Mangalore live voting percentage: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಸಂಜೆ 5 ಗಂಟೆಗೆ 71.83 ಶೇ. ಮತದಾನ ; ಮಂಗಳೂರು ಉತ್ತರ, ದಕ್ಷಿಣದಲ್ಲಿ ಮತದಾನ ಕಡಿಮೆ ದಾಖಲು 

26-04-24 05:56 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಸಂಜೆ ಐದು ಗಂಟೆ ವೇಳೆಗೆ ಒಟ್ಟಾರೆ 71.83 ಶೇಕಡಾ ಮತದಾನ ದಾಖಲಾಗಿದೆ.

ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಸಂಜೆ ಐದು ಗಂಟೆ ವೇಳೆಗೆ ಒಟ್ಟಾರೆ 71.83 ಶೇಕಡಾ ಮತದಾನ ದಾಖಲಾಗಿದೆ. 

ಸಂಜೆ ಆರು ಗಂಟೆಯ ವರೆಗೆ ಮತದಾನಕ್ಕೆ ಅವಕಾಶ ಇದೆ. ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ 75.59 ಶೇ., ಮೂಡುಬಿದ್ರೆ 68.62 ಶೇ., ಮಂಗಳೂರು ಉತ್ತರ 69.75 ಶೇ., ಮಂಗಳೂರು ದಕ್ಷಿಣ 61.81 ಶೇ., ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 73.45 ಶೇ.,ಬಂಟ್ವಾಳ 73.69 ಶೇ‌, ಪುತ್ತೂರು 75.2 ಶೇ., ಸುಳ್ಯ ಕ್ಷೇತ್ರದಲ್ಲಿ 78.35 ಶೇಕಡಾ ಮತದಾನ ಆಗಿದೆ. ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಕಡಿಮೆ ಮತದಾನ ದಾಖಲಾಗಿದೆ. ‌

ಜಿಲ್ಲಾಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಸಂಜೆ ಆರು ಗಂಟೆಯ ವೇಳೆಗೆ ಸರತಿ ಸಾಲಿನಲ್ಲಿ ನಿಂತವರಿಗೆ ಟೋಕನ್ ನೀಡಲಾಗುವುದು. ಆರು ಗಂಟೆಯ ಒಳಗೆ ಮತಗಟ್ಟೆಗೆ ಬಂದಿದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುವುದು. ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ. ‌

Mangalore DK voter turnout of 71.88 Percent by at 5 pm, live voting percentage.