Mangalore Live Voting: ದಕ್ಷಿಣ ಕನ್ನಡ ಕ್ಷೇತ್ರ ; ಬಿರು ಬಿಸಿಲು ಲೆಕ್ಕಿಸದೆ ಮತದಾನ, ಮಧ್ಯಾಹ್ನ 3 ಗಂಟೆ ವರೆಗೆ 58.65 ಶೇ. ಹಕ್ಕು ಚಲಾವಣೆ 

26-04-24 04:20 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ 58.65 ಶೇಕಡಾ ಮತದಾನ ದಾಖಲಾಗಿದೆ. ಬೆಳಗ್ಗಿನ ಅವಧಿಯಲ್ಲಿ ಅತಿ ಹೆಚ್ಚು ಜನರು ಮತದಾನ ಮಾಡಿದ್ದರು. ಮಧ್ಯಾಹ್ನ ಬಿರು ಬಿಸಿಲನ್ನೂ ಲೆಕ್ಕಿಸದೆ ಜನರು ಮತ ಚಲಾಯಿಸಿದ್ದಾರೆ. 

ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ 58.65 ಶೇಕಡಾ ಮತದಾನ ದಾಖಲಾಗಿದೆ. ಬೆಳಗ್ಗಿನ ಅವಧಿಯಲ್ಲಿ ಅತಿ ಹೆಚ್ಚು ಜನರು ಮತದಾನ ಮಾಡಿದ್ದರು. ಮಧ್ಯಾಹ್ನ ಬಿರು ಬಿಸಿಲನ್ನೂ ಲೆಕ್ಕಿಸದೆ ಜನರು ಮತ ಚಲಾಯಿಸಿದ್ದಾರೆ. 

ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ 61.41 ಶೇಕಡಾ, ಮೂಡುಬಿದ್ರೆ ಕ್ಷೇತ್ರದಲ್ಲಿ 54.95 ಶೇಕಡಾ, ಮಂಗಳೂರು ನಗರ ಉತ್ತರದಲ್ಲಿ 56.76 ಶೇಕಡಾ ಮತದಾನ ದಾಖಲಾಗಿದೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 51.05 ಶೇಕಡಾ, ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 58.72 ಶೇಕಡಾ, ಬಂಟ್ವಾಳ ಕ್ಷೇತ್ರದಲ್ಲಿ 61.17 ಶೇಕಡಾ, ಪುತ್ತೂರು ಕ್ಷೇತ್ರದಲ್ಲಿ 62, ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ 64.46 ಶೇಕಡಾ ಮತದಾನ ದಾಖಲಾಗಿದೆ.

ಮಧ್ಯಾಹ್ನ ಬಿರು ಬಿಸಿಲು ಇದ್ದರೂ ಗ್ರಾಮಾಂತರ ಪ್ರದೇಶದಲ್ಲಿ ಜನರ ಉತ್ಸಾಹ ತಗ್ಗಿಲ್ಲ. ಮಂಗಳೂರು ಭಾಗದಲ್ಲಿಯೇ ಪರ್ಸೆಂಟೇಜ್ ಕಡಿಮೆ ಇದೆ. ಬೆಳ್ಗಗೆ ಮತ್ತು ಸಂಜೆಯ ವೇಳೆಗೆ ಮತದಾನಕ್ಕೆ ಜನ ಉತ್ಸಾಹ ತೋರಿದ್ದು ಮತದಾನ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.‌

Live voting, DK Mangalore voter turnout of 58.65 percent by 3 pm. voter turnout in Dakshina Kannada (Beltangady 61.41%, Bantwal 61.17%, Puttur 62%, Mangaluru 58.72%, Sullia 64.46%, Moodbidiri 54.95%, Mangaluru North 56.76%, and Mangaluru South 51.05%) and 57.49% in Udupi (Karkala 59.48%, Kaup 60.24%, Kundapur 59.44%, Chikkamagaluru 52.37%, Mudigere 57.92%, Sringeri 58.64% and Tarikere 54.07% ) at 3 pm