Ayodhya Ram temple, MLC Manjunath Bhandari: ಅಯೋಧ್ಯೆ ರಾಮಮಂದಿರ ಅಲ್ಲ, ಚುನಾವಣಾ ಮಂದಿರ ಮಾಡಿದ್ದಾರೆ, ಇವರು ಅಭಿವೃದ್ಧಿ ಕೆಲಸ ಹೇಳಿ ಮತ ಕೇಳುತ್ತಿಲ್ಲ, ರಾಮನಿಗಾಗಿ ಓಟು ಕೇಳುತ್ತಿದ್ದಾರೆ ; ಮಂಜುನಾಥ ಭಂಡಾರಿ 

23-04-24 03:18 pm       Mangalore Correspondent   ಕರಾವಳಿ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ರಾಮನ ಹೆಸರಿನಲ್ಲಿ , ರಾಮ ಮಂದಿರದ ವಿಚಾರದಲ್ಲಿ ಮತ ಕೇಳುತ್ತಿದ್ದಾರೆ. ರಾಮ ಮಂದಿರ ಇನ್ನೂ ಪರಿಪೂರ್ಣ ಆಗಿಲ್ಲ.‌ ಅದು ರಾಮ ಮಂದಿರ ಅಲ್ಲ, ಅದನ್ನು  ಚುನಾವಣಾ ಮಂದಿರ ಮಾಡಿದ್ದಾರೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ. ‌

ಮಂಗಳೂರು, ಎ.23: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ರಾಮನ ಹೆಸರಿನಲ್ಲಿ , ರಾಮ ಮಂದಿರದ ವಿಚಾರದಲ್ಲಿ ಮತ ಕೇಳುತ್ತಿದ್ದಾರೆ. ರಾಮ ಮಂದಿರ ಇನ್ನೂ ಪರಿಪೂರ್ಣ ಆಗಿಲ್ಲ.‌ ಅದು ರಾಮ ಮಂದಿರ ಅಲ್ಲ, ಅದನ್ನು  ಚುನಾವಣಾ ಮಂದಿರ ಮಾಡಿದ್ದಾರೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ. ‌

ಬಿಜೆಪಿ ಅಭಿವೃದ್ಧಿಗೆ ಮತ ಕೊಡಿ ಅಂತ ಹೇಳುತ್ತಿಲ್ಲ. ರಾಮನಿಗಾಗಿ ಮತ ಕೊಡಿ ಅಂತ ಭಾವನಾತ್ಮಕವಾಗಿ ಮತ ಕೇಳುತ್ತಿದೆ. ಈ ಬಾರಿಯ ಚುನಾವಣೆ ಬದುಕು ಹಾಗೂ ಭಾವನೆ ನಡುವಿನ ಚುನಾವಣೆ. ಕಾಂಗ್ರೆಸ್ ಬದುಕು ಕಟ್ಟಿಕೊಳ್ಳುವ ಕಾರ್ಯಕ್ರಮ ಹಾಕಿಕೊಳ್ಳುತ್ತದೆ. ಬಿಜೆಪಿ ಭಾವನೆಯನ್ನು ಮುಂದಿಟ್ಟು ಮತ ಕೇಳುತ್ತಿದೆ. 

ಸ್ವಾತಂತ್ರ್ಯ ಬಳಿಕ ಯಾವ ಪ್ರಧಾನಿಯೂ ಹೇಳದ ಮಾತುಗಳನ್ನು ಪ್ರಧಾನಿ ಹೇಳುತ್ತಿದ್ದಾರೆ. ಒಬ್ಬ ಶಾಸಕರು ಇದು ದೇಶ ಪ್ರೀಮಿಗಳ ಹಾಗೂ ದೇಶದ್ರೋಹಿಗಳ ನಡುವಿನ ಚುನಾವಣೆ ಅಂತ ಹೇಳುತ್ತಾರೆ. ಬಿಜೆಪಿಯವರು ಹತಾಶರಾಗಿ ಈ ರೀತಿ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು. 

Party says PM Modi only echoed public sentiment | India News - Times of  India

Ram Mandir - Wikipedia

ಮೋದಿಯವರಿಗೆ ದೇಶದ ಉದ್ದಗಲಕ್ಕೂ ಪ್ರಚಾರ ಮಾಡುವುದಕ್ಕಾಗಿಯೇ 3 ತಿಂಗಳ ಕಾಲ ಚುನಾವಣೆ ಇಟ್ಟಿದ್ದಾರೆ ಎಂದು ಹೇಳಿದ ಭಂಡಾರಿ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ 24  ಕ್ಷೇತ್ರದಲ್ಲಿ ಗೆಲ್ಲುತ್ತದೆ. ದ್ವೇಷದ ಭಾವನೆ ಬಿತ್ತುವ ಹಿಂದುತ್ವ ನಮಗೆ ಬೇಡ, ಹಿಂದುತ್ವದ ಪಾಠ ಬಿಜೆಪಿಯಿಂದ ಕಲಿಯಬೇಕಿಲ್ಲ ಎಂದರು.

In the Lok Sabha elections, the BJP is seeking votes in the name of Lord Ram and on the ram temple issue. The Ram temple is not yet complete. KPCC working president Manjunath Bhandari said in Mangaluru that it was not a Ram temple, it was made an election temple.