಾತನಾಡಿ, ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಅರ್ಹ ಮತದಾರರೆಲ್ಲರೂ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಬೇಕೆಂದರು.

ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಆಡಳಿತ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ಮತದಾನದ 
ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ ಎಂದರು.

ಬಂದರು ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬದವರಿಗೆ ಮತದಾನದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿ ಮತದಾನದ ಪ್ರತಿಜ್ಞೆ ಭೋಧಿಸಿದರು. ಈ ಸಂದರ್ಭದಲ್ಲಿ ಬಂದರು ಮಂಡಳಿಯ ಹಿರಿಯ ಅಧಿಕಾರಿಗಳು, ಟ್ರಾಫಿಕ್ ಮ್ಯಾನೇಜರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Election awareness campaign held at NMPT as M S Seven Navigator cruise ship arrives in Mangalore.