Sullia Banjarumale, Voting: ಪಶ್ಚಿಮ ಘಟ್ಟಗಳ ನಡುವಿನ ಕುಗ್ರಾಮ ಬಾಂಜಾರುಮಲೆ ಮತಗಟ್ಟೆಯಲ್ಲಿ ಶೇ. ನೂರು ಮತದಾನ ; ಅಪರೂಪದ ಸಾಧನೆಗೆ ಜಿಲ್ಲಾಧಿಕಾರಿ ಬಹುಮಾನ 

26-04-24 10:45 pm       Mangalore Correspondent   ಕರಾವಳಿ

ಲೋಕಸಭೆ ಚುನಾವಣೆಯಲ್ಲಿ ಶೇ.100 ಮತದಾನ ಮಾಡುವ ಮೂಲಕ ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಹೊತ್ತ ಪಶ್ಚಿಮ ಘಟ್ಟದ ವ್ಯಾಪ್ತಿಯ ಬಾಂಜಾರುಮಲೆ ಮತಗಟ್ಟೆ ದಾಖಲೆ ‌ನಿರ್ಮಿಸಿದೆ.

ಮಂಗಳೂರು, ಎ.26: ಲೋಕಸಭೆ ಚುನಾವಣೆಯಲ್ಲಿ ಶೇ.100 ಮತದಾನ ಮಾಡುವ ಮೂಲಕ ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಹೊತ್ತ ಪಶ್ಚಿಮ ಘಟ್ಟದ ವ್ಯಾಪ್ತಿಯ ಬಾಂಜಾರುಮಲೆ ಮತಗಟ್ಟೆ ದಾಖಲೆ ‌ನಿರ್ಮಿಸಿದೆ.

ಬಾಂಜಾರುಮಲೆಯ ಮತಗಟ್ಟೆ ಸಂಖ್ಯೆ 86ರ ಸಮುದಾಯ ಭವನದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ. 2019 ರಲ್ಲಿ ಈ ಮತಗಟ್ಟೆಯಲ್ಲಿ ಒಬ್ಬರ ಗೈರಿನಿಂದಾಗಿ ಶೇ.99 ಮತದಾನವಾಗಿತ್ತು. ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀಪ್ ಸಮಿತಿ ಅಧ್ಯಕ್ಷ ವೈಜಣ್ಣ ಹಾಗೂ ತಂಡ ಶೇ.100 ಮತದಾನ ಮಾಡುವಂತೆ ಊರ ಜನರಲ್ಲಿ ಜಾಗೃತಿ ಮೂಡಿಸಿತ್ತು. ಇದರ ಪರಿಣಾಮ ಮೊಬೈಲ್ ನೆಟ್ ವರ್ಕ್, ರಸ್ತೆ, ಮೂಲಸೌಕರ್ಯವೇ ಇಲ್ಲದ ಪುಟ್ಟ ಗ್ರಾಮ ಇಡೀ ರಾಜ್ಯದಲ್ಲಿ ಮಾದರಿ ಎನ್ನುವ ಕೆಲಸ ಮಾಡಿದೆ.‌ 

ಶೇ.100 ಮತದಾನವಾದಲ್ಲಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿಶೇಷ ಬಹುಮಾನವನ್ನೂ ಘೋಷಿಸಿದ್ದರು. ಶೇ.100 ಮತದಾನದ ಹಿನ್ನೆಲೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೈಜಣ್ಣ ಸೇರಿದಂತೆ ಸಿಬಂದಿ ಊರಿನ ಮಂದಿಗೆ ಹೂವುಗಳನ್ನು ನೀಡಿ ಅಭಿನಂದಿಸಿದ್ದಾರೆ. 

ಮತದಾನ ಸಲುವಾಗಿ ಬಾಂಜಾರುಮಲೆಯ 40 ಕುಟುಂಬದ 111 ಮತದಾರರು ಒಂದೆಡೆ ಸೇರಿ ಮತದಾನವನ್ನು ಹಬ್ಬದ ರೀತಿ ಆಚರಿಸಿದ್ದಾರೆ.

Banjarumale, an interior hamlet in Belthangady taluk of Dakshina Kannada district, recorded 100 per cent voting in the Lok Sabha election on Friday. This hamlet has 111 voters and each one of them turned up at the only polling booth, completing voting two hours before polling ended at 6 pm.