Nalin Kateel, Brijesh Chowta, Mangalore: ಸಿದ್ದರಾಮಯ್ಯ ಸರ್ಕಾರ ಬಂದಾಗೆಲ್ಲ ರಾಜ್ಯದಲ್ಲಿ ಆತಂಕದ ಸ್ಥಿತಿ ; ದೇಶದ ಆಸ್ತಿಯನ್ನೇ ಮುಸ್ಲಿಮರಿಗೆ ಹಂಚಲು ಮುಂದಾಗಿದ್ದಾರೆ, ಕಾಂಗ್ರೆಸ್ ಕೈಗೆ ಚೊಂಬು ನೀಡಲಿದ್ದಾರೆ ; ಸಂಸದ ನಳಿನ್ ಕುಮಾರ್

22-04-24 08:33 pm       Mangalore Correspondent   ಕರಾವಳಿ

ಸಿದ್ದರಾಮಯ್ಯ ಸರಕಾರ ಬಂದಾಗೆಲ್ಲ ರಾಜ್ಯದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹಿಂದುಗಳ ಮೇಲೆ ಹಲ್ಲೆ, ಕೊಲೆ ಸರಣಿಗಳಾಗುತ್ತಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯೇ ಹದಗೆಟ್ಟಿದೆ.

ಮಂಗಳೂರು, ಎ.22: ಸಿದ್ದರಾಮಯ್ಯ ಸರಕಾರ ಬಂದಾಗೆಲ್ಲ ರಾಜ್ಯದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹಿಂದುಗಳ ಮೇಲೆ ಹಲ್ಲೆ, ಕೊಲೆ ಸರಣಿಗಳಾಗುತ್ತಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯೇ ಹದಗೆಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರಕಾರಕ್ಕೆ ಜನರೇ ಸೂಕ್ತ ಪಾಠ ಕಲಿಸಲಿದ್ದಾರೆ. ನರೇಂದ್ರ ಮೋದಿ ಈ ಜಿಲ್ಲೆಗೆ ಕೊಟ್ಟ ಕೊಡುಗೆ ಮತ್ತು ಯುವ ನಾಯಕ, ಸೇನೆಯಲ್ಲಿ ಕೆಲಸ ಮಾಡಿ ಬಂದ ಕ್ಯಾ.ಬ್ರಿಜೇಶ್ ಚೌಟ ಸಮರ್ಥ ವ್ಯಕ್ತಿಯೆಂಬುದನ್ನು ಪರಿಗಣಿಸಿ ಜಿಲ್ಲೆಯ ಜನತೆ ಆಶೀರ್ವಾದ ಮಾಡಲಿದ್ದಾರೆ. ಕಾಂಗ್ರೆಸಿಗರ ಕೈಗೆ ಜನರೇ ಚೊಂಬು ಕೊಡಲಿದ್ದಾರೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದವರನ್ನು ರಾಜ್ಯದ ಕಾಂಗ್ರೆಸ್ ಸರಕಾರ ಬಂಧನ ಮಾಡಿಲ್ಲ. ಅದರಿಂದ ಪ್ರೇರಣೆ ಪಡೆದ ಮತಾಂಧರು ರಾಜ್ಯದಲ್ಲಿ ಹಿಂಸೆ, ಕೊಲೆ ಸರಣಿಗೆ ಮುಂದಾಗಿದ್ದಾರೆ. ಹುಬ್ಬಳ್ಳಿಯ ನೇಹಾ ಹತ್ಯೆ ಬಗ್ಗೆ ಮುಖ್ಯಮಂತ್ರಿ ಹಗುರವಾಗಿ ಮಾತನಾಡುತ್ತಿರುವ ಶೈಲಿ ಹೊಸತೇನಲ್ಲ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಉಗ್ರ ಕೃತ್ಯ ಎಂದ ಅಧಿಕಾರಿಯನ್ನೇ ಡಿಕೆಶಿಯವರೇ ಗದರಿಸಿದ್ದರು. ಮತಬ್ಯಾಂಕ್ ಉದ್ದೇಶದ ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿ ನೇಹಾ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದರು.

