loksabha elections 2024, Mangalore: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ; 2019 ಮತ್ತು 2024ರ ಚುನಾವಣೆ ಹೋಲಿಕೆ, ಚಲಾವಣೆಯಾದ ಮತಗಳೆಷ್ಟು? ಗೆಲುವಿನ ಲೆಕ್ಕಾಚಾರ, ಈ ಬಾರಿ 64 ಸಾವಿರ ಹೆಚ್ಚು ಮತ ಚಲಾವಣೆ 

27-04-24 09:43 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಾಗಿರುವ ಮತದಾನದ ಚಿತ್ರಣ ಹೊರಬಿದ್ದಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ, ಒಟ್ಟು 18,17,603 ಮತದಾರರ ಪೈಕಿ 14,09653 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಂಗಳೂರು, ಎ.27: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಾಗಿರುವ ಮತದಾನದ ಚಿತ್ರಣ ಹೊರಬಿದ್ದಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ, ಒಟ್ಟು 18,17,603 ಮತದಾರರ ಪೈಕಿ 14,09653 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಂತೆ, 77.56 ಶೇಕಡಾ ಮತದಾನ ಆಗಿದೆಯೆಂದು ಜಿಲ್ಲಾ ಚುನಾವಣಾ ಆಯೋಗ ಮಾಹಿತಿ ನೀಡಿದೆ. 2019ರ ಚುನಾವಣೆಗೆ ಹೋಲಿಸಿದರೆ, 64,614 ಮಂದಿ ಹೆಚ್ಚುವರಿ ಮತ ಚಲಾಯಿಸಿದ್ದಾರೆ. 2019ರಲ್ಲಿ 13,45,039 ಮಂದಿ ಮತ ಚಲಾಯಿಸಿದ್ದರು.

ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ 2,32,817 ಮತದಾರರಿದ್ದು, ಈ ಪೈಕಿ 1,89,289 ಮಂದಿ ಮತ ಚಲಾವಣೆ ಮಾಡಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಮತದಾನ ಪ್ರಮಾಣ 81.30 ಶೇಕಡಾ ಆಗಿದೆ. ಮೂಲ್ಕಿ-ಮೂಡುಬಿದ್ರೆ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 2,10,125 ಮತದಾರರಿದ್ದು 1,60,767 ಮತ ಚಲಾಯಿಸಿದ್ದಾರೆ. ಇದರಂತೆ, ಮೂಡುಬಿದ್ರೆ ಕ್ಷೇತ್ರದಲ್ಲಿ 76.51 ಶೇಕಡಾ ಮತದಾನ ಆಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ 2,55,946 ಮತದಾರರಿದ್ದು, ಈ ಪೈಕಿ 1,88,825 ಮಂದಿ ಮತ ಚಲಾಯಿಸಿದ್ದಾರೆ. ಇಲ್ಲಿ 73.78 ಶೇಕಡಾ ಮತದಾನ ಆಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2,52,583 ಮತದಾರರಿದ್ದು, 1,69,669 ಮಂದಿ ಹಕ್ಕು ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ 67.17 ಶೇಕಡಾ ಮತದಾನವಾಗಿದೆ. ಮಂಗಳೂರು (ಉಳ್ಳಾಲ) ವಿಧಾನಸಭೆ ಕ್ಷೇತ್ರದಲ್ಲಿ 2,10,093 ಮತದಾರರಿದ್ದು, 1,64,637 ಮತ ಚಲಾವಣೆ ಆಗಿದೆ. ಈ ಪ್ರಕಾರ ಕ್ಷೇತ್ರದಲ್ಲಿ 78.36 ಶೇಕಡಾ ಮತದಾನವಾಗಿದೆ.

ಬಂಟ್ವಾಳ ವಿಧಾನಸಭೆ ಕ್ಷೇತ್ರದಲ್ಲಿ 2,30,511 ಮತದಾರರು ಇದ್ದು, 1,87,361 ಜನ ಮತ ಚಲಾವಣೆ ಮಾಡಿದ್ದಾರೆ. ಇಲ್ಲಿನ ಮತದಾನ ಪ್ರಮಾಣ 81.28 ಶೇಕಡಾ ಮತದಾನ ಆಗಿದೆ. ಪುತ್ತೂರು ಕ್ಷೇತ್ರದಲ್ಲಿ ಒಟ್ಟು 2,16,675 ಮತದಾರರಿದ್ದು 1,75,731 ಜನರು ಮತ ಚಲಾವಣೆ ಮಾಡಿದ್ದಾರೆ. ಪುತ್ತೂರಿನಲ್ಲಿ 81.10 ಶೇಕಡಾ ಮತದಾನ ಆಗಿದೆ. ಸುಳ್ಯ ವಿಧಾಸನಭೆ ಕ್ಷೇತ್ರದಲ್ಲಿ 2.08,853 ಮತದಾರರಿದ್ದು, ಈ ಪೈಕಿ 1,73,374 ಮಂದಿ ಮತ ಚಲಾಯಿಸಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು 83.01 ಶೇಕಡಾ ಮತದಾನ ಆಗಿದೆ.

