Congress Padmaraj Mangalore: ಬಂಟ್ವಾಳ ತಾಲೂಕಿನ ವಿವಿಧೆಡೆ ಕಾಂಗ್ರೆಸ್ ನಾಯಕರ ಬಿರುಸಿನ ಪ್ರಚಾರ ; ಗೆಲುವು ಖಚಿತ ಎಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ 

23-04-24 12:48 pm       Mangalore Correspondent   ಕರಾವಳಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ  ಬಂಟ್ವಾಳ ವಿಧಾನಸಭಾ ವ್ಯಾಪ್ತಿಯ ವಿವಿಧೆಡೆ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದಾರೆ. 

ಬಂಟ್ವಾಳ, ಎ.23: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ  ಬಂಟ್ವಾಳ ವಿಧಾನಸಭಾ ವ್ಯಾಪ್ತಿಯ ವಿವಿಧೆಡೆ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದಾರೆ. 

ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಪ್ರಮುಖರು ಅಲ್ಲಿಪಾದೆ, ನಾವೂರು, ಅಮ್ಟಾಡಿ, ಮೂಲರಪಟ್ಣ, ಕರ್ಪೆ ಶ್ರೀ ರಾಮಾಂಜನೇಯ ಭಜನಾ ಮಂದಿರ, ಸಿದ್ಧಕಟ್ಟೆ, ರಾಯಿ, ಪಂಜಿಕಲ್ಲು, ಕುಕ್ಕಿಪ್ಪಾಡಿ, ಬಸ್ತಿಕೋಡಿ, ಇರ್ವತ್ತೂರು ಪದವು, ಕಾವಲ್ ಕಟ್ಟೆ, ವಗ್ಗ ಮೊದಲಾದ ಪ್ರದೇಶಗಳ ಮತದಾರ, ಕಾರ್ಯಕರ್ತರ ಬಳಿಗೆ ತೆರಳಿ ಮತಯಾಚನೆ ಮಾಡಿದರು.

ಪದ್ಮರಾಜ್ ಮಾತನಾಡಿ, ದ್ವೇಷದ ರಾಜಕಾರಣ ನಾವೆಂದೂ ಮಾಡಿಲ್ಲ. ಅದರ ಅಗತ್ಯವೂ ನಮಗಿಲ್ಲ. ಕಾಂಗ್ರೆಸ್ ಸರಕಾರದ ಸಾಧನೆ ಹಾಗೂ ನಾವು ಅಭಿವೃದ್ಧಿ ದೃಷ್ಟಿಯಿಂದ ಹಾಕಿಕೊಂಡಿರುವ ಯೋಜನೆಗಳನ್ನು ಜನರಿಗೆ ತಿಳಿಸಿ. ಖಂಡಿತವಾಗಿಯೂ ಜಿಲ್ಲೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಸಾಮರಸ್ಯದ ಗತವೈಭವ ಮರಳಿ ಬರಲಿದೆ ಎಂದರು.

ವರದಿಗಳ ಪ್ರಕಾರವೂ ಕಾಂಗ್ರೆಸ್ ಗೆಲುವು ಖಾತ್ರಿಯಾಗಿದೆ. ಹಾಗೆಂದು ನಾವು ಜಾಗೃತರಾಗಿ ಇರಬೇಕಾಗಿದೆ. ಎದುರಾಳಿ ಪಕ್ಷದವರು ಗೆಲುವಿಗಾಗಿ ಅಪಪ್ರಚಾರದ ಹಾದಿ ಹಿಡಿಯುತ್ತಿದ್ದಾರೆ‌. ಮನೆ ಮನೆಗೆ ತೆರಳಿ ಗ್ರಂಥ, ತಾಳಿ ಹಿಡಿದು ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ತಾಳ್ಮೆಯಿಂದ ಸವಾಲನ್ನು ಎದುರಿಸಲು ಸಿದ್ಧರಾಗೋಣ. ಮುಂದಿನ ಎರಡು, ಮೂರು ದಿನ ಎಚ್ಚರಿಕೆಯಿಂದ ಕಾರ್ಯೋನ್ಮುಖರಾಗಬೇಕಾಗಿದೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುಧೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಪ್ರಚಾರ ಸಮಿತಿಯ ಪಿಯೂಷ್ ರೋಡ್ರಿಗಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲವೀನಾ ಮೋರಸ್, ಪಾಣೆಮಂಗಳೂರು ವಲಯ ಅಧ್ಯಕ್ಷೆ ಜಯಂತಿ ಪೂಜಾರಿ, ಸುದರ್ಶನ್ ಜೈನ್, ಬಂಟ್ವಾಳ ಬ್ಲಾಕ್ ಪ್ರಚಾರ ಸಮಿತಿಯ ಜಗದೀಶ್ ಕೊಯಿಲ, ಮಾಯಿಲಪ್ಪ ಸಾಲ್ಯಾನ್, ಕೈಲಾರ್ ಇಬ್ರಾಹಿಂ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಮಧುಸೂಧನ್ ಶೆಣೈ, ಸಂಜೀವ ಗೌಡ, ಚೆನ್ನಪ್ಪ ಸಾಲ್ಯಾನ್, ಅಬ್ದುಲ್ ರಹಿಮಾನ್, ಪರಮೇಶ್ವರ್ ನಾಯಕ್, ಜಯಂತ್, ಮಲ್ಲಿಕಾ ವಿ. ಪೂಜಾರಿ, ಸಂಜೀವ ಪೂಜಾರಿ, ನಾವೂರು ವಲಯ ಅಧ್ಯಕ್ಷ ವಿಜಯ, ಉಮೇಶ್ ಕುಲಾಲ್, ಸುರೇಶ್ ಕುಲಾಲ್, ಅಶ್ವನಿ ಕುಮಾರ್, ಕರ್ಪೆ ಶ್ರೀ ರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ರಮೇಶ್, ಉಸ್ತುವಾರಿ ಶಶಿಧರ್ ಪ್ರಭು, ಉಪಾಧ್ಯಕ್ಷ ರಮೇಶ್, ದಯಾನಂದ ಗೌಡ, ಪ್ರಕಾಶ್ ಜೈನ್, ವಿಕ್ಟರ್, ದಿನೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಕೃಷ್ಣಪ್ಪ ಕುಲಾಲ್, ವಿಶ್ವನಾಥ ಶೆಟ್ಟಿ, ದೇವಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Congress candidate Padmaraj campaigns at Bantwal in Mangalore. Congress Lok Sabha candidate for Dakshina Kannada constituency visited various places in Bantwal on Tuesday.