College student hacked to death in Hubballi campus; alleged jilted lover  arrested

Congress obstructed Manmohan Singh from implementing GST: Health minister |  Mint

ಮನಮೋಹನ್ ಸಿಂಗ್ ಇದ್ದಾಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈ ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದಿದ್ದರು. ಈಗ ರಾಹುಲ್ ಗಾಂಧಿ ದೇಶದ ಆಸ್ತಿಯನ್ನು ಸಮಾನ ಹಂಚಿಕೆ ಮಾಡಬೇಕು ಎನ್ನುತ್ತಿದ್ದಾರೆ. ಹಿಂದು ಹೆಣ್ಮಕ್ಕಳ ಬಂಗಾರ, ಒಡವೆಗಳನ್ನು ಕಿತ್ತು ಮುಸ್ಲಿಮರಿಗೆ ಕೊಡಲು ಮುಂದಾಗಿದ್ದಾರೆ. ಕಾಂಗ್ರೆಸಿಗೆ ಮುಸ್ಲಿಮರ ಮೇಲೆ ವಿಶೇಷ ಪ್ರೀತಿ. ಇದಕ್ಕಾಗಿ ಕಾಂಗ್ರೆಸ್ ಸರಕಾರ ಹಿಂದುಗಳ ಹತ್ಯೆ, ಬಾಂಬ್ ಸ್ಫೋಟದ ಬಗ್ಗೆ ತನಿಖೆ ಮಾಡಲ್ಲ. ಕಾಂಗ್ರೆಸ್ ಸರಕಾರ ಇರುತ್ತಿದ್ದರೆ ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣವೇ ಹಳ್ಳ ಹಿಡೀತಿತ್ತು. ತುಷ್ಟೀಕರಣಕ್ಕಾಗಿ ಇಂತಹ ಪ್ರಕರಣಗಳನ್ನು ಹಳ್ಳ ಹಿಡಿಸುವ ಕೆಲಸ ಆಗ್ತಾ ಇದೆ.

BJP, JD(S) attack Siddaramaiah over remarks to raise grants for Muslim  community | Latest News India - Hindustan Times

ಸಿದ್ದರಾಮಯ್ಯ ಪ್ರತಿ ಬಾರಿ ತೆರಿಗೆ ಪಾಲಿನ ಬಗ್ಗೆ ಕೇಳುತ್ತಿದ್ದಾರೆ. ಹಿಂದೆ ಯುಪಿಎ ಸರಕಾರ ಇದ್ದಾಗ ಹತ್ತು ವರ್ಷಗಳಲ್ಲಿ ರಾಜ್ಯಕ್ಕೆ ಬಂದಿದ್ದು 80 ಸಾವಿರ ಕೋಟಿ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರ 2.80 ಲಕ್ಷ ಕೋಟಿ ರೂ. ಅನುದಾನ ನೀಡಿದೆ. ಹಾಗಾಗಿ ಮೋದಿಯವರು ಕರ್ನಾಟಕ ಸರಕಾರಕ್ಕೆ ಅಕ್ಷಯ ಪಾತ್ರೆಯನ್ನೇ ಕೊಟ್ಟಿದ್ದಾರೆ. ಕಾಂಗ್ರೆಸ್ ಮಾತ್ರ ರಾಜ್ಯದ ಜನರಿಗೆ ಚೊಂಬು ಕೊಡುತ್ತಿದ್ದಾರೆ. ರಾಜ್ಯಕ್ಕೆ ಬಾಂಬ್ ಕೊಡುಗೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಯಿಂದಾಗಿ ಕಾಂಗ್ರೆಸ್ ಸರಕಾರ ದಿವಾಳಿ ಆಗುತ್ತಿದ್ದು, ಇನ್ನೆರಡು ವರ್ಷದಲ್ಲಿ ಏನೂ ಇಲ್ಲದೆ ಕಂಗಾಲಾಗುವ ಸ್ಥಿತಿಯಾಗಲಿದೆ. ಕಳೆದ 33 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಸಂಸದರಿಂದಾಗಿ ಬಹಳಷ್ಟು ಅಭಿವೃದ್ಧಿಯಾಗಿದ್ದು, ಅಭಿವೃದ್ಧಿಯ ದಾಪುಗಾಲು ಮುಂದುವರಿಯಲು ಬಿಜೆಪಿ ಸಂಸದರೇ ಆಯ್ಕೆಯಾಗಬೇಕಿದೆ ಎಂದು ಹೇಳಿದರು.

Congress to get Chombu this loksabha Elections slams Nalin Kateel in Mangalore. Referring to the Lok Sabha elections, Mr. Kateel alleged that the Congress has entered into an internal pact with the Social Democratic Party of India (SDPI), the political wing of the banned Popular Front of India to face the elections together as the SDPI is not contesting the elections this time.