SALIENT POINTS OF SPEECH BY BJP NATIONAL PRESIDENT, SHRI AMIT SHAH  ADDRESSING BJP NATIONAL COUNCIL AT SWAPNA NAGARI, KOZHIKODE (KERALA) |  भारतीय जनता पार्टी

2019ರಲ್ಲಿ ಬಿಜೆಪಿಗೆ 2.74 ಲಕ್ಷ ಲೀಡ್ ಸಿಕ್ಕಿತ್ತು

2019ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಒಟ್ಟು 17,24976 ಮತದಾರರು ಇದ್ದರು. ಚುನಾವಣೆಯಲ್ಲಿ 77.97 ಶೇಕಡಾ ಮತದಾನವಾಗಿದ್ದು, 13,45,039 ಮಂದಿ ಮತ ಚಲಾಯಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ನಳಿನ್ ಕುಮಾರ್ 774285 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 4,99,664 ಮತ ಗಳಿಸಿದ್ದರು. 2,74,621 ಮತಗಳ ಅಂತರದಿಂದ ಕಾಂಗ್ರೆಸ್ ಸೋಲು ಕಂಡಿತ್ತು. ಈ ಚುನಾವಣೆಯಲ್ಲಿ ಒಟ್ಟು 14 ಮಂದಿ ಕಣದಲ್ಲಿದ್ದರು. ನೋಟಾ ಪರವಾಗಿ 7380 ಮತಗಳು ಬಿದ್ದಿದ್ದವು. ಎಸ್ಡಿಪಿಐ ಅಭ್ಯರ್ಥಿ ಮೊಹಮ್ಮದ್ ಎಲ್ಯಾಸ್ 46,839 ಮತಗಳನ್ನು ಪಡೆದಿದ್ದರು.

2014ರ ಚುನಾವಣೆಯಲ್ಲಿ ಸಿಕ್ಕ ಮತಗಳೆಷ್ಟು?

2014ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಒಟ್ಟು 15,65,219 ಮತಗಳಿದ್ದು ಆ ಪೈಕಿ 12,07474 ಮತಗಳು ಚಲಾವಣೆಯಾಗಿದ್ದವು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜನಾರ್ದನ ಪೂಜಾರಿ 4,99,030 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ನಳಿನ್ ಕುಮಾರ್ 6,42,739 ಮತ ಗಳಿಸಿದ್ದರು. ಈ ಚುನಾವಣೆಯಲ್ಲಿ ಒಟ್ಟು 15 ಮಂದಿ ಕಣದಲ್ಲಿದ್ದರು. ಎಸ್ಡಿಪಿಐ ಅಭ್ಯರ್ಥಿ ಹನೀಫ್ ಖಾನ್ ಕೋಡಾಜೆ ಪರ 27254 ಮತಗಳು ಬಿದ್ದಿದ್ದವು. ಸಿಪಿಎಂ ಅಭ್ಯರ್ಥಿ ಕೆ.ಯಾದವ ಶೆಟ್ಟಿ 9394 ಮತ ಗಳಿಸಿದ್ದರೆ. ನೋಟಾ ಪರವಾಗಿ 7109 ಮತಗಳು ಬಿದ್ದಿದ್ದವು.

Saffron's invincibility is withering to the relief of majority of  citizens,” SDPI expresses satisfaction over BJP's defeat in by-polls –  TwoCircles.net

ಈ ಬಾರಿ ಕಾಂಗ್ರೆಸಿಗೆ ಎಸ್ಡಿಪಿಐ ಬಲ

2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 9 ಮಂದಿ ಕಣದಲ್ಲಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ಏರ್ಪಟ್ಟಿದ್ದರೂ, ನೋಟಾ ಪರವಾಗಿ ನಡೆದ ಅಭಿಯಾನ ಒಂದಷ್ಟು ಬಿಜೆಪಿ ಮತಗಳನ್ನು ಕೀಳಬಹುದೆಂಬ ಅಂದಾಜಿದೆ. ದಕ್ಷಿಣ ಕನ್ನಡ ಕ್ಷೇತ್ರ ಬಹುತೇಕ ಬಿಜೆಪಿ ಭದ್ರಕೋಟೆ ಎಂದೇ ಹೇಳಲಾಗುತ್ತಿರುವುದರಿಂದ ಗೆಲುವು ಬಿಜೆಪಿಯದ್ದೇ ಎನ್ನುವ ಮಾತು ಮೇಲ್ನೋಟಕ್ಕೆ ಕೇಳಿಬರುತ್ತಿದೆ. ಆದರೆ, ಕಾಂಗ್ರೆಸಿಗರು ಈ ಬಾರಿ ತಮ್ಮದೇ ಗೆಲುವು ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಎಸ್ಡಿಪಿಐ ಸ್ಪರ್ಧೆ ಮಾಡದೇ ಕಾಂಗ್ರೆಸಿಗೆ ಬೆಂಬಲ ನೀಡಿರುವುದರಿಂದ ಕುತೂಹಲ ಉಂಟಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಉಳ್ಳಾಲ ಮತ್ತು ಬಂಟ್ವಾಳಲ್ಲಿ ಅತಿ ಹೆಚ್ಚು ಮತದಾನ ಆಗಿದೆ. ಇದೇ ರೀತಿ ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಅತಿ ಹೆಚ್ಚು ಓಟಿಂಗ್ ಆಗಿರುವುದು ಬಿಜೆಪಿಗೆ ವರವಾಗಬಹುದು ಎನ್ನಲಾಗುತ್ತಿದೆ.

14 lakhs people cast their votes in Dakshina Kannada out of 18 lakhs voters in Mangalore in loksabha elections 2024 which has been released by the election commission of India. South and North countituency in DK has seen less number is votes.