Udupi Adamaru swamiji: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 10 ವರ್ಷ ; ಪಕ್ಕದ ಮನೆಗೆ ಬಿದ್ದ ಬೆಂಕಿ ಎಂಬ ಅಸಡ್ಡೆ ಬೇಡ, ಜಾಗೃತರಾಗಿ ಓಟ್ ಹಾಕಿ, ದೇಶದಲ್ಲಿರೋದು ಒಂದೇ ಪಕ್ಷ, ಉಳಿದೆಲ್ಲ ಪಕ್ಷಪಾತ ; ಅದಮಾರು ಸ್ವಾಮೀಜಿ 

26-04-24 03:48 pm       Udupi Correspondent   ಕರಾವಳಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 10 ವರ್ಷವಾಯಿತು. ಬ್ರಿಟಿಷರು ಭಾರತ ಬಿಟ್ಟು 75 ವರ್ಷವಾಯಿತು. ಇದೇ ರೀತಿಯಲ್ಲಿ ಭಾರತ ಸದೃಢವಾಗಿ ಮುಂದುವರಿಯಬೇಕು. ದೇಶದಲ್ಲಿ ಇರುವುದು ಒಂದೇ ಪಕ್ಷ ಮತ್ತೆಲ್ಲವೂ ಪಕ್ಷಪಾತ. ಹೀಗೆಂದು ಅದಮಾರು ಮಠಾಧೀಶ ವಿಶ್ವಪ್ರೀಯ ತೀರ್ಥ ಸ್ವಾಮೀಜಿ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.‌

ಉಡುಪಿ, ಎ.2: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 10 ವರ್ಷವಾಯಿತು. ಬ್ರಿಟಿಷರು ಭಾರತ ಬಿಟ್ಟು 75 ವರ್ಷವಾಯಿತು. ಇದೇ ರೀತಿಯಲ್ಲಿ ಭಾರತ ಸದೃಢವಾಗಿ ಮುಂದುವರಿಯಬೇಕು. ದೇಶದಲ್ಲಿ ಇರುವುದು ಒಂದೇ ಪಕ್ಷ ಮತ್ತೆಲ್ಲವೂ ಪಕ್ಷಪಾತ. ಹೀಗೆಂದು ಅದಮಾರು ಮಠಾಧೀಶ ವಿಶ್ವಪ್ರೀಯ ತೀರ್ಥ ಸ್ವಾಮೀಜಿ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.‌

ನೆಮ್ಮದಿಯಾಗಿ ಬದುಕಬೇಕಾದವನು ಸಂಶಯ ರಹಿತವಾಗಿ ರಾಷ್ಟ್ರೀಯ ಪುಷ್ಪಕ್ಕೆ ಮತ ಹಾಕಬೇಕು. ಗೋದಾನ ಮಾಡು, ಭೂದಾನ ಮಾಡು ಪುಣ್ಯ ಬರುತ್ತದೆ ಅನ್ನುತ್ತಾರೆ. ಒಳ್ಳೆಯ ವ್ಯಕ್ತಿಗೆ ಮತ ಹಾಕು ತಕ್ಷಣ ಫಲಿತಾಂಶ ಸಿಗುತ್ತದೆ. ದೇಶ ಪ್ರಗತಿ ಆಗುವುದನ್ನು ಪ್ರತಿಯೊಬ್ಬರು ನೋಡುತ್ತಿದ್ದಾರೆ. 

ಹಿಂದೂ ಆದವನು ಹಿಂದುತ್ವ ಉಳಿಸಲು ಮೋದಿಯನ್ನೇ ಆರಿಸಬೇಕು. ಮನುಷ್ಯ ಜಾಡ್ಯ ಬಿಡಬೇಕು, ಮತದಾನ ಮಾಡಬೇಕು. ಪಕ್ಕದ ಮನೆಗೆ ಬಿದ್ದ ಬೆಂಕಿ ಎಂಬ ಅಸಡ್ಡೆ ಬೇಡ. ಎಲ್ಲರೂ ಜಾಗೃತರಾಗಬೇಕು, ಸಾಯಂಕಾಲದೊಳಗೆ ಮತದಾನ ಮಾಡಿ. ಈ ನೆಲದ ಗಾಳಿ ನೀರು ಬೆಂಕಿ ಉಪಯೋಗಿಸಿದವ ಯೋಗ್ಯ ವ್ಯಕ್ತಿಗೆ ಮತದಾನ ಮಾಡಲೇಬೇಕು. 

ಎಲ್ಲಾ ಲಾಭ ಪಡೆದು ಮತ ಹಾಕದವ ಋಣಿಯಾಗುತ್ತಾನೆ, ಋಣಿಗಿಂತ ದೊಡ್ಡದೋಷಿ ಮತ್ತೊಬ್ಬ ಇಲ್ಲ ಎಂದು ಅದಮಾರು ಮಠದ ಸ್ವಾಮೀಜಿ ಮತದಾನ ಪೂರೈಸಿದ ಬಳಿಕ ಹೇಳಿದ್ದಾರೆ.

Udupi Adamaru swamiji casts vote, says must vote without fail